Saturday, July 17, 2010




ವಿದ್ಯಾರ್ಥಿ
ಉಪಗ್ರಹ "ಸ್ಟುಡ್ ಸ್ಯಾಟ್"

ಮೂರೂ, ಎರಡೂ, ಒಂದೂ...., ಅಬ್ಬಾ! ಉಸಿರುಗಟ್ಟುವ ಕ್ಷಣವದು, ಕಣ್ಣು ಮಿಟಿಕಿಸುವುದರಲ್ಲಿ ಬುಸ್ ಎಂದು ಹಾರಲು ಸಿದ್ಧವಾಗಿ ನಿಂತಿದ್ದ ಪಿ.ಎಸ್.ಎಲ್.ವಿ-ಸಿ15 ಹೆಸರಿನ ಗಗನ ನೌಕೆ. ತನ್ನ ಒಡಲಲ್ಲಿ ಐದು ಉಪಗ್ರಹಗಳನ್ನು ಪೋಣಿಸಿಕೊಂಡು ಭೂಮಿಯಿಂದ ಮೇಲಕ್ಕೆ ಹಾರಿ 637ಕಿ.ಮೀ. ದೂರದಲ್ಲಿ ಒಂದಾದಮೇಲೊಂದರಂ
ತೆ ತಕ್ಕ ಕಕ್ಷೆಗೆ ಉಪಗ್ರಹಗಳನ್ನು ಸುರಕ್ಷಿತವಾಗಿ ಸೇರಿಸಿತು, ಅದೂ ಕೇವಲ 17.4 ನಿಮಿಷಗಳಲ್ಲಿ. ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವು ಕಕ್ಷೆಸೇರಿದೆ. ಸುಮಾರು
35 ವಿದ್ಯಾಥರ್ಿಗಳ ತಂಡ ಇಸ್ರೋ ವಿಜ್ಞಾನಿಗಳ ಸಹಕಾರದೊಂದಿಗೆ ಸತತ ಒಂದೂವರೆ ವರ್ಷಗಳ ಶ್ರಮದ ಫಲವಾಗಿ "ಸ್ಟುಡ್ ಸ್ಯಾಟ್"ನಿರ್ಮಾಣವಾಗಿತ್ತು. ಕ್ರಯೋಜನಿಕ್ ಎಂಜಿನ್
ಮೊದಲ ಬಾರಿಗೆ ಬಳಸಿದ್ದ ಜಿ.ಎಸ್.ಎಲ್.ವಿ-ಡಿ3 ಏಪ್ರಿಲ್ನಲ್ಲಿ ಉಡಾವಣೆಗೊಂಡ ಕೆಲಕ್ಷಣದಲ್ಲೇ ಬಂಗಾಳಕೊಲ್ಲಿಯನ್ನು ಸೇರಿತ್ತು. ವಿಜ್ಞಾನಿಗಳು ಸೋಲಿನಿಂದ ಹಿಂಜರಿಯದೆ ಮೂರೇ ತಿಂಗಳಲ್ಲಿ ಕಠಿಣ ಶ್ರಮವಹಿಸಿ ಈ ಬಾರಿ ಯಶಸ್ಸನ್ನು ತಮ್ಮದಾಗಿಸಿಕೊಂಡು ಬೇಸರವನ್ನು ದೂರವಾಗಿಸಿದ್ದಾರೆ.
230ಟನ್ ತೂಕ, 44.4ಮೀ ಎತ್ತರವಿರುವರ ಈ
ಗಗನ ನೌಕೆ, ನಾಲ್ಕು ಹಂತಗಳನ್ನು ಒಳಗೊಂಡಿದೆ. ಇದರ ತಯಾರಿಗೆ ಸುಮಾರು 260 ಕೋಟಿಯಷ್ಟು ಖಚರ್ಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಸೋಮವಾರ ಉಡಾವಣೆಗೊಂಡ ಪಿ.ಸ್.ಎಲ್.ವಿಯಲಿದ್ದ ಐದು ಉಪಗ್ರಹಗಳು:
*ದೂರ ಸಂವೇದಿ ಉಪಗ್ರಹ ಕಾಟರ್ೊಸ್ಯಾಟ್-2ಬಿ(690ಕಿ.ಲೊ)
*ಸ್ಟುಡ್ ಸ್ಯಾಟ್(850ಗ್ರಾಂ)
*ಅಲ್ಜೇರಿಯಾದ ಅಲ್ಸ್ಯಾಟ್(116ಕಿ.ಲೊ)
*ಕೆನಡಾ ಮತ್ತು ಸ್ವಿಡ್ಜರ್ಲ್ಯಾಂಡ್ ನ್ಯಾನೊ ಉಪಗ್ರಹಗಳು(6ಕಿ.ಲೊ,1ಕಿ.ಲೊ)
*ಒಷನ್ ಸ್ಯಾಟ್-2
1994ರಿಂದ2009ರವರೆಗೆ 22ವಿದೇಶಿ ಉಪಗ್ರಹಗಳು, 17 ಭಾರತೀಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದ್ದು, 2013ರ ವೇಳೆಗೆ ಮಾನವರಹಿತ ಚಂದ್ರಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ಕಾಟರ್ೊಸ್ಯಾಟ್-2ಬಿ ಇಸ್ರೋದ
ಅತ್ಯಂತ ದೂರ ಸಂವೇದಿ ಉಪಗ್ರಹವಾಗಿದ್ದು, ಎಲ್ಲಾ ಬಣ್ಣಗಳಿಗೂ ಪ್ರತಿಕ್ರಿಯೆ ತೋರುವ ಕ್ಯಾಮರಾವನ್ನು ಅಳವಡಿಸಲಾಗಿದೆ. 0.8ಮೀ ಅಂತರಿಕ್ಷೀಯ ಸ್ಪಷ್ಟತೆ ಹಾಗೂ 9.6ಕಿ.ಮೀ ದೂರದ ಗೋಚರತೆ ಸಾಮಥ್ರ್ಯ ದೇಶದ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಈ ಉಡಾವಣೆಯಲ್ಲಿನ ಸ್ವಾರಸ್ಯಕರ ಸಂಗತಿ, "ಇಂಟರ್ನ್ಯಾಶನಲ್ ಆಸ್ಟ್ರೋನಾಟಿಕಲ್ ಸೆಮಿನಾರ್"ನಿಂದ ಸ್ಫೂರ್ತಿ ಪಡೆದ ನಮ್ಮ ಕನರ್ಾಟಕ ಹಾಗೂ ಆಂಧ್ರಪ್ರದೇಶದ ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಪಿಕೊ(ಅತಿ ಸಣ್ಣ) ಉಪಗ್ರಹವನ್ನು ತಯಾರಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ. ಒಂದು ಕೆ.ಜಿ.ಗಿಂತಲೂ ಕಡಿಮೆ ತೂಕ ಹಾಗೂ 10ಸೆಂ.ಮೀ.*10ಸೆಂ.ಮೀ*13.5ಸೆಂ.ಮೀ ಅಳತೆಯೊಂದಿಗೆ ಹಗುರವಾಗಿದ್ದರೂ, 90ಮೀ ರೆಸಲ್ಯೂಶನ್ ಸಾಮಥ್ರ್ಯದ ಕ್ಯಾಮರಾವನ್ನು ಬಳಸಿದ್ದು ಹವಾಮಾನ ಹಾಗು ಬೆಳೆಗೆ ಸಂಬಂಧಿಸಿದ ಅಧ್ಯಯನವನ್ನು ನಡೆಸಲು ಸಹಕಾರಿಯಾಗಲಿದೆ. ಉಪಗ್ರಹ ಉಡಾವಣೆಗೊಳ್ಳುತ್ತಿದ್ದಂತೆ ವಿಜ್ಞಾನಿಗಳು ಸಂಭ್ರಮಿಸಿದರಾದರೂ, ವಿದ್ಯಾರ್ಥಿಗಳಲ್ಲಿ ಆತಂಕದ ಛಾಯೆ ಮಡುಗಟ್ಟಿತ್ತು, ಸುಮಾರು ಒಂದೂವರೆ ಗಂಟೆಯ ನಂತರ ಬೆಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಅಳವಡಿಸಿದ್ದ ರಿಸೀವರಗಳ ಮೂಲಕ ಸಿಗ್ನಲ್ ಹಾದು ಬೀಪ್ ಶಬ್ದದೊಂದಿಗೆ ಕಂಪ್ಯೂಟರ್ ಪರದೆಯ ಮೇಲೆ ಚಿತ್ರ ಮೂಡುತ್ತಿದ್ದಂತೆ ಯುವ ವಿಜ್ಞಾನಿಗಳ ಕಣ್ಣಿನಲ್ಲಿ ಹೊಳಪು ಮೂಡಿ ಹಬ್ಬದ ಸಂಭ್ರಮ ಮನೆಮಾಡಿತು. ಎನ್.ಎಂ.ಐ.ಟಿ, ಆರ್.ವಿ.ಸಿ.ಇ, ಎಂ.ಎಸ್.ಆರ್.ಸಿ, ಎಂ.ಎನ್.ಎಸ್ ಹಾಗೂ ಬಿ.ಎಂ.ಎಸ್ ಕಾಲೇಜುಗಳು ಸೇರಿ ಒಟ್ಟು 55ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಉಪಗ್ರಹವನ್ನು ತಯಾರಿಸಲಾಗಿದ್ದು, ರಿಸೀವರ್ಗಳಿಗೆ ನಿಟ್ಟೆ ಸಂಸ್ಥೆ 45ಲಕ್ಷ ಖಚರ್ು ಮಾಡಿದೆ.
ಭಾನುವಾರ ರಾತ್ರಿಯಿಡೀ ವಿಶ್ವಕಪ್ ಪುಟ್ಬಾಲ್ನ ಫೈನಲ್ ಪಂದ್ಯದ ವೀಕ್ಷಣೆಯ ಗುಂಗಿನಲ್ಲಿದ್ದ ಜನರು ಒಂದು ಕಡೆಯಾದರೆ, ತಮ್ಮ ಕನಸನ್ನು ಸಾಕಾರಗೊಳ್ಳುವ ಕೊನೆಯ ಹಂತದಲ್ಲಿದ್ದ 35 ವಿದ್ಯಾರ್ಥಿಗಳು ಮೂರು ತಂಡಗಳಾಗಿ ಮಾರ್ಪಟ್ಟು, ಒಂದು ಗುಂಪು ಶ್ರೀಹರಿಕೋಟಾದಲ್ಲಿ, ಮತ್ತೆರಡು ಗುಂಪು ಬೆಂಗಳೂರಿನ ಪೀಣ್ಯದಲ್ಲಿರುವ "ಇಸ್ಟ್ರಾಟ್" ಹಾಗೂ ಯಲಹಂಕದ "ನಾಸ್ಟ್ರಾಕ್" ಕೇಂದ್ರಗಳಲ್ಲಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾರ್ಯನಿರ್ವಹಿಸಿ ಕೊನೆಗೂ ಸಾಧನೆಯ ಶಿಖರವನ್ನೆ ಏರಿದ್ದಾರೆ. ಯುವಕರ ಆಸಕ್ತಿ ಅದ್ಭುತ ಅನುಭವವನ್ನೇ ನೀಡಿದೆ, ಇಸ್ರೋ ವಿಜ್ಞಾನಿಗಳ ಮಾರ್ಗದರ್ಶನ ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ವರವೇ ಸರಿ. ಈ ಎಲ್ಲಾ ಪರಿಣತಿಯನ್ನು ಪಡೆದ-ಪಡೆಯುವ ವಿದ್ಯಾರ್ಥಿ ಸಮೂಹ ವಿದೇಶದ ಕಲ್ಪನಾವಿಲಾಸಕ್ಕೆ ಮಾರು ಹೋಗದೆ ದೇಶದ ಪ್ರಗತಿದೆ ದುಡಿಯುವ ಪಣ ತೊಟ್ಟರೆ ಇನ್ನು ಹತ್ತೇ ವರ್ಷಗಳಲ್ಲಿ ಭಾರತ ದೇಶವು ಇಡೀ ಪ್ರಪಂಚವೆ ಬೆರಗಿನಿಂದ ನೋಡುವಂತೆ ಮಾಡಬಹುದು

0 Comments:

Post a Comment