Wednesday, January 20, 2010

`ಪಯಣ-ಪರಿಚಯ'

















ಎಷ್ಟು ದೂರದವರೆಗೆ ಕಣ್ಣಾಡಿಸಿದರೂ ಕಾಣಿಸೋ ಹಾಲ್ಗಡಲ
ಅಲೆಗಳಂತ ಬೆಟ್ಟ-ಗುಡ್ಡಗಳ
ಸಾಲು-ಸಾಲು. ಕಲ್ಯಾಣಿಯಂತೆ ಕಾಣೋ ಕೆರೆಗಳು, ಅಚ್ಚ ಹಸಿರಿನ ತೋಟಗಳು, ಬೆಟ್ಟದ ತುದಿಗೆ ಬಂದು ನಿಂತಾಗ ಆಗಸದಲ್ಲಿದ್ದಂತೆ ಭಾಸವಾಗುತ್ತದೆ. ಸುಮಾರು ಎಕರೆಯಷ್ಟು ಚಾಚಿರುವ ಸಿದ್ಧರ ಬೆಟ್ಟದ ಮುಡಿ ಆಟದ
ಅಂಗಳದಂತೆ ಕಂಗೊಳಿಸುತ್ತದೆ.

ಬೆಟ್ಟದ ಮಧ್ಯಭಾಗದಲ್ಲಿನ ಗವಿಯಲ್ಲಿರುವ ಶಿವಲಿಂಗಕ್ಕೆ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಇಲ್ಲಿನ ವಿಷೇಶವೆಂದರೆ,ಲಿಂಗದ ಮುಂಭಾಗದಲ್ಲಿರುವ ಆರು ಅಡಿ ಆಳದ ಹಾಗೂ ಮೂರು ಅಡಿ ಅಗಲದ ಕೊರೆದ ಬಂಡೆಯಲ್ಲಿ ನೀರಿನ ಬುಗ್ಗೆಯಿದ್ದು ಎಂತಹಾ ಬರಗಾಲದಲ್ಲೂ ಬತ್ತಿದ್ದು ಇಲ್ಲವಂತೆ. ಈ ನೀರನ್ನು ಮುಡಿಯಿಂದ ಅಡಿವರೆಗೂ ಸುರಿಸಿಕೊಂಡರೆ ಮನಸ್ಸು,ಮೆದುಳು,ಮೈ, ತಣ್ಣನೆಯ ಅನುಭವವನ್ನು ಪಡೆಯುತ್ತದೆ.

ಇಲ್ಲಿನ ಸಾಹಸಮಯ ಜಾಗ ಗವಿಯ ಒಳಗಿನ ಸುರಂಗ, ಅದರೊಳಗೆ ಸುಮಾರು ಒಂದು ಗಂಟೆಯ ನಡಿಗೆ ಬೆಳಕಿಲ್ಲದ ಈ ಗವಿಯಲ್ಲಿ ನಾವು ತೆಗೆದುಕೊಂಡು ಹೋಗೋ ಟಾರ್ಚು ಲೈಟುಗಳೆ ಆಧಾರ. ಒಳಭಾಗದಲ್ಲಿ ಅನೇಕ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದ ಸ್ಥಳಗಳು ಹಾಗೂ ಅನೇಕ ಗದ್ಧುಗೆಗಳನ್ನು ಕಾಣಬಹುದು.

ಬೆಟ್ಟದ ಕೆಲಭಾಗದಲ್ಲಿ ಅಪರೂಪದ ಆಯುರ್ವೇದ ಸಸ್ಯಗಳನ್ನೊಳಗೊಂಡ ವನರಾಶಿಯನ್ನು ಕಾಣಬಹುದು.ಸುತ್ತಾಟಕ್ಕೆ ಸರಿಹೊಂದೋ ಸ್ಥಳ ಸಿದ್ಧರ ಬೆಟ್ಟ.

0 Comments:

Post a Comment