Saturday, September 18, 2010


2012ಕ್ಕೆ ಜಗತ್ತು ಮಟಾಷ್- 5 ಪ್ರಮುಖ
ಮೌಢ್ಯಗಳು.....
ಒಂದು ಕಡೆ ನಮ್ಮ ರಾಜಕಾರಣಿಗಳು 2011ಕ್ಕೆ
ಮೆಟ್ರೊ ಖಂಡಿತ ಫಿನಿಷ್ ಅನ್ನುತ್ತಿದ್ದರೆ, ಇನ್ನೊಂದೆಡೆ ಅವರನ್ನಾಡಿಸುತ್ತಿರುವ ಜೋತಿಷಿಗಳು 2012ಕ್ಕೆ ಸರ್ವನಾಶವೆಂಬ ಭ್ರಮೆ ಹುಟ್ಟಿಸುತ್ತಾ ಸಾಗಿದ್ದಾರೆ. ಇದು ನಮ್ಮ ನಾಡು, ದೇಶಕಷ್ಟೆ ಸೀಮಿತ
ವಾಗಿಲ್ಲ. ಇದೊಂದು ಜಾಗತೀಕೃತ ತಲ್ಲಣವಾಗಿದ್ದು, ಇದರ ಉಗ
ಮಕ್ಕೆ ಪುಷ್ಠಿಯ ಸೆಲೆಯಾದ ಕಾರಣಗಳ ಮೇಲೆ ಬೆಳಕು ಹರಿಸಿ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ....

ನಿಬಿರು ಎಂಬ ಗ್ರಹ ಡಿಸೆಂಬರ್ 2012ರಂದು ಭೂಮಿಗೆ ಬಂದು ಅಪ್ಪಳಿಸಲಿದೆ.........
ಮೊದಲ ಬಾರಿಗೆ ಈ ಸಾಲುಗಳು ಹೊರ ಬಂದಿದ್ದು, ವಿಜ್ಞಾನ ವಿಷಯಗಳನ್ನು ಕಥೆಯಾಗಿಸೊ ಒಬ್ಬ ಕಾದಂಬರಿಕಾರನಿಂದ. ನಿಬಿರು ಎಂದರೆ ಗ್ರಹಗಳನ್ನು ದಾಟಿ ಅಥವಾ ಸುತ್ತಿ ಹೋಗುವಂತದು ಎಂಬ ಅರ್ಥಗಳು ಇವೆ. ಈ ರೀತಿ ಮಂಗಳ ಮತ್ತು ಗುರು ಗ್ರಹಗಳನ್ನು ಸುತ್ತುವಾಗ ಭೂಮಿಗೆ ಬಂದು ಅಪ್ಪಳಿಸುತ್ತದೆ ಹಾಗೂ ಈ ರೀತಿ ನಿಬಿರು ಹಾದು ಹೋಗುವುದು ಸಾವಿರಾರು ವರ್ಷಗಳಿಗೊಮ್ಮೆ ಎಂಬ ಕಲ್ಪನಾ ವಾದಗಳು ಗೊಂದಲಮಯ. ಆದರೆ, ಇದುವರೆವಿಗು ಯವುದೇ ಖಗೋಳ ವಿಜ್ಞಾನಿಯ ಕಣ್ಣಿಗೆ ಈ ಗ್ರಹವು ಕಂಡುಬಂದಿಲ್ಲವಾದ್ದರಿಂದ, ನಿಬಿರುವಿನ ಅಸ್ತಿತ್ವ ನಿಜವಲ್ಲ ಮತ್ತು ಭೂಮಿಯು ಈ ರೀತಿ ಸ್ಪೋಟಗೊಳ್ಳುತ್ತದೆಂಬುದು
ಶುದ್ಧ ಕಟ್ಟು
ಕಥೆ.

ಮಯಾನ್ ಕ್ಯಾಲೆಂಡರ್ ಪ್ರಕಾರ 2012ರ ಡಿಸೆಂಬರ್ ಜಗತ್ತಿನ ಅಂತ್ಯ......
ಪ್ರಪಂಚದಲ್ಲಿ ಹಳೆಯ ಹಾಗೂ ಹೊಸ ಸಾವಿರಾರು ಕ್ಯಾಲೆಂಡರುಗಳು ಬಳಕೆಯಲ್ಲಿದ್ದು, ಯಾವುದೂ ಭೂಮಿಯ ಭವಿಷ್ಯದ ಹಾಗು-ಹೋಗುಗಳ
ಬಗ್ಗೆ ಅಥವಾ ಇಂತದೇ ದಿನ ಹೀಗೆ ನಡೆಯುತ್ತದೆಂದು ದಾಖಲಿಸಲಾಗುವುದಿಲ್ಲ. ಹೇಗೆ ಡಿಜಿಟಲ್ ಗಡಿಯಾರಗಳು 23 ಗಂಟೆ 59 ನಿಮಿಷಗಳಾದಾಗ ಮತ್ತೆ 00:00ಯಿಂದ ಸಮಯ ಮುಂದೆ ಸಾಗುತ್ತದೆ, ಕ್ಯಾಲೆಂಡರ್ಗಳು ಕೂಡ ಡಿಸೆಂಬರ್ 31
ರ ನಂತರ ಜನವರಿ 01 ಪ್ರಾರಂಭವಾಗುತ್ತದೊ....ಹಾಗೇ 2012ರ ಬಳಿಕ 2013, ಇದರಲ್ಲಿ
ಇನ್ಯಾವ ಬದಲಾವಣೆಗಳೂ ಆಗುವುದಿಲ್ಲ.

ನಮ್ಮ ಮಿಲ್ಕಿ ವೇ ಗ್ಯಾಲಾಕ್ಸಿಯಲ್ಲಿನ ಇತರೆ ಗ್ರಹಗಳ ಪ್ರಭಾವದಿಂದ ಭೂಮಿಯ ಪಥ ಬದಲಾಗಿ, ಗುರುತ್ವಾಕರ್ಷಣ
ಬಲದಲ್ಲಿ ಏರು-ಪೇರಾಗುತ್ತದೆ......
ತಿರುಗುತ್ತಿರುವ ಚೆಂಡೊಂದು ಹೇಗೆ ಇದ್ದಕ್ಕಿದ್ದ ಹಾಗೆ ತನ್ನ ವಿರುದ್ಧ ದಿಕ್ಕಿನಲ್ಲಿ ಸುತ್ತಲು ಸಾಧ್ಯವಿಲ್ಲವೋ ಹಾಗೇ ಭೂಮಿಯು ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆಂಬುದು ಅಸಹಜ. ಈ ರೀತಿ ಹಿಂದೆಂದೂ ನಡೆದಿಲ್ಲ, ಮುಂದೆಯೂ
ನಡೆಯುವುದಿಲ್ಲ ಎಂಬುದು ವಿಜ್ಞಾನಿಗಳ ಮಾತು.

ಜ್ಯೋತಿಷಿ ನಾಸ್ಟ್ರೋಡಮಸ್ನ ಪ್ರಕಾರ 2012ಕ್ಕೆ ಜಗತ್ ಪ್ರಳಯ......
ಹದಿನಾರನೆಯ ಶತಮಾನದಲ್ಲಿ ಹೇಳಲಾಗಿದೆ ಎಂಬ ಇವನ ಮಾತುಗಳಿಗೆ ಯಾವುದೇ ಆದಾರವೂ ದೊರೆತಿಲ್ಲ ಹಾಗೂ ಈತನ ಬರಹಗಳು ಅತಿಯಾದ ಉತ್ಪೇಕ್ಷೆ ಮತ್ತು ಕಲ್ಪನೆಗಳಿಂದ ಕೂಡಿವೆ. ಆದ್ದರಿಂದ ಇದು ಸಾಹಿತ್ಯದ ಒಂದು ಭಾಗವೇ ಹೊರತು ಭವಿಷ್ಯ ವಾಣಿಯಲ್ಲ.

2012 ಅನ್ನೊ ಸಿನೆಮಾ, ಭೂಮಿಯ ಅಂತಿಮ ಹಂ
ತದ ಮುನ್ಸೂಚನೆ......
ಹಾಲಿವುಡ್ನ ಪ್ರಚಾರದ ಪರಿಯೇ ಹೀಗೆ, ಜನರಲ್ಲಿ ಗಾಳಿ ಸುದ್ಧಿಗಳನ್ನು ಎಬ್ಬಿಸಿ ಜಗತ್ ಜಾಹೀರಾಗುವಂ
ತೆ ಮಾಡಿ ಹಣ ಮಾಡಿಕೊಳ್ಳುವ ತಂತ್ರಕ್ಕೆ ಬಲಿಯಾಗಿ ಮೌಢ್ಯಕ್ಕೆ ತಲೆಯೊಡ್ಡುವ ಜನರೇ ಪ್ರಡ್ಯೂಸರ್ಗಳ ಬಂಡವಾಳ.
ಒಂದು ರೀತಿ ಖಾಯಿಲೆಯಂತೆ ಭಯವನ್ನು ಹಬ್ಬಿಸಿ, ಅದರ
ಚಿಂತೆಯಲ್ಲೆ, ಮಾ
ತಿನಲ್ಲೆ ಜನರು ಮುಳುಗುವಂತೆ ಮಾಡಿ, ತಮ್ಮ ಬೇಳೆ ಬೇಸಿಕೊಂಡ ವ್ಯಾಪಾರಿಗಳು ಶ್ರೀಮಂತರಾಗಿದ್ದಾರೆ. ಅದೇ ಪ್ರಳಯದ ಭೀತಿಗೆ ಬಿದ್ದವರು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ.








;;