Friday, July 9, 2010


ಪ್ರೀತಿ
ಮನಗಳ ಮಧುರ ಮಿಲನ "ಪ್ರೀತಿ", ಜೀವನವೇ "ಪ್ರೀತಿ", ಬಾಂಧವ್ಯದ ಬೆಸುಗೆ "ಪ್ರೀತಿ", ಮನಸಲ್ಲಿ
ಮೂಡಿ ಕಣ್ಣಲ್ಲಿ ಅರಳೋದು "ಪ್ರೀತಿ"....ಹೀಗೇ ಎಷ್ಟು ಪದಗಳಲ್ಲಿ ಹೇಳಿದರೂ ಮುಗಿಯದಂತದ್ದು ಸಾಗರಕ್ಕೂ ಮಿಗಿಲಾದದ್ದು ಈ
"ಪ್ರೀತಿ".
"ಪ್ರೀತಿ" ಅನ್ನೋ ಪದ ಕೇಳುತ್ತಿದ್ದಂತೆ ಮನಸ್ಸಿನಲ್ಲಿ ಅದೆಂತದೋ ಭಾವನೆ ಉಮ್ಮಳಿಸಿ ಬರುತ್ತದೆ,
ಏನೋ ಆನಂದ, ಏನೋ ಪಡೆದಂತ ತೃಪ್ತಿ. ಅಂದರೆ ಈ ಪ್ರೀತಿಗೆ ಅಷ್ಟೊಂದು ಶಕ್ತಿಯಿದೆಯಾ...?! ಹೌದೂ, ಈ ಇಡೀ ಜಗತ್ತಿನ ಜೀವಕೋಟಿಗಳು ಬದುಕಿರೋದಕ್ಕೆ, ಬೆಳೆದು ಮುನ್ನಡೆಯೋದಕ್ಕೆ ಆಧಾರವೇ "ಪ್ರೀತಿ". ಸಣ್ಣ ಮೀನಿನಿಂದ ಹಿಡಿದೂ ಮಾನವನವರೆಗೂ ತನ್ನ ಹುಟ್ಟಿನೊಂದಿಗೇ ಪ್ರೀತಿಯ ಆರೈಕೆ ತಾಯಿಯಿಂದ ಮೊದಲಾಗಿ, ಬೆಳೆಯುತ್ತಾ ಸುತ್ತಮುತ್ತಲಿನವರ ಹಾರೈಕೆಯ ಪ್ರೀತಿ, ಸ್ನೇಹಿತರ-
ಸಹಪಾಠಿಗಳ, ಅಣ್ಣ-ಅಕ್ಕ-ತಂಗಿಯರ ಅಕ್ಕರೆಯ ಪ್ರೀತಿ. ಮುಂದೇ ಸಂಗಾತಿಯ ಪ್ರೀತಿ, ಮಕ್ಕಳ ಪ್ರೀತೀ...ಹಾಗೆ ನೋಡಿದರೆ ಪ್ರೀತಿಗೆ "ಆದಿಯೂ ಇಲ್ಲಾ ಅಂತ್ಯವೂ ಇಲ್ಲಾ". ನನ್ನ ಯುವ ಸ್ನೇಹಿತರು ಇದನ್ನು ಗ್ರಹಿಸುವುದಲ್ಲಿ, ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದ್ದಾರಾ?..ಹಾದಿತಪ್ಪಿದ್ದಾರಾ?.. ಅಥವಾ ಈ ಸೂಕ್ಷ್ಮ ಶಕ್ತಿಯ ತಿಳಿಯೋ ಗೋಜಿಗೇ ಹೋಗಿಲ್ಲವಾ?...ನೀವೇ ಇದಕ್ಕೆಲ್ಲಾ ಉತ್ತರ ಹುಡುಕಿಕೊಳ್ಳಬೇಕು. ಒಬ್ಬ ವಿವೇಕಿ ಹೇಳೋ ಹಾಗೆ "ನಾವು ಜಗತ್ತಿನ ಎಲ್ಲರನ್ನೂ ಎಲ್ಲಿಯವರೆಗೆ ಪ್ರೀತಿಸೋದನ್ನ ಕಲಿಯೋದಿಲ್ಲವೋ, ಅಲ್ಲಿಯವರೆಗೂ ಒಬ್ಬ ವ್ಯಕ್ತಿಯನ್ನು ಖಂಡಿತವಾಗಿಯೂ ಪ್ರೀತಿಸಲಾರೆವೂ....". ಈ ಮಾತಿನ ಅರ್ಥ ಎಲ್ಲರನ್ನೂ ಒಗ್ಗೂಡಿಸುವ, ಸಂಬಂಧವ ಗಟ್ಟಿಗೊಳಿಸುವ ಆಂತರ್ಯ ಈ ಪ್ರೀತಿಗಿದೆ ಎಂಬುದು.
ಹತ್ತಾರು ವರ್ಷಗಳು ಜೊತೆಗಿದ್ದರೂ ಉಸಿರೆತ್ತದ ಪ್ರೀತಿ ಒಂದೇ ನೋಟದಲ್ಲಿ ಒಡಮೂಡುತ್ತದೆಂಬುದು ಹಾಸ್ಯಾಸ್ಪದವಾಗಿ ಕಂಡರೂ, ಕೆಲವು ಸಂದರ್ಭಗಳಲ್ಲಿ ಪ್ರೀತಿಯ 'ಫ್ರೀಕ್ವೆನ್ಸಿ ಮ್ಯಾಚ್' ಆಗಿ ಜೊತೆಗೂಡಿರೋ ಉದಾಹರಣೆಗಳು ಸಾಕಷ್ಟು. ಮನಸ್ಸನ್ನು ಅರ್ಥ ಮಾಡಿಕೊಳ್ಳೋ ಮನಸ್ಸು ಸಿಗದೆ "ಮಿಸ್ಮ್ಯಾಚಾಗಿ" ಪ್ರೀತಿಯ ಸಾಗರದಲ್ಲಿ ಮರೆಯಾದವರು ಅದೆಷ್ಟೋ ಮಂದಿ. ನಿಮ್ಮೆಲ್ಲರಿಗೂ ಮುಖ್ಯವಾಗಿ ಹೇಳಲೇ ಬೇಕಾದದ್ದು ಮುಖದ ವಿಷಯ, ಮುಖಾ ನೋಡಿ ಮನಸ್ಸು ಅರ್ಥವಾಯ್ತು ಅನ್ನೋದು ಮಾಯಾಜಾಲವಷ್ಟೇ. ವಾಸ್ತವದಲ್ಲಿ ಎರಡಕ್ಕೂ ಭೂಮಿ-ಆಕಾಶದಷ್ಟು ಅಂತರವಿರಬಹುದು. ಬಾಹ್ಯ ಸೌಂದರ್ಯದ ಆಕರ್ಷಣೆಯಿಂದ ಮೋಹಿತರಾಗಿ ಹೃದಯಗಳು ಬದಲಾಗಿವೆ ಅನ್ನೋದು ಪ್ರೀತಿಗೆ ಸಮಾಧಿಕಟ್ಟಿದ ಹಾಗೆ, ನಿಜವಾದ ಪ್ರೀತಿಗೆ ಹಲವು ಸಲ ಸಂಯಮ ಅಗತ್ಯವೆಂದು ತೋರುತ್ತದೆ. ಒಟ್ಟಿನಲ್ಲಿ ಯುವ ಮನಸ್ಸುಗಳೇ ಈ ಪ್ರೀತಿ ಜಗತ್ತಿಗೇ ಬೆಳಕು ಕೊಡೋ ಸೂರ್ಯನ ಶಕ್ತಿಗೆ ಸಮನಾದದ್ದು, ಈ ಭಾವದಲ್ಲಿ ಮುಳುಗಿ ಮರೆಯಾಗೋದಕ್ಕಿಂತ ಇದರಿಂದಲೇ ಜೀವನದಲ್ಲಿ ಮೇಲೇಳೋ ಚಾಪನ್ನು ಮೂಡಿಸಿ, ಸಾಧನೆಗಿದೇ ಸ್ಫೂರ್ತಿಯಾಗಲಿ, ವರ್ಷದಲ್ಲಿ ಮಾಡೋ ಕೆಲಸ ವಾರದಲ್ಲಿ ಮುಗಿಸೋ ತಾಕತ್ತನ್ನು ಈ ಪ್ರೀತಿಯಿಂದ ಬೆಳಸಿ.
ಕೊನೇ ಮಾತೂ....
ಕೆಂಪು ರಕ್ತ ಕ್ರೂರತೆಗೆ ಸಾಕ್ಷಿ,
ಕೆಂಪು ಹೂ ಪ್ರೀತಿಗೆ ಸಾಕ್ಷಿ........."ಕ್ರೂರತೆ ಅಳಿಸಿ, ಪ್ರೀತೀನ ಬೆಳಸಿ".



0 Comments:

Post a Comment