Monday, June 7, 2010

"ಸನ್ಯಾಸಿ ಮೇಲೆ ಶೂಟೌಟ್"
'ಶಾಂತಿದೂತ ಗಾಂಧೀ ತಾತ' ಬಲಿಯಾದದ್ದು ಒಂದು ಸಣ್ಣ ಗುಂಡಿಗೆ, ಬ್ರಿಟೀಷರ ಬುಲೆಟ್ಟಿಗೆ ಎದೆಯೊಡ್ಡಿದ್ದಾ ಭಾರತೀಯರ ನೆತ್ತರು ಹರಿದದ್ದು ಈಗ ಇತಿಹಾಸ. ಜಗತ್ತಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಲೆಯೊಂದನ್ನು ಎಬ್ಬಿಸಿದ
ಧೀರ ಸ್ವಾಮಿ ವಿವೇಕಾನಂದ, ಇದನ್ನೇ ಆಧಾರವಾಗಿರಿಸಿಕೊಂಡು 'ಹೆಸರು ಅವರದು, ಬಸರು ನನ್ನದೂ..' ಅನ್ನೋ ಹಾಗೇ ಅಮೇರಿಕಾದವರೆಗೂ ಹಾರಿ ಬಂದಿರೋರು ಅದೆಷ್ಟೋ. ಅಲ್ಲಿ ಇವರುಗಳು ಮಾಡಿದ್ದಾದರೂ ಏನೋ..? ಅದೆಲ್ಲಾ ಗೋಪ್ಯವಾದ ವಿಚಾರಗಳೂ! ಈಗ ನಾನೂ ಯಾರಿಗೇನೂ ಕಮ್ಮಿಯಿಲ್ಲಾಂತ ದೇಶ-ವಿದೇಶಗಳನ್ನು ಸುತ್ತುತ್ತಾ ಬಂದು ತನ್ನನ್ನು ತಾನು 'ಅಹಿಂಸಾವಾದಿ, ಆಧ್ಯಾತ್ಮಿಕ ಅನಂತ ಚೇತನ, ಬಡವರ ಬಂಧು...' ಎಂದು ಬಣ್ಣಿಸಿಕೊಳ್ಳುತ್ತಾ ನಕ್ಸಲರಿಂದ ಹಿಡಿದೂ ಉಗ್ರರವರೆಗೂ ಎಲ್ಲಾ ಹಿಂಸಾತ್ಮಕರನ್ನೂ ತನ್ನ ಸುಮಧುರ ಶಾರೀರಿಕ ವಾಣಿಯಿಂದ ಬಂಧಿಸಿ ಕರೆತರುವುದಾಗಿ ಅಲೆದಾಡಿ ಮುಖಭಂಗವಾದ ನಂತರ ಮತ್ತೆ ಮಾಧ್ಯಮಗಳಲ್ಲಿ ಸುದ್ಧಿಯ ಸರಕಾಗಿರುವ 'ಜೀವನ ಕಲೆಯ ಜನ್ಮದಾತನೆಂದೇ ನಂಬಿರುವ ಶ್ರೀ ಶ್ರೀ.ರವಿಶಂಕರ್ ಗುರೂಜಿಯ ಭವ್ಯ ಕುಟೀರದಲ್ಲಿ ನಡೆದಿದೆ ಶೂಟೌಟ್.

*ನಡೆದದ್ದೇನು...?
ಐ.ಟಿ.-ಬಿ.ಟಿಗಳ ಪರಿಣಾಮ ರಜಾದಿನಗಳಲ್ಲಿ ಎಲ್ಲಾಕಡೆಯಲ್ಲೂ ರಷ್, ಸ್ಟ್ರೆಸ್ ರಿಲೀಸ್ಗೆ ದಾರಿತೋರುವ ಆಶ್ರಮಗಳೂ ಇದರ ಹೊರತಾಗಿಲ್ಲಾ. ಇದಕ್ಕೆ ಆಧಾರವೆಂಬಂತೆ ಕನಕಪುರ ರಸ್ತೆಯಲ್ಲಿ ನಿರ್ಮಾಣಗೊಂಡಿರುವ 'ಆರ್ಟ್ ಆಫ್ ಲಿವಿಂಗ್'(ಎ.ಎಲ್.ಓ)ನಲ್ಲಿ ಮೇ 30, ಭಾನುವಾರದಂದು ಶ್ರೀಶ್ರೀ.ರವಿಶಂಕರ್ ಗುರೂಜಿ ನಡೆಸುವ ಸತ್ಸಂಗ ಕಾರ್ಯಕ್ರಮದಲ್ಲಿ ಜಾತ್ರೆಯಂತೆ ಸೇರಿದ್ದ ಜನಜಂಗುಳಿಯ ಸಂಖ್ಯೆ ಸುಮಾರು ಎಂಟು ಸಾವಿರ. ಶ್ರೀಗಳು ಆರುಗಂಟೆಯ ಸಮಯದಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಾರು ಹತ್ತಿದ ಸಂದರ್ಭದಲ್ಲಿ ಸ್ಫೋಟಕ ಶಬ್ದವೊಂದು ಕೇಳಿ ಬಂದಿದೆ. ಅಷ್ಟಾಗಿ ತಲೆಕೆಡಿಸಿಕೊಳ್ಳದ ಭಕ್ತಾದಿಗಳು ಯಜ್ಞ ಶಾಲೆಯ ಬಳಿ ಹೊರಡುವ ತರಾತುರಿಯಲ್ಲಿದ್ದಾಗ ಚಪ್ಪಲಿ ಬಿಡುವ ಸ್ಥಳದ ಬಳಿ ವಿನಯ್ ಕೊಲ್ಲೂಮಠ್ರ ಎಡ ತೊಡೆಗೆ ಏನೋ ತಾಕಿದ ಅನುಭವವಾಗಿದೆ, ಅದೇನೆಂದು ನೋಡಿದಾಗ ತಮ್ಮ ಪ್ಯಾಂಟಿನಲ್ಲಿ ಒಂದು ರಂಧ್ರವಾಗಿದ್ದನ್ನು ಹಾಗೂ ತೊಡೆಯ ಚರ್ಮದ ಸಣ್ಣ ಭಾಗದಲ್ಲಿ ತರಚಿದಂತೆ ಆಗಿರುವುದನ್ನು ಕಂಡು ಸುತ್ತಾ-ಮುತ್ತಾ ಹುಡುಕಾಡಿದಾಗ ಅವರಿಗೆ ಸಿಕ್ಕಿದ್ದು ಒಂದು ಬುಲೆಟ್. ಈ ಘಟನೆ ನಡೆದಾಗ ಸಮಯ ಸಂಜೆ 6:05. ಆಶ್ರಮದ ಸಿಬ್ಬಂದಿಗೆ ಈ ವಿಷಯ ಮುಟ್ಟಿದರೂ ಅದರಲ್ಲಿ ಏನೂ ವಿಶೇಷವಿಲ್ಲದಂತೆ ವತರ್ಿಸಿದ್ದು ಅನುಮಾನದ ಹುತ್ತವನ್ನು ತೋಡುತ್ತಾ ಸಾಗುತ್ತದೆ. ಆನಂತರ ಸುಮಾರು ಮೂರು ಗಂಟೆಗಳ ಅಂತರದಲ್ಲಿ ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ಗಿರಿ ಗೋವಿಂದರಿಂದ ಈ ಮಾಹಿತಿ ಪೋಲೀಸರಿಗೆ ರವಾನೆಯಾಗಿದೆ. ಹತ್ತು ಗಂಟೆ ಸುಮಾರಿಗೆ ಆಗಮಿಸಿದ ಪೋಲೀಸ್ ಪಡೆ ಪ್ರಥಮ ತನಿಖೆ ನಡೆಸಿದ ಬಳಿಕ ವಿಧಿ-ವಿಜ್ಞಾನ ಇಲಾಖೆಯ ತಜ್ಞರಾದ ರವೀಂದ್ರ ಸ್ಥಳದಲ್ಲಿ ಪರಿಶೀಲಿಸಿದಾಗ ಗುಂಡು ಕಾರ್ಖಾನೆ ನಿರ್ಮಿತ 0.32ಮಿ.ಮಿ ಪಿಸ್ತೂಲ್ನಿಂದ ಹಾರಿದ್ದು ಹಾಗೂ ಸುಮಾರು ದೂರದಿಂದ ಅಂದರೆ 600 ರಿಂದ 700ಮೀಟರ್ ದೂರದಿಂದ ಮೇಲ್ಮುಕವಾಗಿ ಹಾರಿಬಂದಿರಬಹುದೆಂದು ಊಹಿಸಿದ್ದಾರೆ. ಅಂತೂ ತಲಘಟ್ಟಪುರ ಠಾಣೆಯಲ್ಲಿ 'ಭಾರತೀಯ ದಂಡ ಸಂಹಿತೆ 307ರ ಪ್ರಕಾರ ಕೊಲೆಯತ್ನ ಪ್ರಕರಣವನ್ನು 1959ರ ಶಸ್ತ್ರಾಸ್ತ್ರ ಕಾಯ್ದೆಯಡಿ' ದೂರು ದಾಖಲಿಸಲಾಗಿದೆ.

*ಸೇಲ್ಸ್ಮನ್ ಶ್ರೀಶ್ರೀ...ಆದದ್ದೂ..!
ತಮಿಳುನಾಡಿನ ಅಯ್ಯಂಗಾರಿ ಹುಡುಗ ಬೆಂಗಳೂರಿನ ಎಂ.ಇ.ಎಸ್. ಶಾಲೆಯಲ್ಲಿ ಹಾಗೂ ಸೆಂಟ್ ಜೋಸೆಫ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸಕ್ಕೆ ಸೇರಿದ್ದು ಜೆ.ಸಿ. ರಸ್ತೆಯಲ್ಲಿರುವ ಒಂದು ಆಟೋ ಮೊಬೈಲ್ ಬಿಡಿಭಾಗಗಳ ಅಂಗಡಿಯಲ್ಲಿ ಸೇಲ್ಸ್ಮನ್ನಾಗಿ. ಕೆಲ ವರ್ಷಗಳ ಬಳಿಕ ಅದ್ಯಾವ ಆಧ್ಯಾತ್ಮದ ಹುಳು ತಲೆಯಲ್ಲಿ ಹೊಕ್ಕಿತೋ, ಅಲ್ಲಿಗೇ ಕೆಲಸವನ್ನು ಬಿಟ್ಟು ಬೆಂಗಳೂರಿನಿಂದ ಹೃಷಿಕೇಶದ ದಾರಿಹಿಡಿದು ಹೊರಟವನಿಗೆ ''ಮಹರ್ಷಿ ಯೋಗಿಯ ಆಶ್ರಯ ದೊರೆತು, ಅನೇಕ ಧ್ಯಾನ ಕ್ರಿಯೆಗಳನ್ನು ಕಲಿತು ಅಲ್ಲೇ 'ಸಹಜ ಧ್ಯಾನ' ಶಿಕ್ಷಕನಾಗಿ ತನ್ನ ಕಾರ್ಯಾರಂಭಿಸಿದ . ಆದರೆ, ಹಲವು ವರ್ಷಗಳ ಸಮಯದಲ್ಲಿ ಕಾರಣಾಂತರಗಳಿಂದ 'ಮಹರ್ಷಿ ಯೋಗಿ' ಹಾಲೆಂಡಿಗೆ ದೌಡಾಯಿಸಿದರು. ಆಗ ಅಲ್ಲಿಂದ ಹಣದೊಂದಿಗೆ ಬೆಂಗಳೂರಿಗೆ ವಾಪಸ್ಸಾದ ರವಿಶಂಕರ್ 1983ರಲ್ಲಿ ವೇದ ಶಾಲೆಯನ್ನು ಆರಂಭಿಸಿಸಲು ಸ್ಥಳಬೇಕು ಹಾಗಾಗಿ ಲೀಸಿಗಾಗಿ ಜಮೀನು ನೀಡಬೇಕೆಂದು 'ಹೆಗಡೆ' ಸಕರ್ಾರವನ್ನು ಒತ್ತಾಯಿಸಿದಾಗ ಕನಕಪುರ ರಸ್ತೆಯ ಊದಿಪಾಳ್ಯದ ಗೋಮಾಳದ ಸರ್ವೇ ನಂ.46ರರ ಅರವತ್ತು ಎಕರೆ ಜಮೀನನ್ನು 30 ವರ್ಷಗಳ ಲೀಸಿಗೆ ಅನುಮತಿಕೊಟ್ಟಿತ್ತು. 1985ರಲ್ಲಿ ಆ ಜಾಗದಲ್ಲಿ ಒಂದು ಗಣೇಶ ದೇವಸ್ಥಾನ ಹಾಗೂ ಸಣ್ಣದೊಂದು ಕುಟೀರದೊಂದಿಗೆ ವೇದ, ಧ್ಯಾನಗಳ ತರಬೇತಿ ಆರಂಭಿಸಿ ಅಲ್ಲೇ ಭದ್ರ ಬುನಾದಿಯನ್ನು ಊರುವ ನಿರ್ಧಾರವನ್ನು ಮಾಡುತ್ತಾನೆ. ಮತ್ತೇ 1989-90ರ ದಶಕದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಹಸೀಲ್ದಾರ್ ದಿವಾಕರ್ ಸಹಾಯದಿಂದ ಊದಿಪಾಳ್ಯ, ಒಂಟಿಚೂಡ ಹಳ್ಳಿ, ಅಗರ ಪಂಚಾಯ್ತಿ, ಸಾಲಹುಣಸೆ, ಸಾಲದೊಡ್ಡಿಯ ಗ್ರಾಮಸ್ಥರಿಗೆ ಪುಡಿಗಾಸನ್ನು ಕೊಟ್ಟು ಅವರ ಜಮೀನನ್ನು ಕಬಳಿಸಿದ್ದೂ ಅಲ್ಲದೇ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರ ಮೇಲೆ ತನ್ನ ಭಕ್ತನ ಸಹಾಯದಿಂದ ಪೋಲೀಸರ ಮೂಲಕ ಹಲ್ಲೆಯನ್ನು ಮಾಡಿಸಿದ್ದನೆ೦ಬ ಆರೋಪ ಕೇಳಿಬರುತ್ತದೆ. 1994ರ ವೇಳೆಗೆ ಬೃಹತ್ತಾಗಿ ಬೆಳೆದ ರವಿಶಂಕರ್ ಸರ್ಕಾರ ನನಗೆ ಕೇವಲ 24 ಎಕರೆಗಳನ್ನು ಮಾತ್ರ ನೀಡಿದೆ, ಆದ್ದರಿಂದ ಬಿ.ಎಂ. ಕಾವಲ್ನ ಸರ್ವೇ ನಂ.134,135 ಮತ್ತು 180ರ ಹತ್ತೊಂಬತ್ತು ಎಕರೆ ಗೋಮಾಳವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅರ್ಜಿಹಾಕಿ ಅದರ ಪ್ರಸ್ತಾಪ ಆಗುವುದಕ್ಕೆ ಮುಂಚೆಯೇ ಜಾಗಕ್ಕೆ ಕಾಂಪೌಂಡ್ ಹಾಕಿ ಆಕ್ರಮಿಸಿಕೊಂದನೆಂದು ಕೆಲವು ಗ್ರಾಮಸ್ಥರು ಈಗಲೂ ದೂರುತ್ತಾರೆ. ಅಂದಿನಿಂದಲೇ ರವಿಶಂಕರ್ ಶ್ರೀಶ್ರೀಯ ಪದವಿಯನ್ನು ಪೋಣಿಸಿಕೊಂಡಿದ್ದು.

*ಆಶ್ರಮೋದ್ಯಮವೇ ಜೀವನಾಧಾರ:
ಬಹುಶಃ ನಾವು ಕಂಡಿರುವ ಹಾಗೇ ಸ್ವಾಮೀಜಿಗಳ ತಂದೆ-ತಾಯಿ ಬಂಧುಗಳು ಎಲ್ಲೋ ಅವರ ಪಾಡಿಗೆ ಅವರು ಸಾಧಾರಣವಾದ ಜೀವನವನ್ನು ಮಾಡುತ್ತಿರುತ್ತಾರೆ, ಆದರೆ, ಈ ರವಿಶಂಕರ್ ಗುರೂಜಿಯ ಕುಟುಂಬವಿಡೀ ಆಶ್ರಮೋತ್ಪತ್ತಿಯಲ್ಲಿ ತೊಡಗಿದೆ ಅದಕ್ಕೆ ಸಾಕ್ಷಿಯಂತೆ ನಿಂತಿರುವುದು ರವಿಶಂಕರ್ನ ತಂದೆ ರಾಮನಗರ ಜಿಲ್ಲೆಯ ಊರಗಳ್ಳಿಯಲ್ಲಿ ನಿರ್ಮಿಸಿರುವ ಆಶ್ರಮ ಹಾಗೂ ತಂಗಿ ಭಾನುಮತಿ ಬೆಂಗಳೂರಿನ ಜಯನಗರದ 5ನೇ ಬ್ಲಾಕ್ನಲ್ಲಿ ಮತ್ತೊಂದು ಆಶ್ರಮವನ್ನು ನಡೆಸುತ್ತಿದ್ದಾರೆ. ಈ ರವಿಶಂಕರ್ ಗುರೂಜಿ ಬೇರೆ ಬೇರೆ ಹೆಸರುಗಳಲ್ಲಿ ಅನೇಕ ಕಟ್ಟಡಗಳನ್ನು ನಿಮಾರ್ಣಮಾಡಿ ಈಗಾಗಲೇ ಲೈಫ್ ಸೆಟಲ್ ಮಾಡಿಕೊಂಡಿದ್ದಾರೆ. ಅಷ್ಟೇ ಸಾಲದೆಂದು ಅನೇಕರ ಸಹಕಾರದಿಂದ ಗ್ರಾಮಸ್ಥರ 150 ಎಕರೆ ಜಮೀನು ಈಗಾಗಲೇ ಸ್ವಾಹಾ ಆಗಿದೆ. ಇಂತಹ ಸ್ವಾಮೀಜಿ ಹೇಳಿಕೊಳ್ಳೋದು ನನಗೆ 140 ರಾಷ್ಟ್ರಗಳಲ್ಲಿ 300 ಮಿಲಿಯನ್ಗೂ ಹೆಚ್ಚಿನ ಭಕ್ತಾದಿಗಳಿದ್ದಾರೆಂದು, ಇದನ್ನು ನಂಬೋದಾದರೂ ಹೇಗೆ..? ಅದಕ್ಕೂ ಈ ಸ್ವಾಮೀಜಿ ಪಾರಿನ್ ಫಂಡ್ ಹೆಸರಿನಲ್ಲಿ ಹಣ ದೋಚುತ್ತಿರೋದು ಸಾಕ್ಷಿ. ಒಟ್ಟಿನಲ್ಲಿ ಇಂತಹ ಕಪಟ ನಾಟಕ ಪಾತ್ರಧರಿಗೆ ನಮ್ಮ ಹಿರಿಯ-ಕಿರಿಯ ರಾಜಕೀಯ ನಾಯಕರು ಬಗ್ಗಿ ಬಲೆಗೆ ಬೀಳುವುದು ವಿಪಯಾರ್ಸವಾಗಿದೆ.

*ಕೆಲವು ವಿವರಣೆ:
ಗಂಡಿನಿಂದ ಗಾಯವಾದ ವಿನಯ್ ವಾರದ ಹಿಂದೆಯಷ್ಟೇ ಭಕ್ತನಾಗಿದ್ದ, ಈತ ಒಬ್ಬ ಸಾಫ್ಟ್ವೇರ್ ಇಂಜಿನಿಯರ್, ಇವರು ಮೂಲತಃ ಬೆಳಗಾವಿಯವರು ಸದ್ಯಾ ಜೆ.ಪಿ.ನಗರದ ನಿವಾಸಿ. ಕೇಂದ್ರ ಗೃಹ ಸಚಿವರಾದ ಪಿ.ಚಿದಂಬರಂ ಹೇಳಿಕೆಯ ಪ್ರಕಾರ ಇಬ್ಬರು ಭಕ್ತರ ನಡುವಿನ ವಿವಾದ ಇದಕ್ಕೆ ಕಾರಣವೆಂಬುದು ಹಾಗೂ ಅನೇಕ ಪತ್ರಿಕೆಗಳಲ್ಲಿ ಗಾಳಿಸುದ್ಧಿಯಂತೆ ಹಬ್ಬಿದ ಇಬ್ಬರ ನಡುವಿನ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂಬುದು ವಿನಯ್ನ ಹೇಳಿಕೆಯಿಂದ ಹಾಸ್ಯಾಸ್ಪದವಾಗಿ ಕಾಣುತ್ತದೆ. 'ನನ್ನ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ ಅವರಿಗೆ ಯಾವುದೇ ಆಸ್ತೀ-ಪಾಸ್ತಿಯಿಲ್ಲಾ ಹಾಗೂ ನಾನಿರೋದು ಬಾಡಿಗೆ ಮನೆಯಲ್ಲಿ ಇನ್ನೂ ವಿವಾದ ಎಲ್ಲಿಂದ ಬರಬೇಕೂ..' ಹಾಗಾದರೆ, ಈ ದಾಳಿಗೆ ಕಾರಣವೇನು ಎಂದರೆ ನಮ್ಮ ಡಿ.ಜಿ.ಪಿ. ಡಾ.ಅಜಯ್ ಕುಮಾರ್ ಸಿಂಗ್, ಇದು ದಾಳಿಯೇ ಅಲ್ಲಾ ಕೇವಲ ಒಂದು ಘಟನೆ ಅಷ್ಟೇ ಎಂದು ಹೇಳುತ್ತಾರೆ.
ಶ್ರೀಶ್ರೀ.ರವಿಶಂಕರ್ ಇವೆಲ್ಲವನ್ನೂ ತಳ್ಳಿ ಹಾಕಿ 'ನಾನು ಬಿಹಾರ, ಕಾಶ್ಮೀರ, ಜಾರ್ಖಂಡ್ನಿಂದ ಹಿಂಸಾಚಾರವನ್ನು ತ್ಯಜಿಸಿ ಬಂದಿರುವ ಭಕ್ತಾದಿಗಳಿಗೆ ಸುದರ್ಶನ ಕ್ರಿಯೆ ಹಾಗೂ ಧ್ಯಾನದ ಮೂಲಕ ಆತ್ಮಜ್ಞಾನವನ್ನು ಪಡೆಯುವಲ್ಲಿಗೆ ಕರೆದೊಯ್ಯುತ್ತಿದ್ದೇನೆ. ಹಾಗೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೌಚಾಲಯವನ್ನು ನಿರ್ಮಿಸಿದ್ದೇನೆ, ನೂರಾರು ಮಕ್ಕಳಿಗೆ ಉಚಿತ ಶಕ್ಷಣವನ್ನು ನೀಡುತ್ತಿದ್ದೇನೆ ಮತ್ತು ಅನೇಕ ಬುಡಕಟ್ಟು ಪ್ರದೇಶದಲ್ಲಿ 100ಕ್ಕೂ ಅಧಿಕ ಶಾಲೆಗಳಿವೆ ಇಂತಹ ದೇವ ಕಾರ್ಯವನ್ನು ಸಹಿಸದ ದುಷ್ಟ ಶಕ್ತಿಗಳು ಈ ದಾಳಿಯನ್ನು ಕೈಗೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಗುಪ್ತದಳ 'ನಕ್ಸಲ್ ಹಾಗೂ ಉಗ್ರರರ ಹಿಟ್ಲಿಸ್ಟ್ನಲ್ಲಿ' ಸ್ವಾಮೀಜಿಯ ಹೆಸರಿದೆ ಎಂಬ ಮಾಹಿತಿಯನ್ನು ರವಾನಿಸಿದ್ದಾರೆ.

*ಕಾಡೋ ಪ್ರಶ್ನೆಗಳು:
ಸ್ವಾಮೀಜಿ ಹೋದನಂತರ ನೋವಿನ ಅನುಭವವಾಯಿತೆಂಬುದು ವಿನಯ್ ಹೇಳಿಕೆ. ಆದರೆ, ಗುರೂಜಿ 'ನಾನು ಕಾರಿನ ಬಳಿ ಇದ್ದಾಗಲೇ ಒಂದು ಸ್ಫೋಟಕ ಸದ್ದು ಕೇಳಿದ್ದೆ' ಎಂದು ಹೇಳ್ತಾರೆ. ಆದರೆ, ಇದು ರವಿಶಂಕರ್ ಸ್ವಾಮೀಜಿಯ ಮೇಲೆಯೇ ನಡೆದ ದಾಳಿಯೇ ಆಗಿದ್ದರೇ..,
= ಯಾರಿಗೋ ಯಾಕೆ ಗುಂಡು ಹಾರಿಸಬೇಕಿತ್ತೂ ಮತ್ತು ಅಷ್ಟು ದೂರದಿಂದ ಹೊಡೆಯುವ ಅನಿವಾರ್ಯತೆ ಏನಿತ್ತು ಹಾಗೆ ನೋಡಿದರೆ .32ಮಿ.ಮಿ ರಿವಲ್ವಾರ್ನಲ್ಲಿ ಸಾಯಿಸಲು ಕನಿಷ್ಟ 50ಮೀಟರ್ ಹತ್ತಿರವಿರಬೇಕು. ಘಟನೆ ನಡೆದ 3 ಗಂಟೆ ತಳ್ಳಿದ್ಯಾಕೆ, ಆಶ್ರಮದಿಂದ ಠಾಣೆಗೆ ಸುಮಾರು 10-15 ಕಿ.ಮೀ. ದೂರಮಾತ್ರವಿದೆ. ಅಲ್ಲಿಗೇ ಹೋಗಿ ತಿಳಿಸಿದ್ದರೂ ಇಷ್ಟು ಸಮಯ ಬೇಕಿರಲಿಲ್ಲಾ.
= ಆಶ್ರನಮದ ಸುತ್ತಮುತ್ತಾ ಜಮೀನು ಕಳೆದುಕೊಂಡ ಗ್ರಾಮಸ್ಥರ ಕೆಲಸವಾ..? ಇಲ್ಲಾ, ಸುತ್ತುವರಿದಿರುವ ತೋಟದಲ್ಲಿ ಯಾರಾದರೂ ಬಂದೂಕಿನ ಅಭ್ಯಾಸವನ್ನು ನಡೆಸುತ್ತಿದ್ದಾರಾ..? ಅಥವಾ ಯಾರೋ ತಮಾಷೆಗೆಂದು ಹಾರಿಸಿದ ಗುಂಡು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಯ್ತ.
= ಇನ್ನೊಂದು ದೃಷ್ಟಿಯಿಂದ ನೋಡಿದರೆ ಸರ್ಕಾರವನ್ನು ಉರುಳಿಸುವ ತಂತ್ರವೇನಾದರೂ ಇದರಲ್ಲಿ ಅಡಗಿದೆಯಾ...?
= ಶ್ರೀಶ್ರೀ.ರವಿಶಂಕರ್ ಗುರೂಜಿ ಘಟನೆಯನ್ನು ದಾಳಿಯನ್ನಾಗಿ ಪರಿವತರ್ಿಸಿ ಅಥವಾ ಅವರೇ ಪ್ರೀ ಪ್ಲಾನಡ್ ಆಗಿ ಶೂಟೌಟ್ ನಡೆಸಿ 'ಮೀಡಿಯಾ ಕಣ್ಣುಗಳಲ್ಲಿ' ಕುಣಿದಾಡಿ ಪಾರಿನ್ ಫಂಡ್ ಹೆಚ್ಚಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರಾ..?
ಇಂತಹ ಎಷ್ಟೋ ಸಂಶಯಗಳ ಹುತ್ತಾ ಇನ್ನೂ ಆಳವಾಗಿದೆ. ಇದಕ್ಕೆಲ್ಲಾ ಉತ್ತರ ಸೂಕ್ತ ತನಿಖೆಯ ನಂತರವೇ ಸಿಗೋದು ಅನ್ನೋ ವಿಷಯ ಸಾಮಾನ್ಯವಾದದ್ದೇ ಆದರೆ, ಆಶ್ರಮಕ್ಕೆ ಅಲ್ಲೀವರೆಗೂ ಅಥವಾ ಬಹುಶಃ ಮುಂದೆಯೂ 80 ಪೋಲೀಸರ ಸರ್ಪಗಾವಲು ಆಶ್ರಮಕ್ಕೆ ದೊರೆಯುತ್ತದೆ ಮತ್ತು ಈಗಾಗಲೇ ಸ್ವಾಮೀಜಿಗೆ 24 ಗಂಟೆಗಳ ನಾಲ್ಕು ಜನ ಪೋಲೀಸರ 'ವೈ' ಶ್ರೇಣಿಯ ಭದ್ರತೆ ಒದಗಿಸಲಾಗಿದೆ.
ಈ ಎಲ್ಲಾ ಸಂಗತಿಗಳ ಮೇಲೆ ಒಂದು ನೋಟಬೀರಿದರೆ, ನಮ್ಮ ಭಾರತೀಯ ಸಂಸ್ಕೃತಿಯು, ಭವ್ಯ ಪರಂಪರೆಯು ಕೇವಲ ಇತಿಹಾಸದ ಪುಟಗಳಲ್ಲಿ ದೂಳು ಹಿಡಿಯುತ್ತಾ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ.




0 Comments:

Post a Comment