Wednesday, January 20, 2010

'ಪಾಪು ಮಾತು'

"ಜೀವನದಲ್ಲಿ".....,
ಜ್ಞಾನಕ್ಕೆ ಮಿತಿಯಿಲ್ಲಾ
ವಿಕಾಸಕ್ಕೆ ಕೊನೆಯಿಲ್ಲಾ.
"ಕೆಂಪು ಬಣ್ಣದ".....,
ರಕ್ತ ಕ್ರೂರತೆಗೆ ಸಾಕ್ಷಿ
ಹೂ ಒಲವಿಗೆ ಸಾಕ್ಷಿ.

'ಪುಟ್ಟ ಪ್ರಶ್ನೆ'

"ಅಪ್ಪ-ಅಮ್ಮ ಬಳಸೋ ಅಸ್ತ್ರ, ರೌಡಿಗಳ ಕೈಯಲ್ಲಿನ ಶಸ್ತ್ರ".
ಏನೀ ಪುಟ್ಟ ವಸ್ತು.....?

ಆಗೀಗ ಗೀಚಿದ್ದು.....

'ಯಾವುದು ಸತ್ಯಾ....??'

ಸರ್ಕಾರದ ಮಹದಾಸೆ
2011 ಮೆಟ್ರೋ ಫಿನಿಷ್,
ಜ್ಯೋತಿಷಿಗಳ ಭರವಸೆ
2012 ಜಗತ್ತೇ ಮಟಾಷ್.

`ಪಯಣ-ಪರಿಚಯ'

















ಎಷ್ಟು ದೂರದವರೆಗೆ ಕಣ್ಣಾಡಿಸಿದರೂ ಕಾಣಿಸೋ ಹಾಲ್ಗಡಲ
ಅಲೆಗಳಂತ ಬೆಟ್ಟ-ಗುಡ್ಡಗಳ
ಸಾಲು-ಸಾಲು. ಕಲ್ಯಾಣಿಯಂತೆ ಕಾಣೋ ಕೆರೆಗಳು, ಅಚ್ಚ ಹಸಿರಿನ ತೋಟಗಳು, ಬೆಟ್ಟದ ತುದಿಗೆ ಬಂದು ನಿಂತಾಗ ಆಗಸದಲ್ಲಿದ್ದಂತೆ ಭಾಸವಾಗುತ್ತದೆ. ಸುಮಾರು ಎಕರೆಯಷ್ಟು ಚಾಚಿರುವ ಸಿದ್ಧರ ಬೆಟ್ಟದ ಮುಡಿ ಆಟದ
ಅಂಗಳದಂತೆ ಕಂಗೊಳಿಸುತ್ತದೆ.

ಬೆಟ್ಟದ ಮಧ್ಯಭಾಗದಲ್ಲಿನ ಗವಿಯಲ್ಲಿರುವ ಶಿವಲಿಂಗಕ್ಕೆ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಇಲ್ಲಿನ ವಿಷೇಶವೆಂದರೆ,ಲಿಂಗದ ಮುಂಭಾಗದಲ್ಲಿರುವ ಆರು ಅಡಿ ಆಳದ ಹಾಗೂ ಮೂರು ಅಡಿ ಅಗಲದ ಕೊರೆದ ಬಂಡೆಯಲ್ಲಿ ನೀರಿನ ಬುಗ್ಗೆಯಿದ್ದು ಎಂತಹಾ ಬರಗಾಲದಲ್ಲೂ ಬತ್ತಿದ್ದು ಇಲ್ಲವಂತೆ. ಈ ನೀರನ್ನು ಮುಡಿಯಿಂದ ಅಡಿವರೆಗೂ ಸುರಿಸಿಕೊಂಡರೆ ಮನಸ್ಸು,ಮೆದುಳು,ಮೈ, ತಣ್ಣನೆಯ ಅನುಭವವನ್ನು ಪಡೆಯುತ್ತದೆ.

ಇಲ್ಲಿನ ಸಾಹಸಮಯ ಜಾಗ ಗವಿಯ ಒಳಗಿನ ಸುರಂಗ, ಅದರೊಳಗೆ ಸುಮಾರು ಒಂದು ಗಂಟೆಯ ನಡಿಗೆ ಬೆಳಕಿಲ್ಲದ ಈ ಗವಿಯಲ್ಲಿ ನಾವು ತೆಗೆದುಕೊಂಡು ಹೋಗೋ ಟಾರ್ಚು ಲೈಟುಗಳೆ ಆಧಾರ. ಒಳಭಾಗದಲ್ಲಿ ಅನೇಕ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದ ಸ್ಥಳಗಳು ಹಾಗೂ ಅನೇಕ ಗದ್ಧುಗೆಗಳನ್ನು ಕಾಣಬಹುದು.

ಬೆಟ್ಟದ ಕೆಲಭಾಗದಲ್ಲಿ ಅಪರೂಪದ ಆಯುರ್ವೇದ ಸಸ್ಯಗಳನ್ನೊಳಗೊಂಡ ವನರಾಶಿಯನ್ನು ಕಾಣಬಹುದು.ಸುತ್ತಾಟಕ್ಕೆ ಸರಿಹೊಂದೋ ಸ್ಥಳ ಸಿದ್ಧರ ಬೆಟ್ಟ.

;;