Friday, November 5, 2010




ಮೊದಲಿಗರು...
ಭಾರತೀಯರ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆ, ಸಾಧನೆಗಳಿಗೆ ಸಹಕಾರಿಯಾಗುವಂತ ಸೂಕ್ತ ಮಾರ್ಗಕ್ಕೆ ನಾಂದಿ ಹಾಡಿದ ಹಲವರಲ್ಲಿ 'ಶಾಂತಿ ಸ್ವರೂಪ ಬಟ್ನಾಗರ್' ಮತ್ತು 'ವಿಕ್ರಮ್ ಸಾರಾಬಾಯಿ' ಪ್ರಮುಖರು. ಎಲ್ಲೊ ಹುಟ್ಟಿ, ಎಲ್ಲೊ ಬೆಳೆದು ದೇಶಕ್ಕಾಗಿ ದುಡಿಯಬೇಕೆಂಬ ಇವರ ಅಭಿಮಾನ, ವಿಜ್ಞಾನದಲ್ಲಿನ ಆಸಕ್ತಿ, ಇವೆಲ್ಲಾ ಸಿಲೆಬಸ್ ಅನ್ನೊ ಬಾಲ ಹಿಡಿದು ಹೊರಟಿರೊ ವಿದ್ಯಾಥರ್ಿ ಮಿತ್ರರಿಗೆ ಸ್ಪೂತರ್ಿಯಾಗಲಿ.
* ಶಾಂತಿ ಸ್ವರೂಪ ಬಟ್ನಾಗರ್:
21ನೇ ಫೆಬ್ರವರಿ 1894ರಂದು ಶಹಪುರದಲ್ಲಿ(ಈಗ ಪಾಕಿಸ್ತಾನದಲ್ಲಿದೆ) ಜನಿಸಿದ ಬಟ್ನಾಗರ್ ಮಗುವಾಗಿದ್ದಾಗೆ ತನ್ನ ತಂದೆಯನ್ನು ಕಳೆದುಕೊಂಡಿದ್ದರಿಂದ ಇಂಜಿನಿಯರ್ ಆಗಿದ್ದ ತಾತನ ಮನೆಯಲ್ಲೇ ಬೆಳೆಯಬೇಕಾಯಿತು. ಎಲ್ಲರ ಜೀವನದಲ್ಲೂ ಒಂದು ಬಹಳ ಮುಖ್ಯವಾದ ತಿರುವುಗಳು ಬರುತ್ತವೆ, ಅದು ಬಹಳ ಬೇಗನೆ ಬಟ್ನಾಕರ್ ಜೀವನದಲ್ಲಿ ಬಂದಿದ್ದು ತನ್ನ ತಾತನ ಸಹಾಯದಿಂದ. ಚಿಕ್ಕಂದಿನಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಮೊಳೆಯಿತು. ಅನೇಕ ಸ್ವಯಂ ಚಾಲಿತ ಗೊಂಬೆಗಳು, ಬ್ಯಾಟರಿಗಳು, ತಂತಿಯ ಸಹಾಯದಿಂದ ನಿಮರ್ಿಸಿದ ದೂರವಾಣಿಗಳು, ಇವೇ ಅವರ ಆಟಿಕೆಗಳಾಗಿದ್ದವು. ಅಷ್ಟೆ ಅಲ್ಲದೆ ಕಾವ್ಯ, ನಾಟಕಗಳ ಬಗೆಗಿನ ಒಡನಾಟವು ದೊರೆತದ್ದು ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿತು. ಎಂ.ಎಸ್ಸಿ ಪದವಿ ಮುಗಿದ ನಂತರ ಉನ್ನತ ಅಧ್ಯಯನವನ್ನು ಇಂಗ್ಲೆಂಡಿನಲ್ಲಿ ಮುಗಿಸಿ "ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ" ಪ್ರೊಫೆಸರ್ ಆಗಿ ಕಾಯರ್ಾರಂಭ ಮಾಡಿದರು.
ರಸಾಯನ ಶಾಸ್ತ್ರದಲ್ಲಿ ಬರುವ ಜಿಡ್ಡಿನ ಕಣಗಳಿಂದಾದ ದ್ರವ(ಎಮಲ್ಶನ್), ಅಂಟು ಪದಾರ್ಥ(ಕೊಲಾಯಡ್), ಕಾಖರ್ಾನಾ ರಾಸಾಯನಿಕಗಳು, ಇವುಗಳು ಬಟ್ನಾಕರರ ನೆಚ್ಚಿನ ವಿಷಯಗಳಾದೂ, ಹೆಚ್ಚಿನ ಸಾಧನೆ ಕಂಡುಬಂದಿರುವುದು 'ಮ್ಯಾಗ್ನೆಟೋ ಕೆಮಿಸ್ಟರಿಯಲ್ಲಿ'. ಪ್ರಯೋಗಾಲಯದಲ್ಲಿ ಬಹುತೇಕ ತಮ್ಮ ಸಮಯವನ್ನು ಸಂಶೋಧನೆಗಾಗೇ ಮೀಸಲಿರಿಸಿದ್ದರು. ಇವರ ಕೆಲಸಗಳನ್ನು ಗುರುತಿಸಿ ಬ್ರಿಟಿಷ್ ಸಕರ್ಾರ 'ರಾಯಲ್ ಸೊಸೈಟಿಯ' ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯಾ ನಂತರದಲ್ಲಿ ಇವರಿಗೆ "ಪದ್ಮಭೂಷಣ" ಪ್ರಶಸ್ತಿಯೂ ದೊರೆಯಿತು.
1940ರಲ್ಲಿ ಪ್ರಾರಂಭವಾದ "ಕೌನ್ಸಿಲ್ ಆಫ್ ಸೈನ್ಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸಚರ್್"(ಸಿ.ಎಸ್.ಐ.ಆರ್.)ನ ಪ್ರಥಮ ನಿದರ್ೇಶಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಭಾರತೀಯ ಸಂಶೋಧನಾ ಕೇಂದ್ರಗಳ ನಿಮರ್ಾಣದಲ್ಲಿ ಮಹತ್ವದ ಪಾತ್ರವಹಿಸಿದರು. ಇವರನ್ನು ಭಾರತದ "ಸಂಶೋಧನಾ ಪ್ರಯೋಗಾಲಯಗಳ ಜನಕ" ಎಂದು ಕರೆಯುತ್ತಾರೆ. ಮೈಸೂರಿನ "ಕೇಂದ್ರ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ" ಮತ್ತು ಪುಣೆಯ "ರಾಷ್ಟೀಯ ರಾಸಾಯನಿಕ ಪ್ರಯೋಗಾಲಯ" ಸೇರಿದಂತೆ ಅನೇಕ ಸಂಸ್ಥೆಗಳನ್ನು ನಿಮರ್ಿಸಿ ಮುಂದುವರಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. 1955ರಲ್ಲಿ ಇವರು ಕಾಲವಾದ ನಂತರ ಎ.ಎಸ್.ಐ.ಆರ್. ಸಂಸ್ಥೆಯು ಬಟ್ನಾಗರ್ ಹೆಸರಿನಲ್ಲಿ ಶ್ರೇಷ್ಠ ವಿಜ್ಞಾನಿಗಳಿಗೆ ಪ್ರಶಸ್ತಿಯನ್ನು ನೀಡುತ್ತಿದೆ ಹಾಗೂ ಇವರೇ ಸಂಯೋಜಿಸಿದ್ದ "ಕುಲಗೀತ್" ಹಾಡನ್ನು ಅವರ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಹಾಡುತ್ತಾರೆ.

* ವಿಕ್ರಮ್ ಸಾರಾಬಾಯಿ:
ಇವರನ್ನು "ಭಾರತೀಯ ಅಂತರಿಕ್ಷ ಕಾರ್ಯಗಳ ಜನಕ" ಎಂದು ಕರೆಯಲಾಗುತ್ತದೆ. ಭಾರತದ ಪ್ರಪ್ರಥಮ ಉಪಗ್ರಹ "ಆರ್ಯಭಟ"ದ ಉಡಾವಣೆಯ ಹಿಂದೆ ಇದ್ದ ಪ್ರಮುಖ ಶಕ್ತಿ ವಿಕ್ರಮ್ ಸಾರಾಬಾಯಿ. ಅದು ಕಕ್ಷೆ ಸೇರಿದ್ದು 1975ರಲ್ಲಿ, ಆದರೆ ಸಾರಾಬಾಯಿಯವರು 1971 ರಲ್ಲೇ ದೇಹತ್ಯಾಗ ಮಾಡಿದ್ದರು. ಆ ಸಮಯಕ್ಕಾಗಲೇ ಅವರು ಮಾಡಿದ್ದ ಕೆಲಸಗಳು, ಬೆಳೆಸಿದ್ದ ಸಂಸ್ಥೆಗಳು, ಕಂಡಿದ್ದ ಕನಸು ಅನೇಕ.
1919 ಆಗಸ್ಟ್ 19ರಂದು ಅಹಮದಾಬಾದ್ನಲ್ಲಿ ಜನಿಸಿದ ಸಾರಾಬಾಯಿಯವರದು ಬಟ್ಟೆಯ ಕಾಖರ್ಾನೆಗಳನ್ನು ನಡೆಸುತ್ತಿದ್ದ ಕುಟುಂಬ. ಕೇಂಬ್ರಿಡ್ಜಿನಲ್ಲಿ ಕಾಲೇಜು ಶಿಕ್ಷಣವನ್ನು ಪಡೆದು ಬೆಂಗಳೂರಿನ ಐ.ಐ.ಎಸ್ಸಿ ಯಲ್ಲಿ ಸಿ.ವಿ.ರಾಮನ್ರವರ ಬಳಿ ಸಂಶೋಧನಾ ವಿದ್ಯಾಥರ್ಿಯಾಗಿ ಸೇರಿ ಕಾಸ್ಮಿಕ್ ಕಿರಣಗಳ ಬಗೆಗೆ ಅಧ್ಯಯನ ಕೈಗೊಂಡರು. 'ಫಿಸಿಕಲ್ ರೀಸಚರ್್ ಲ್ಯಾಬೊರೇಟರಿ' ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳನ್ನು ಹುಟ್ಟಿಹಾಕುತ್ತಾ ಇಡೀ ಭಾರತದಾದ್ಯಂತ ವಿಜ್ಞಾನದ ಬೀಜವನ್ನು ಬಿತ್ತುವಲ್ಲಿ ಯಶಸ್ವಿಯಾದರು. ಇಸ್ರೋ ಸಂಸ್ಥೆಯ ಎರಡನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಪರಿ ಬೆರಗಾಗಿಸುವಂತದು. ತುಂಭಾ ಹಾಗೂ ಶ್ರೀಹರಿಕೋಟಾದಲ್ಲಿ ಮೊದಲ ಬಾರಿಗೆ ರಾಕೆಟ್ಗಳ ಉಡಾವಣಾ ಕೇಂದ್ರವನ್ನು ಹೋಮಿ ಜಹಂಗೀರ್ ಬಾಬಾರ ಸಹಾಯದೊಂದಿಗೆ ನಿಮರ್ಿಸಿದ್ದು ದೇಶದ ಮಟ್ಟಿಗೆ ಒಂದು ಹೊಸ ಮೈಲಿಗಲ್ಲು. ಈಗಿನ ಇಸ್ರೋದ ಸಾಧನೆಗಳಿಗೆ ಇವರು ಹಾಕಿದ ಭದ್ರ ಬುನಾದಿಯೆ ಕಾರಣ ಎಂದರೆ ತಪ್ಪಿಲ್ಲ. ಜೊತೆ ಜೊತೆಗೆ ಉಡುಪಿನ ತಂತ್ರಜ್ಞಾನವನ್ನೂ ಬೆಳೆಸುತ್ತಿದ್ದರು. ಆದಕಾರಣ ನಿರ್ವಹಣೆಯ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ನೀಡಲು ಅನುವಾಗುವಂತೆ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್" ತೆರೆದರು. ಈ ಸಂಸ್ಥೆಯೂ ಈಗ ಜಗದ್ವಿಖ್ಯಾತ.
ಇವರ ಇಡೀ ಜೀವನ, ಜೀವಮಾನದ ಹಣ, ಆಸ್ತಿ ಎಲ್ಲವೂ ದೇಶದ ವಿಜ್ಞಾನದ ಬೆಳವಣಿಗೆಗಳಿಗೆ ಮೀಸಲಿರಿಸಿದ್ದರು. ಇವರ ಜೀವನ ಕ್ರಮವೇ ನಮಗೊಂದು ಪಾಠ.



;;