Tuesday, June 22, 2010



ಭ್ರಷ್ಟರಿಂದ ಬತ್ತಿಹೋದ ಮಹಾನಗರ ಪಾಲಿಕೆ(B B M P)

ಬಿ.ಬಿ.ಎಂ.ಪಿಯ ಭ್ರಷ್ಟಾಚಾರಗಳು ಬ
ಯಲಾಗ ತೊಡಗಿವೆ. 'ಅಕ್ರಮವೇ ನಮ್ಮ ಹಕ್ಕು, ಕಳಪೆಯೇ ನಮ್ಮ ಕೆಲಸ, ಹಣವೊಂದೇ ನಮ್ಮ ಗುರಿ' ಎಂಬ ತತ್ವವನ್ನು ಹಿಡಿದು ಹಣದ ಹೊಳೆಯಲ್ಲಿ ತೇಲಾಡುತ್ತಿದ್ದ ಕಂಟ್ರಾಕ್ಟರ್ಗಳಿಗೆ ಬಾರೀ ಹೊಡೆತವೇ ಬಿದ್ದಿದೆ. ಕಾಂಪೌಂಡ್ ಗೋಡೆಯ ಉರುಳುವಿಕೆಯ
ನಂತರ ಬಹಿರಂಗವಾದ ಮುನಿರತ್ನರ ಹಗರಣ, ಬಿ.ಬಿ.ಎಂ.ಪಿಯಲ್ಲಿನ ಕೆಲಸಗಳಿಗೆ ಒಂದು ಸಣ್ಣ ನಿದರ್ಶನದಂತೆ ಅಷ್ಟೇ. ಇಂತಹ ಅದೆಷ್ಟೋ ಕಂಟ್ರಾಕ್ಟರುಗಳು ಅಭಿವೃದ್ಧಿಯ, ಕಾಮಗಾರಿಯ ಹಣವನ್ನು ಗುಳುಂ ಮಾಡಿ ರಾತ್ರೋರಾತ್ರಿ ಆಗರ್ಭ ಶ್ರೀಮಂತರಂತೆ ಎದ್ದು ನಿಂತಿದ್ದಾರೆ. ಸಾಮಾನ್ಯ ರಸ್ತೆ ಕಂಟ್ರಾಕ್ಟರ್ ಒಬ್ಬ ಬೆಂಗಳೂರಿನಂತಹ ಮಹಾನಗರದಲ್ಲಿ ಪಾಲಿಕೆಯ ಕಾಪರ್ೊರೇಟ್ ಆಗಿ ಆಯ್ಕೆಯಾಗುವುದು ಅಷ್ಟು ಸುಲಭದ ಮಾತಲ್ಲ, ಅಂದರೆ ಆತನು ಆಥರ್ಿಕವಾಗಿ ಕೆಲವೇ ವರ್ಷಗಳಲ್ಲಿ ಅದೆಷ್ಟು ದಷ್ಟಪುಷ್ಟವಾಗಿ
ಬೆಳೆದಿದ್ದಾರೆಂಬುದಕ್ಕೆ ಸಾಕ್ಷಿ.

ಇತ್ತೀಚಿಗಷ್ಟೆ ನಡೆದ ಬಿ.ಬಿ.ಎಂ.ಪಿ ಚುನಾವಣೆಯಿಂದ ಜನಪ್ರತಿನಿದಿಗಳು ಆಯ್ಕೆಯಾಗಿ ಬಂದಿದ್ದಾರೆ. ಆದರೆ, ಎಷ್ಟೋ
ತಿಂಗಳಿಂದ ವರ್ಷಗಳಿಂದ ಸರ್ಕಾರವು ಚುನಾವಣೆನಡೆಸದೆ ತಮ್ಮ ಸ್ಥಾನಗಳನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಅನೇಕ ಆಪರೇಷನ್ಗಳನ್ನು ನಡೆಸಿ ಆಡಳಿತಪಕ್ಷವೇ ಅಧಿಕಾರಕ್ಕೆ ಬರುವಂತಾಗಿದೆ. ಅಷ್ಟರವರೆಗೂ ಅಧಿಕಾರಿಗಳ ಕೈಯಲ್ಲೇ ಅಧಿಕಾರವಿದ್ದುದ್ದರ ಫಲವೇ ಈಗ ಕಳಪೇ
ಕಾಮಗಾರಿ ಎಂಬ ಹೆಸರಿನಲ್ಲಿ ಹೊರಬೀಳುತ್ತಿದೆ.

ಈ ವ್ಯವಸ್ಥೆಯನ್ನು ನೋಡಿ-ನೋಡಿ ಬೇಸತ್ತ ನಮಗೆ ಅನೇಕ ಸಂಶಯಗಳು, ಪ್ರಶ್ನೆಗಳು ಕಾಡತೊಡಗುತ್ತವೆ.
@ ಕಂಟ್ರಾಕ್ಟರ್ಗಳು ತಮ್ಮದೇ ಅಂದಾಜಿನ ಮೊತ್ತವನ್ನು ಸೃಷ್ಟಿಸುತ್ತಾ, ಅನುಮತಿಯನ್ನು ಎಷ್ಟು ಸರಳವಾಗಿ ಪಡೆಯುತ್ತಾರೆ. ಇಲ್ಲಿ ಕಂಟ್ರಾಕ್ಟರ್ಗಳ ನಡುವಣ ಸ್ಪರ್ಧೆಯೇ ಇಲ್ಲವಾ? ಅಥ
ವಾ ಇವರೆಲ್ಲಾ ಪ್ರೀಪ್ಲಾನ್ಡಾಗಿ ಸಂಪಾದನೆಗೆ ಸರಳ ಸೂತ್ರಗಳನ್ನು ಕಂಡುಕೊಂಡಿದ್ದಾರಾ?
@ ಈ ಎಲ್ಲಾ ವಿಷಯಗಲು ಅಧಿಕಾರಿಗಳ, ಎಂಜಿನಿಯರ್ಗಳ ಗಮನಕ್ಕೆ ಬರೋದೇ ಇಲ್ವಾ? ಬಂದರೂ ಸಮ್ಮನಿದ್ದರೆ, ಕಂಟ್ರಾಕ್ಟರ್ಗಳ
ಮಾಫಿಯಾದಲ್ಲಿ ಇವರ ಪಾಲೂ ಬಹುದೊಡ್ಡದಿರಬಹುದಾ?
@ ಕೇವಲ ಅಮಾನತಿನ ಕ್ರಮತೆಗೆದುಕೊಳ್ಳುವ ಅಧಿಕಾರವಷ್ಟೇ ಆಯುಕ್ತರಿಗೆ, ಮೇಯರ್ಗೆ ಇರೋದಾದರೆ, ಕಳಪೆ ಕಾಮಗಾರಿ,
ಭ್ರಷ್ಟತೆ ಸಾಬೀತಾದರೂ ಕೆಲಸದಿಂದ ಕಿತ್ತು ಹಾಕಲು ಆಗೋದೇ ಇಲ್ವಾ?
@ಕೇವಲ 'ಸ್ವಚ್ಛತೆಯ ಹಾಗೂ ರಸ್ತೆ ಅಗಲೀಕರಣದ' ಕೆಲಸವನ್ನು ಮಾತ್ರ ನಿರ್ವಹಿಸುವ ಬಿ.ಬಿ.ಎಂ.ಪಿಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ದಂಧೆ ನಡೆಯುತ್ತಿದೆಯೆಂದರೆ, ಉಳಿದ ಮಂಡಳಿಗಳ, ವಿಭಾಗಗಳ ಗತಿಯೇನು?
@ ದುಡ್ಡು ಓ.ಕೆ, ಕೆಲಸ ಯಾಕೆ? ಅನ್ನೋ ಈ ವ್ಯವಸ್ಥೆಯಲ್ಲಿ ಅಭಿ
ವೃಧ್ಧಿ ಅನ್ನೋ ಪದಕ್ಕೇನಾದರೂ ಅರ್ಥವಿದೆಯಾ?
@ ಯವುದೇ ಕಾಮಗಾರಿಗೂ ಪೂರ್ವ ನಿಮರ್ಿತ ಆಕೃತಿಯಾಗಲಿ, ನಕ್ಷೆಯಾಗಲಿ ಇಲ್ಲದೆ ಕೆಲಸ ನಿರ್ವಹಿಸಲು ಇದೇನು ಮಕ್ಕಳಾಟವಾ ಅಥವಾ ಇವರೇನು ದೇವಶಿಲ್ಪಿಗಳಾ?

ಹಾಗಾದರೆ ಇದರಿಂದಾಗೋ ನಷ್ಟಕ್ಕೆ ಹೊಣೆಯಾರು, ದೂಷಿಸುವುದಾದರೂ ಯಾರನ್ನ? ಇಂತಹ ಹಾದು ಹೋಗೋ
ಕಿಚ್ಚಿನ ಕಿಡಿಗಳ ಹಿನ್ನೆಲೆಯನ್ನಿಟ್ಟುಕೊಂಡು ದುರ್ಘಟನೆಯ ಸುತ್ತಾ ಜಾಲಾಡಿ ಬರೋಣ...
ಸಂಜೆ ಸುಮಾರು 6:30ರ ಸಮಯ, ಮೋಡ ಕರಗಿ ಮಳೆಯು ಹನಿಹನಿಯಾಗಿ ಒಮ್ಮೆಗೆ ಸುರಿಯುತ್ತಾ, ಒಮ್ಮೆಗೆ ಬಿರುಸಾಗ ತೊಡಗುತ್ತದೆ. ಗುಡುಗಿನ ಶಬ್ದಕ್ಕೆ, ಮಳೆಯ ಚಳಿಗೆ ನಡುಗಿ ಹದಿನಾಲ್ಕು ಅಡಿ ಎತ್ತರದ ಕಲ್ಲಿನ ಉದ್ದನೆಯ ಗೋಡೆ ಧೊಪ್ಪೆಂದು ಕುಸಿಯುತ್ತದೆ, ಅದರ ಕೆಳಗೆ ಮುಗ್ಧ ಹೆಣ್ಣು ಮಗಳೊಬ್ಬಳಿದ್ದಾಳೆ..... ಅಬ್ಬಾ! ಒಂದು ಕ್ಷಣ ಎದೆ ಝಲ್ಲೆನಿಸುತ್ತದಲ್ಲವೆ? ಆದರೂ ಇದು ನಗ್ನ ಸತ್ಯ. ಜೂನ್ 1 ಮಂಗಳವಾರ ಸಂಜೆ ಇಂಥದ್ದೇ ದುರ್ಘಟನೆಯಲ್ಲಿ ಸಿಲುಕಿದ 'ಸಂಜನಾ ಸಿಂಗ್' ಸಾವಿಗೆ ಶರಣಾಗಿದ್ದಾಳೆ.

*ಸಾವಿನ ಆ ಸಂಜೆ:
'ಕೇಂದ್ರೀಯ ವಿದ್ಯಾಲಯ'ದಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ ಸಂಜನಾ ಸಿಂಗ್ ಸಂಜೆ 6:30ರ ವೇಳೆಗೆ ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದಿಢೀರನೆ ಆರಂಭವಾದ ಮಳೆಯಿಂದ ತಪ್ಪಿಸಿಕೊಳ್ಳಲು ಬಳ್ಳಾರಿ ರಸ್ತೆಯ ಹೆಬ್ಬಾಳ ಫ್ಲೈ ಓವರ್ ಬಳಿಯಿರುವ 'ಪಶು ವೈದಕೀಯ ಕಲೇಜಿನ' ಎತ್ತರದ ಕಾಂಪೌಂಡ್ ಗೋಡೆಯ ಬಳಿ ಆಶ್ರಯ ತೆಗೆದುಕೊಳ್ಳಲು ನಿಂತಿದ್ದ ಸಮಯದಲ್ಲಿ ಮೃತ್ಯುವಿನಂತೆ ಮೇಲೆರಗಿದ 14 ಅಡಿ ಎತ್ತರದ ಗೋಡೆ ಸಂಜನಾಳನ್ನು ಅರೆಜೀವವನ್ನಾಗಿಸಿತು. ಈ ಅಫಘಾತದಿಂದ ಪಾರಾಗಲು ಪ್ರಯತ್ನಿಸಿದಳಾದರೂ ಅದು ಫಲನೀಡಲಿಲ್ಲ, ಪೋಲೀಸಿನವರು ಹಾಗು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕೆ ಬಂದು ತುರ್ತು ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ಕರೆದೊಯ್ದರೂ ಅದು ಪ್ರಯೋಜನವಾಗಲಿಲ್ಲ. ಆ ಕೊನೆಯ ಕ್ಷಣದಲ್ಲೂ ಹುಡುಗಿ ತನ್ನ ತಾಯಿಯೊಂದಿಗೆ ಮಾತನಾಡಬೇಕೆಂದು ಹಂಬಲಿಸುತ್ತಾ ಮೊಬೈಲಿನಲ್ಲಿ ಪ್ರಯತ್ನಿಸುತ್ತಿದ್ದಳೆಂಬುದು ಮನಸ್ಸನ್ನು ಕಲಕುತ್ತದೆ. ಗಂಗಾ
ನಗರದ ಲಕ್ಷ್ಮಮ್ಮ ಕಾಲೋನಿಯ ಸಿವಾಸಿಗಳಾದ ಅಶೋಕ್ ಕುಮಾರ್ ಸಿಂಗ್ ಮತ್ತು ಆರತಿಯವರ ಜೇಷ್ಠ ಪುತ್ರಿ ಈ ಸಂಜನಾ ಸಿಂಗ್.

*ಕಾಂಪೌಂಡ್ ಕಾಂಟ್ರಾಕ್ಟರ್ಸ:
ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆೆಯಲ್ಲಿ ಯಾವುದೇ ಯೋಜನೆಗಳಾದರೂ, ಬಿಳ್ಡಿಂಗ್ ಬಿಟ್ಟು ಹೊರಬರುವಷ್ಟರಲ್ಲಿ, ಕಾಸಿನಿಂದ ಹಿಡಿದು ಕೆಲಸದವರೆಗೂ ಶೇ.50-60% ಭಾಗ ಫಿಲ್ಟರ್ ಆಗಿ ಉಳಿಯೋ 40%ಬಾಗ ಮಾತ್ರ ಅನುಷ್ಟಾನವಾಗೋ ಭರವಸೆಗಳಿರುತ್ತವೆ. ಇದರ ನಡುವೆ, ಕಾಂಟ್ರಾಕ್ಟರ್ಗಳ ಕಲಪೆ ಕಾಮಗಾರಿಯೂ ಸೇರಿ ಬೆಂಗಳೂರು ಬೋಳಾಗತೊಡಗಿದೆ. ಚಲನಚಿತ್ರ ನಿಮರ್ಾಪಕರು ಹಾಗು ಪ್ರಸ್ತುತ ಯಶವಂತಪುರ ವಾರ್ಡನ್ ಕಾರ್ಪೊರೇಟರ್ ಆಗಿರುವ ಮುನಿರತ್ನಂ ನಾಯ್ಡು ಈ ಹಿಂದೆ, 2008ರಲ್ಲಿ ಪಶುವೈದಯಕೀಯ ಕಾಲೇಜಿನ ಪಶ್ಚಮ ಭಾಗದ ಸವರ್ಿಸ್ ರಸ್ತೆಯನ್ನು 30 ಮೀಟರ್ನಿಂದ 45 ಮೀಟರ್ಗೆ ವಿಸ್ತರಿಸುವ ಕೆಲಸ ಮತ್ತು ರಸ್ತೆಯ ಕಾಂಪೌಂಡ್ ಗೋಡೆಯ ಪಾಯ ನಿರ್ಮಾಣದ ಕಾಮಗಾರಿಯನ್ನು ಮಾಡಲು ಹಾ
ಗೂ ಎಂಜಿನಿಯರಿಂಗ್ ಮುಗಿಸಿ ಬಂದು ಮೊದಲ ಯೋಜನೆಯಾಗಿ ಕಾಂಪೌಂಡ್ ಗೋಡೆ ನಿರ್ಮಾಣದ ಕಾಮಗಾರಿಯ ಗುತ್ತಿಗೆಯನ್ನು ಪಡೆದವರು ಬಿ.ಹ್ಯೂಮೇಶ್ ಕುಮಾರ್. ಈ ಕಾಮಗಾರಿಯ ಅಂದಾಜು ಪಟ್ಟಿ ಮೊತ್ತ ರೂ 19.72 ಕೋಟಿಗಳು, ಗುತ್ತಿಗೆದಾರ ಮುನಿರತ್ನ ಈ ಪಟ್ಟಿಗೆ ಶೇ. 18 ರಷ್ಟು ಹೆಚ್ಚುವರಿ ಟೆಂಡರ್ ದರ ಸೇರಿಸಿ ಒಟ್ಟಾರೆ 17 ಕೋಟಿಗಳಾಗಿದ್ದು, ಆನಂತರ ಈ ಮೊತ್ತವು ಮತ್ತೆ ಪರಿಷ್ಕರಣೆಗೊಂಡು 29.55 ಕೋಟಿ ರೂಪಾಯಿಗೆ ಏರುತ್ತದೆ. ಇದರಲ್ಲಿ ಹ್ಯೂಮೇಶರ ಗೋಡೆ ಕಾಮಗಾರಿಗೆ 8.62 ಲಕ್ಷ ರೂಗಳ ಅಂದಾಜು 3ನೇ ಜುಲೈ 2009 ರಂದು ರೂಪುಗೊಂಡಿತ್ತು. ಇಷ್ಟೆಲ್ಲ ಖರ್ಚು ವೆಚ್ಚಗಳ ಹೊಳೆಯೇ ಹರಿದರೂ ಕಳಪೆ ಕಾಮಗಾರಿಯೆಂಬ ಕಳ್ಳಾಟ ಮುಗ್ಧ ಜೀವಿಗಳ ಬಲಿಗೆ ಕಾರಣವಾಗುತ್ತಿದೆ. ಇದರಿಂದ ಸ್ಪಷ್ಟವಾಗುವುದು ಅಧಿಕಾರಿಗಳು ಲಂಚದ ಹಣಕ್ಕೆ ನಕಲಿ ಬಿಲ್ ಸೃಷ್ಟಿಸುವುದು, ಕಳಪೆ ಕಾಮಗಾರಿಗೂ ಸರ್ಟಿಫಿಕೆಟ್ ಕೊಡುವುದು ನಿತ್ಯಕಾಯಕವಾಗಿದೆ ಎಂಬುದು. ಗೋಡೆ ಬಿದ್ದ ಹಗರಣದ ಹಿನ್ನೆಲೆಯಲ್ಲಿ ಕ್ರ್ರಿಮಿನಲ್ ಕೇಸನ್ನು ಅಧಿಕಾರಿಗಳಂದ ಹಿಡಿದು ಕಾಂಟ್ರಾಕ್ಟರ್ವರೆಗೂ ಪೋಲೀಸರು ಹೂಡಿದ್ದರೂ ಎಲ್ಲರೂ 'ಬೇಲ್' ಎಂಬ ಬಿಲದ ಮೂಲಕ ಹೊರಬಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ಅಧಿಕಾರಿಗಳನ್ನು ಆಯುಕ್ತರಾದ ಭಗತ್ಲಾಲ್ ಮೀನ ರವರು ಈಗಾಗಲೇ ಅಮಾನತ್ತಿನಲ್ಲಿ ಇಟ್ಟಿದ್ದಾರೆ.
ಅಂದಾಜು ಪಟ್ಟಿಯನ್ನು ತಯಾರಿಸಿದ ಅಧಿಕಾರಿಗಳು:
ವಿಶ್ವನಾಥ್, ಕಾರ್ಯಪಾಲಕ ಅಭಿಯಂತರರು
ರಮಾಕಾಂತ್ ದೇಸಾಯಿ, ಸಹಾಯಕ ಕಾರ್ಯಪಾಲಕ ಅಭಿಯಂತರರು
ಚಂದ್ರಶೇಖರ್, ಕರ್ಯಪಾಲಕ ಅಭಿಯಂತರರು

ಕಾಮಗಾರಿ ನಿರ್ವಹಣೆಯ ಮೇಲುಸ್ರುವಾರಿ ಮತ್ತು ಬಿಲ್ ತಯರಿಸುವ ಕರ್ತವ್ಯವನ್ನು ನಿರ್ವಹಿಸಿದವರು:
ಚಿದಾನಂದಯ್ಯ ಹಾಗು ಪದ್ಮನಾಭ ಕಾರ್ಯಪಾಲಕ ಅಭಿಯಂತರದವರು
ಅಶ್ವಥ್ ನಾರಾಯಣ ರೆಡ್ಡಿ, ಸ.ಕಾ.ಅ
ಸತೀಶ್, ಸಹಾಯಕ ಅಭಿಯಂತರರು

ಕುಲಗೆಟ್ಟ ಕಳಪೆ ಕಮಗಾರಿಗೆ ಸಹಾಯ ಹಸ್ತವನ್ನು ನೀಡಿರುವ ಅಧಿಕರಿಗಳ ತಲೆಯ ಮೇಲೆ ಈಗ ಕತ್ತಿ ತೂಗುತ್ತಾಯಿದೆ. ಇಂತಹ ಕೊಳ್ಳೆ ಹೊಡೆಯೋ ಕಾಂಟ್ರಾಕ್ಟರ್ಗಳ ಕೈ ಹಿಡಿದು ನಡೆಸುತ್ತಿರುವ ಬಿ.ಬಿ.ಎಂ.ಪಿ. ಮಹಾನಗರದ ಮಾರಣಹೋಮಕ್ಕೆ ಸೈನ್ಯ ಸಿದ್ಧ ಮಾಡುತ್ತಿರುವಂತಿದೆ. ಹಣದ ಅರಾಧಕರಂತೆ, ಭ್ರಷ್ಟಾಚಾರದ ಭೂತಗಳಂತೆ ಕಂಗೊಳಿಸುವ ಅಧಿಕಾರಿಗಳು ಬದಲಾಗೋ ವರೆಗೂ ಇಂತಹ ಎಷ್ಟೋ ಮಹಾಗೋಡೆಗಳ ಅವ್ಯವಹಾರಗಳು, ಕಳಪೆ ಕಾಮಗಾರಿಗಳು ಬೆಳಕಿಗೆ ಬಾರದೆ ಮುನ್ನಡೆಯುತ್ತಲೇ ಇರುತ್ತವೆ.

*ಇಂತದ್ದೇಷ್ಟೋ...?
ಸಂಜನಾಳನ್ನು ಬಲಿತೆಗೆದುಕೊಂಡ ಗೋಡೆಗೆ ಸುಮಾರು 10ಅಡಿ ದೂರದಲ್ಲಿರುವ ಅಂಡರ್ ಪಾಸ್ ಮೇಲೆ ದಂಪತಿಗಳು ಬೈಕಿನ ಮೂಲಕ ಹಾದು ಹೋಗುತ್ತಿರುವಾಗ ಗಂಡಿ ಬಿದ್ದಿರುವುದು ಕಾಣದೇ ಬೈಕಿನ ಗಾಲಿ ಗುಂಡಿಗೆ ಇಳಿದು ಲಕ್ಷ್ಮಿ(31)ಯ ಸಾವಿಗೆ ಕಾರಣವಾಗಿತ್ತು. 2009ರ ಸೆಪ್ಟೆಂಬರ್ 9ರಂದು ನಡೆದ ಈ ಘಟನೆಯ ಬಗ್ಗೆ ಬಿ.ಬಿ.ಎಂ.ಪಿಯಲ್ಲಿ ಯಾವುದೇ ದಾಖಲೆಗಳೂ ಇಲ್ಲಾ. ಆದರೆ, ಪೋಲೀಸರ ವರದಿ ಪ್ರಕಾರ ಜೆಲ್ಲಿ ಮತ್ತು ಸಿಮೆಂಟ್ ಸರಿಯಾಗಿ ಬಳಸಿಲ್ಲದ ಕಾರಣ ಅಂಡರ್ ಪಾಸಿಗೆ ಆಧಾರವಾಗಿ ಅಳವಡಿಸಿದ್ದ ಪ್ರೀಕಾಸ್ಟ್ ಎಲಿಮೆಂಟ್ ಸಂಕುಚಿತವಾಗಿ ದುರ್ಘಟನೆಗೆ ಸಾಕ್ಷಿಯಾಗಿದೆ. ಇದೂವರೆಗೂ ಗುತ್ತಿಗೆದಾರನ ಬಗೆಗೆ ಯಾವುದೇ ರೀತಿ ತಲೆಕೆಡಿಸಿಕೊಂಡಿಲ್ಲಾ.

ಇತ್ತೀಚಿಗೆ ಧರ್ಮರಾಯಸ್ವಾಮಿ ವಾಡರ್್ನ ದಾಸಪ್ಪ ಆಸ್ಪತ್ರೆ ಆವರಣದಲ್ಲಿ ಮೇಯರ್ ನಟರಾಜ್ರವರು ಭೇಟಿ ನೀಡಿದಾಗ ಬೆಳಕಿಗೆ ಬಂದಂತಹ ದಿಗ್ಭ್ರಮೆ ಮೂಡಿಸುವಂತ ಸತ್ಯವೆಂದರೆ, ಜಿ.ಮಂಜುನಾಥ್ ಎಂಬ ಕಂಟ್ರಾಕ್ಟರ್ ಒಂದೇ ಅಂತಸ್ತಿನಲ್ಲಿ ಮಳಿಗೆ ಕಟ್ಟಲು ಅಂದಾಜು ಮೊತ್ತ 20 ಲಕ್ಷಕ್ಕಿಂತ ಹೆಚ್ಚುವರಿ 5.5ಲಕ್ಷ ರೂಗಳನ್ನು ಅಂದರೆ 25.5ಲಕ್ಷ ರೂಗಳನ್ನು ಪಡೆದಿದ್ದಾನೆ. ಹಾಗೂ ಆಸ್ಪತ್ರೆಯ ಒಳಗಡೆ ಕಾಂಕ್ರೀಟ್ ಹಾಕಲು ಮತ್ತು ವಾಡರ್ಿನ ಕಛೇರಿಯ ಕಾಂಪೌಂಡ್ ಕಟ್ಟಿ, ಝೋರಿಯಲ್ ರೋಡಿನ ಬಳಿ ಚರಂಡಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ಪ್ರತ್ಯೇಕ 21.9ಲಕ್ಷರೂ ಹಾಗು 22ಲಕ್ಷ ರೂಗಳನ್ನು ಶಂಕರ್ ಎಂಬ ಗುತ್ತಿಗೆದಾರ ಪಡೆದಿದ್ದಾನೆ. ಆದರೆ, ಅಚ್ಚರಿ ಮೂಡಿಸಿದ್ದೇನೆಂದರೆ ಆ ಜಾಗದಲ್ಲಿ ಕಿಟಕಿ, ಬಾಗಿಲು, ವೈಯರಿಂಗ್ ಎಂತದ್ದೂ ಆಗಿಲ್ಲ ಮತ್ತು ಕಾಂಪೌಂಡನ್ನು ವಾರ್ಡನ ಸುತ್ತಾ ಎಲ್ಲೋ ಕಾಣದಾಗಿದೆಯೆಂಬಂತೆ ಹುಡುಕಾಡಿದರೂ ಸಿಗಲಿಲ್ಲ. ಹಾಗಾದರೆ ಇಲ್ಲಿ ಯಾವುದೇ ಕಾಮಗಾರಿಗಳು ನಡೆದಿಲ್ಲ ಕೇವಲ ಮೇಲುಸ್ತುವಾರಿಯ ನಾಟಕ ನಡೆದು ಎಂಜಿನಿಯರ್ ಮೋಹನ್ ಪೂರ್ಣ 69.5ಲಕ್ಷ ರೂಗಳ ಬಿಲ್ಗಳನ್ನು ಕ್ಲಿಯರ್ ಮಾಡಿರುವುದು ಗಮನಕ್ಕೆ ಬಂದಿದೆ. ಕೆಲಸವೇ ಆಗದೆ ಬಿಲ್ ಕ್ಲಿಯರ್ ಆದದ್ದು ಮೇಯರ್ ನಟರಾಜರ ಕಣ್ಣುಕೆಂಪಾಗಿಸಿದೆ ತಕ್ಷಣದಿಂದಲೇ ಎಂಜಿನಿಯರ್ನನ್ನು ಅಮಾನತಿನಲ್ಲಿಡಲಾಗಿದೆ. ಆ ಎಂಜಿನಿಯರ್ ಇದೂವರೆಗೂ ಕಣ್ಣಿಗೆ ಬಿದ್ದಿಲ್ಲ.

ಬಿ.ಬಿ.ಎಂ.ಪಿಯ ಮುಖ್ಯ ಎಂಜಿನಿಯರ್ ಆಗಿರುವ ಚಿಕ್ಕರಾಯಪ್ಪ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿದ್ದಾಗ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿತ್ತೆಂಬುದರ ವಿರುದ್ಧ ಲೋಕಾಯುಕ್ತರು ಸಕರ್ಾರಕ್ಕೆ ಪತ್ರ ಬರೆದಿದ್ದರು. ಇದರಂತೆ 2007ರ ನವೆಂಬರ್ 26ರಂದು ಸರಕಾರದ ಆದೇಶ ಹೊರಬಿದ್ದಿತ್ತು. ಆದರೆ, ಇದರಿಂದ ಯಾವುದೇ ಕ್ರಮವೂ ತೆಗೆದುಕೊಂಡಂತಿಲ್ಲ. ಇಂತಹ ಎಷ್ಟೋ ಆದೇಶಗಳು ಧೂಳು ತಿನ್ನುತ್ತ ಕುಳಿತಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಬಿ.ಬಿ.ಎಂ.ಪಿ ಆಯುಕ್ತರಿಗೆ ಮೇ11 ಹಾಗೂ ಮೇ25 ರಂದು ಸಚಿವ ಅಶೋಕ್ ಕಳಹಿಸಿದ್ದ ಟಿಪ್ಪಣಿಯ ಬಗೆಗೆ ಯಾವುದೇ ಕ್ರಮವನ್ನೂ ಇದುವರೆಗೆ ಕೈಗೊಂಡಿಲ್ಲ. ಕಾಮಗಾರಿಯನ್ನು ಪರಿಶೀಲಿಸದೆ ಬಿಲ್ ಪಾವತಿಸಬೇಡಿ ಹಾಗೂ ಈ ಕೆಳಗಿನ ಕಂಟ್ರಾಕ್ಟರ್ಗಳ ಕಾಮಗಾರಿಯ ಬಗೆಗೆ ದೂರುಗಳು ಬಂದಿದ್ದು ಇವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪಟ್ಟಿ ಇಂತಿದೆ:
1. ವೆಂಕಟೇಶ್ವರ ಕನ್ಸ್ಟ್ರಕ್ಷನ್ ಕಂಪನಿಯ ಎಂ.ಎಸ್.ವೆಂಕಟೇಶ್
2. ವೃಷಭಾಧ್ರಿ ಕನ್ಸ್ಟ್ರಕ್ಷನ್ ಕಂಪನಿಯ ಮುನಿರತ್ನಂ ನಾಯ್ಡು
3. ಮಾರಪ್ಪ ನಾಯ್ಡು
4. ಜಯರಾಂ
5. ಮೈಲೇಗೌಡ
ಇವರ ಮೇಲೆ ಸಿವಿಲ್ ಏಡ್ ಅಥವಾ ಟಾರ್ಸ್ಟೀಲ್ನಿಂದ ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸೂಚಿಸಲಾಗಿದೆ. ಆದರೆ, ಇನ್ನೂ ಯಾವುದೂ ಸಿದ್ದವಾಗಲಿಲ್ಲ. ಅಧಿಕಾರಿಗಳು ಎತ್ತಂಗಡಿಯಾಗಬಹುದೆಂಬ ಭಯದಿಂದ ಆದೇಶಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ, ಸೂಚನೆಗಳನ್ನು ಮುಚ್ಚಿಡಲಾಗುತ್ತಿದೆ ಹಾಗು ಕಡತಗಳೇ ಕಾಣೆಯಾಗುತ್ತಿವೆ ಎಂಬ ಸುದ್ಧಿ ಹೊರಬಿದ್ದಿದೆ.

* ಮುನಿರತ್ನರ ಮಾತು....
ಕಾಂಗ್ರೆಸ್ ಪಕ್ಷದಿಂದ ಯಶವಂತಪುರ 37ನೇ ವಾರ್ಡ್ನಿಂದ ಕಾರ್ಪೋರೆಟರಾಗಿ ಆಯ್ಕೆಯಾಗಿರುವ ಮುನಿರತ್ನಂ ನಾಯ್ಡು ವಿರೋಧ ಪಕ್ಷದಲ್ಲಿದ್ದು 'ನಾಯಿ-ನೀರಿನ ವಿಚಾರದಲ್ಲಿ ತಮ್ಮ ವಿಶಿಷ್ಟ ಮಾತಿನಿಂದ ವಿಶೇಷ ಕೌನ್ಸಿಲ್ ಸಭೆ ಹಾಗು ಮಾಸಿಕ ಸಭೆಗಳಲ್ಲಿ ಗಮನ ಸೆಳೆಯುತ್ತಿದ್ದರು. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರೆ ನನಗೂ ಇದಕ್ಕೂ ಸಂಬಂಧವೇ ಇಲ್ಲವೆಂದು ಮತ್ತು ತಾನು ರಾತ್ರೋರಾತ್ರಿ ನಡೆಯುತ್ತಿದ್ದ 3,400 ಕೋಟಿ ರೂಗಳ ಕಾಮಗಾರಿಗಳ ಟೆಂಡರ್ ಹಗರಣವನ್ನು ಬಯಲಿಗೆಳೆದ ಕಾರಣ ತನ್ನ ಮೇಲೆ ಈ ಆರೋಪವನ್ನು ವಹಿಸಲಾಗಿದೆ ಎಂದು ಹೇಳಿದ್ದರು. ತದನಂತರದಲ್ಲಿ ಮಾಧ್ಯಮದವರ ಮುಂದೆ ವೀರಾವೇಷದಿಂದ 'ನನ್ನ ಮೇಲಿನ ಆರೋಪ ಸಾಬೀತಾದರೆ, ನನ್ನ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಹಾಗು ಮೃತರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಧನವನ್ನು ನನ್ನ ಕೈಯಿಂದ ಕೊಡಿಸುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಆದರೆ, ಮೇಯರ್ ರಚಿಸಿದ್ದ ಸಮಿತಿಯ ವರದಿ ಬಂದಿದ್ದು, ಅದರಲ್ಲಿ ಮುನಿರತ್ನರ ಆರೋಪ ಸಾಬೀತಾಗಿದೆ. ಈಗ ಮುನಿರತ್ನ ತನ್ನ ವರಸೆಯನ್ನು ಬದಲಿಸಿಕೊಂಡಿದ್ದು, 'ನಾನು ನ್ಯಾಯಾಲಯದ ಆದೇಶಕ್ಕೆ ಸದಾ ತಲೆಬಾಗುತ್ತೇನೆ' ಎನ್ನುತ್ತಾ ಹಿಂದೆ ಹೇಳಿದ್ದ ಹೇಳಿಕೆಗಳನ್ನು ಧೂಳೀಪಟವನ್ನಾಗಿಸಿದ್ದಾರೆ. ಅಷ್ಟೇ ಅಲ್ಲದೇ 'ಗುಣಮಟ್ಟದ ಬಗ್ಗೆ ಯಾರೂ ನನ್ನನ್ನು ಕೇಳಲಿಲ್ಲ, ನಾನೂ ಏನೂ ಹೇಳಲಿಲ್ಲ' ಎಂದೂ ಹಾಗು ನಾನು ಇದೂವರೆಗೂ ಹಣವನ್ನು ಪಡೆದೇ ಇಲ್ಲವೆಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ. ಮೃತಳ ತಂದೆ-ತಾಯಿ ತಪ್ಪಿತಸ್ಥರಿಗೆ ಶಕ್ಷೆಯಾಗಬೇಕೆಂದು ಪಣತೊಟ್ಟಿದ್ದು, ಲೋಕಾಯುದ್ತರಿಗೆ ದೂರನ್ನು ಸಲ್ಲಿಸಿದ್ದಾರೆ, ಹಾಗು ಇದರಲ್ಲಿ ನ್ಯಾಯ ಸಿಗದಿದ್ದರೆ, ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುತ್ತೇವೆ ಎಂಬ ಸಂಕಲ್ಪ ಮಾಡಿದ್ದಾರೆ. ಮುನಿರತ್ನ ಫೋನಿನ ಮೂಲಕ ಧಮಕಿ ಹಾಕಿರುವುದು ತನ್ನ ತಪ್ಪಿನಿಂದ ಜಾರಿಕೊಳ್ಳುವ ಪ್ರಯತ್ನವಾಗಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಒಂದು ಘಟನೆ ನೆನಪಿಗೆ ಬರುತ್ತದೆ. ಒಬ್ಬ ತಾನು ಬಾವಿತೋಡಿಸುವುದಾಗಿ, ಬ್ಯಾಂಕಿನಲ್ಲಿ ಅರ್ಜಿ ಹಾಕಿ ಸಾಲ ಪಡೆದು, ಬಾವಿಯ ಕೆಲಸಗಳ ವರದೆಯನ್ನು ಆಗಾಗ್ಗೆ ಸಲ್ಲಿಸುತ್ತಾ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದ. ಆ ಕೆಲಸವು ಇನ್ನೇನು ಮುಗಿಯುವ ಹಂತದಲ್ಲಿದೆ ಎಂದು ತಿಳಿಸಿದ್ದ ಸಾಲಗಾರ ಕೆಲವು ದಿನಗಳ ಬಳಿಕ ಬಂದು, ನನ್ನ ಬಾವಿಯು ಎಲ್ಲೋ ಕಾಣೆಯಾಗಿ ಹೋಗಿದೆ, ಎಷ್ಟು ಹುಡುಕಿದರೂ ಸಿಗುತ್ತಿಲ್ಲವೆಂದು ದೂರು ನೀಡುತ್ತಾನೆ. ಆಗ ಅವನಿಂದ ಲಂಚ ಪಡೆದು ಸಹಿ ಹಾಕಿದ್ದ ಫೀಲ್ಡ್ಆಫೀಸರ್ ಕಕ್ಕಾಬಿಕ್ಕಿಯಾಗಿ ತನ್ನ ಕೆಲಸ ಕಳೆದುಕೊಂಡಿದ್ದ. ಇಂತಹ ಎಷ್ಟೋ ಅಧಿಕಾರಿಗಳು ಬಿ.ಬಿ.ಎಂ.ಪಿ.ಯಲ್ಲಿದ್ದಾರೆ, ಹಾಗೇ ಮುನಿರತ್ನರಂತಹ ಕಾಂಟ್ರಾಕ್ಟರುಗಳೂ ಲೆಕ್ಕಕ್ಕಿಲ್ಲ. ಈಗ ಕಳಪೆ ಕಾಮಗಾರಿ ಮಾಡುತ್ತಿರುವವರು ಮುಂದೊಂದು ದಿನ ಈ ಘಟನೆಯ ಪ್ರೇರಣೆ ಪಡೆದು 'ನಾವು ಕಾಮಗರಿ ನಡೆಸಿದ್ದೆವು, ಆದರೆ ಯಾರೋ ಅದನ್ನ ಅಪಹರಿಸಿದ್ದಾರೆ' ಎಂದು ಪ್ರತಿದೂರನ್ನು ನೀಡುವ ಸಂಭವವನ್ನು ತೆಗೆದು ಹಾಕುವಂತಿಲ್ಲ.

* ವರದಿ ಹೀಗಿದೆ:
ಬಿ.ಬಿ.ಎಂ.ಪಿಯ ಮುಖ್ಯ ಎಂಜಿನಿಯರ್ 'ದೇವರಾಜ್'ರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯು ಬುಧವಾರ ಮೇಯರ್ ಎಸ.ಕೆ.ನಟರಾಜ್ರವರ ಮುಂದೆ ವರದಿಯನ್ನು ಇಟ್ಟಿದೆ. ಮಳೆಯಿಂದ 22 ಮೀಟರನಷ್ಟು ಗೋಡೆ ಕುಸಿದಿದ್ದು, ಇದನ್ನು ಒಂದೂವರೆ ಅಡಿಯಷ್ಟು ಎತ್ತರದ ಪೈಪಿನ ಮೇಲೆ ನಿಮರ್ಿಸಿರುವುದು ಬೆಳಕಿಗೆ ಬಂದಿದೆ. ಒಟ್ಟು 4.45 ಮೀಟರ್ ಎತ್ತರವಿರುವ ಗೋಡೆಗೆ ಕನಿಷ್ಟ ಎರಡೂವರೆ ಮೀಟರ್ನಷ್ಟು ಪಾಯದ ಅವಶ್ಯಕತೆ ಇದೆ. ಆದರೆ, ಇಲ್ಲಿ ಎರಡು ಮೀಟರ್ ಪಾಯವೂ ಇಲ್ಲದಿರುವುದು ಕಂಡುಬಂದಿದೆ ಹಾಗೂ ಸಿಮೆಂಟ್, ಮರಳು, ಜೆಲ್ಲಿಯ ಮಿಶ್ರಣವನ್ನು 1:4:8 ರ ಅನುಪಾತದಲ್ಲಿ ಉಪಯೋಗಿಸಿಲ್ಲವಾದ್ದರಿಂದ, ಇದು ಕಳಪೆ ಗುಣಮಟ್ಟದ ಕಾರ್ಯವೆಂದು ಸಾಬೀತಾಗಿದೆ. ಕಾಂಪೌಂಡ್ ಕಟ್ಟಲು ಬಾಂಡ್ ಕಲ್ಲುಗಳನ್ನು ಉಪಯೋಗಿಸಬೇಕಿತ್ತು, ಕಲ್ಲನ್ನು ಇಂಟರ್ಲಾಕ್ ಸಿಸ್ಟಮ್ ಬಳಸಿ ಕಟ್ಟಬೇಕಿತ್ತು ಹಾಗೂ ಕಲ್ಲುಗಳ ಮಧ್ಯೆ ಒಳಗೆ 1:6 ಮತ್ತು ಹೊರಗೆ 1:3ರ ಅನುಪಾತದಲ್ಲಿ ಸಿಮೆಂಟ್ ಮರಳು ಮಿಶ್ರಣವನ್ನು ತುಂಬಬೇಕಿತ್ತು. ಇದ್ಯಾವುದೂ ಆಗದೆ ಕಲ್ಲಿನ ಮಧ್ಯೆ ರಂಧ್ರಗಳು ಉಂಟಾಗಿದೆ, ಅಷ್ಟೇ ಅಲ್ಲದೆ ಉಳಿದ ಗೋಡೆಯೂ ಈಗಾಗಲೇ ಬಿರುಕುಬಿಟ್ಟಿದ್ದು, ಇನ್ನೇನು ಉರುಳುವ ಎಣಿಕೆಯಲ್ಲಿದೆ. ಈ ವರದಿಯಿಂದ ತಿಳಿದು ಬಂದ ಪ್ರಮುಖ ಅಮಶವೆಂದರೆ,
ಅಂದಾಜು ಪಟ್ಟಿಯನ್ನು ಸರಿಯಾಗಿ ತಯಾರಿಸಿಲ್ಲ.
ಕಾಮಗಾರಿಯ ನಿರ್ಮಾಣದ ನಕ್ಷೆಯನ್ನೇ ತಯಾರಿಸಿಲ್ಲ.
ಕಾಮಗಾರಿಗಳಿಗೆ ಮೆಲ್ವಿಚಾರಣೆ ಮತ್ತು ತಪಾಸಣೆ ಮಾಡಿರುವುದಿಲ್ಲ
ಮೇಲ್ಭಾಗದ ನೀರು ಆಚೆ ಹರಿದು ಹೋಗಲು ಸಣ್ಣ-ಸಣ್ಣ ಕಿಂಡಿಗಳನ್ನು ನಿರ್ಮಾಣ ಮಾಡಿಲ್ಲದ್ದು ಗೋಡೆಯು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಮೇಯರ ನಟರಾಜ ಹೇಳಿರುವ ಪ್ರಕಾರ ತಮಗೆ ಯವುದೇ ಕ್ರಮವನ್ನು ಕೈಗೊಳ್ಳುವ ಅಧಿಕಾರವಿಲ್ಲ. ಈ ವರದಿಯನ್ನು ಎಲೆಕ್ಷನ್ ಕಮಿಷನ್ರಿಗೆ, ಕೋಟರ್ಿಗೆ ಹಾಗು ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳುತ್ತಾರೆ. ಹಾಗೂ ಸಚಿವ ಅಶೊಕ್ರವರ ಟಿಪ್ಪಣಿಗಳ ಬಗೆಗೆ ಗಮನಹರಿಸುತ್ತೇವೆ. ಆದರೆ, ಈ ಹಿಂದೆ ನಡೆದಿರುವ ಕಾಮಗಾರಿಗಳ ಕಳಪೆ ಮಟ್ಟವನ್ನು ಪರಿಶೀಲಿಸುವುದು ಅಷ್ಟು ಸುಲಭದ ಮಾತಲ್ಲ ಎಂದೂ ಸೇರಿಸಿದ್ದಾರೆ.

ಈ ಘಟನೆಗಳು, ವರದಿಗಳು, ವಾದ-ವಿವಾದಗಳು ಏನೇ ಹೇಳಿದರೂ, ಸಂಜನಾಳಂತಹ ಮುಗ್ಧ ಜೀವ ಬಲಿಯಾಗಿರುವುದು ನಿಜ. ಇಂತಹ ದುರ್ಘಟನೆಗಳಿಂದ ಬಿ.ಬಿ.ಎಂ.ಪಿ.ಯವರ ಕೆಲಸಗಳೆಂದರೆ ಜನ ಭಯ-ಭೀತರಾಗಿದ್ದಾರೆ, ರಸ್ತೆಯಲ್ಲಿ ಓಡಾಡಲೂ ಹಿಂದು-ಮುಂದು ನೋಡುವಂತಾಗಿದೆ. ಹಾಗಾದರೆ, ಅಧಿಕಾರಿಗಳು, ಕಂಟ್ರಾಕ್ಟರ್ಗಳು, ಕಾರ್ಪೋರೇಟರ್ಗಳು ಮನುಷ್ಯತ್ವವನ್ನೇ ಕಳೆದುಕೊಂಡು ಮೃಗಗಳಾಗಿದ್ದಾರಾ? ಎಂಬಂತಹ ಪ್ರಶ್ನೆಗಳು ಕಾಡತೊಡಗುತ್ತವೆ.




=

0 Comments:

Post a Comment