Sunday, June 13, 2010

ಮ್ಯಾಂಗೋ ಪಾರ್ಟಿ












ಬಾದಾಮಿ, ಮಲಗೋಬ, ರಸಪುರಿ, ಸೇನ್ದೂರ, ನೀಲಂ, ಮಲ್ಲಿಕಾ, ತೋತಾಪುರಿ, ....ಅದೂ-ಇದೂ...,ಯಾವುದು ಬೇಕು,ಎಷ್ಟು ಬೇಕು, ಅಷ್ಟೂ ತಿನ್ನೋ ಸ್ವಾತಂತ್ರ್ಯಯಿದ್ದದ್ದು ಭಾನುವಾರ ರಂಗಶಂಕರದಲ್ಲಿ. ನಾಟಕ ತಂಡಗಳ ನೆಚ್ಚಿನ ತಾಣದಲ್ಲಿ ಹೊಸಲೋಕವೇ ಸೃಷ್ಟಿಯಾಗಿತ್ತು, ಅದೇ ಮಾವಿನ ಮಾಯಾ ಲೋಕ. ಇಲ್ಲಿ ತಿನ್ನೋಕೆ ಕೊಡಬೇಕಾಗಿಲ್ಲ ಕಾಸು ಆದರೆ, ಬರುವಾಗ ಹಿಡಿದು ತಂದರೆ ಸಾಕು ಒಂದು ಕಿ.ಲೋ. ಮಾವಿನ ಸರಕು. ತಂದ ಹಣ್ಣನ್ನು ಊರಗಲ ಬಾಯಿ ತೆರೆದ ಬಟ್ಟಲಲ್ಲಿ ಮುಳುಗಿಸೋದು ಅಷ್ಟೇ..! ಆನಂತರ ನೀವು ತಂದದ್ದು ಅದ್ಯಾರ ಚಪ್ಪರಿಸುವ ಬಾಯಲ್ಲೋ, ಅವರದು ಇನ್ಯಾರ ಹೊಟ್ಟೆಯಲ್ಲೋ ಹೀಗೆ..ಮನಸೋಯಿಚ್ಚೆ ಸಿಹಿ-ಹುಳಿ ಮಿಶ್ರಣದ ಆಸ್ವಾದವನ್ನು ಅನುಭವಿಸಿದ ಹಿರಿ-ಕಿರಿ ಬಾಯಿಗಳು.

ನೆರೆದಿದ್ದ ರಂಗಭೂಮಿಯ ಕಲಾವಿದರ ದ೦ಡಿಗಿ೦ತ ಪ್ರಮುಖ ಆಕರ್ಷಣೆ ಎನಿಸಿದ್ದು ಪುಟಾಣಿಗಳ ಕಿಲಕಿಲ ನಗು, ಓಡಾಟ, ಕೈಗಿಂತ ದೊಡ್ಡ ಹಣ್ಣನ್ನು ಹಿಡಿದು ಓಡುತಿದ್ದದ್ದು..ಇವನ್ನೆಲ್ಲಾ ನೋಡಿಯೇ ಅನುಭವಿಸಬೇಕು. ಯಾರೂ
ದೊಡ್ಡಸ್ತಿಕೆ ತೋರದೆ ಎಲ್ಲರೊಂದಿಗೊಂದಾಗಿ ರಸವನ್ನ ಸೊರ್ರೆಂದು ಸೆಳೆದುಕೊಂಡದ್ದು ನೆನಪಿನಂಗಳದಲ್ಲಿ ಉಳಿಯುತ್ತದೆ. ಯುವಕರ ಹಾಗೂ ಮಕ್ಕಳ ಗುಂಪು ಈ ಕೂಟಕ್ಕೆ ಮೆರುಗನ್ನು ನೀಡಿತು, ಯುವಕರು ಸ್ನೇಹಿತರನ್ನ ಹುಡುಕುತ್ತ ಗುಂಪಾಗಿ ಸೇರಿ ಅಣಗಿಸುತ್ತಾ, ಫೋಟೋತಗಿಯುತ್ತ ತಮ್ಮ ಬಾಲ್ಯದ ನೆನಪಿಗೆ ಜಾರಿದರೆ, ಚಿಂಟಾರಿಗಳು ದೊಡ್ಡವರ ಮಾತುಗಳನ್ನು ಆಲಿಸುತ್ತ, ಹೇಳಿಕೊಟ್ಟ ಹಾಡನ್ನು ಹಾಡುತ್ತ ಕುಪ್ಪಳಿಸಿದರು. ಅಷ್ಟೇ ಅಲ್ಲದೆ ಮಕ್ಕಳಿಗಾಗೆ ಅನೇಕ ಸ್ಪರ್ದೆಗಲಿದ್ದವು ವಿವಿಧ ಮಾವಿನ ಹೆಸರನ್ನು ಹೇಳೋದು, ಕತ್ತರಿಸಿದ ಹಣ್ಣನ್ನು ದಾರಕ್ಕೆ ಕಟ್ಟಿ ಜೊತೆಗೆ ತಮ್ಮ ಕೈಗಳನ್ನು ಹಿಂದೆ ಕಟ್ಟಿ ನಿಮಿಷದಲ್ಲಿ ತಿಂದು ಮುಗಿಸೋದು, ಮಾವಿನ ಬಗ್ಗೆ ರಸಪ್ರಶ್ನೆ, ಅಲ್ಲೇ ಸೃಷ್ಟಿ ಮಾಡುತ್ತಿದ್ದ ಮಾವಿನ ಕತೆಗಳು, ಹಾಡುಗಳು ಎಲ್ಲರನ್ನು ನಗೆಯ ಕಡಲಿನಲ್ಲಿ ತೇಲಿಸಿದ್ದವು. ಸುಮಾರು ನಾಲ್ಕು ವರ್ಷಗಳಿಂದ ರಂಗಶಂಕರದಲ್ಲಿ ಈ ಪಾರ್ಟಿ ನಡೆಯುತ್ತ ಬಂದಿದೆ. ಅರುಂದತಿ ನಾಗ್, ಗಿರೀಶ್ ಕಾರ್ನಾಡ್, ನಾಗಾಭರಣ, ಎಂ.ಡಿ.ಪಲ್ಲವಿ, ಹೀಗೆ ಅನೇಕರು ಮ್ಯಾಂಗೋ ಪಾರ್ಟಿಗೆ ಸಾಕ್ಷಿಯಾದರು.

ಅಂತು ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಹೊಸ ಅನುಭವದ ಬುತ್ತಿ.

0 Comments:

Post a Comment