Sunday, October 24, 2010


ಕಣ್ಣಿಗೆ ಕಂಡ ಜೀವಿಗಳು
ನಾವೀಗ ಅನ್ಯ ಗ್ರಹಗಳಲ್ಲಿನ ಅನ್ಯ ಜೀವಿಗಳ ಹುಡುಕಾಟದಲ್ಲಿದ್ದೇವೆ. ಆದರೆ ನಮ್ಮ ಭೂಮಿಯಲ್ಲೇ ಇರುವ, ನಮ್ಮ ಸುತ್ತ-ಮುತ್ತಲಿನ ಪರಿಸದಲ್ಲೇ ಇರುವ ಎಷ್ಟೊ ಜೀವಿಗಳ ಪರಿಚಯವೇ ನಮಗಿಲ್ಲ. ಈ ಮನುಷ್ಯನ ಆರ್ಭಟದಲ್ಲಿ ಅಂತಹ ಪ್ರಾಣಿಗಳೇನಾದರು ಉಳಿದಿವೆಯಾ...? ಅನ್ನೋ ಸಂಶಯ ಕಾಡುವುದು ಸಹಜ. ಒಡಮೂಡುವ ಇಂತಹ ಪ್ರಶ್ನೆಗಳ ಬೆನ್ನೇರಿ ಹೊರಟ ವಾಷಿಂಗ್ಟನ್ ಮೂಲದ "ಕಂಸರ್ವೇಶನ್ ಇಂಟರ್ನ್ಯಾಶನಲ್"ನ ತಂಡ ಆಸ್ಟ್ರೇಲಿಯಾದಲ್ಲಿರುವ 'ಪಾಪುವ ನ್ಯೂ ಗಿನಿಯ'ದ ಫೆಸಿಫಿಕ್ ದ್ವೀಪಗಳಲ್ಲಿ ಅಲೆದಾಡಿ ಸುಮಾರು 200ಕ್ಕೂ
ಹೆಚ್ಚಿನ ವಿಸ್ಮಯಕಾರಿ ಜೀವಿಗಳನ್ನು ಪತ್ತೆ ಹಚ್ಚಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 1590ಮೀಟರಗಳಷ್ಟು ಎತ್ತರದಲ್ಲಿ ಗುಡ್ಡ
ಗಾಡಿನಿಂದ ತುಂಬಿರುವ ದ್ವೀಪ 'ಪಾಪುವ ನ್ಯೂ ಗಿನಿಯ'. ಅಮೇಜಾನ್ ಹಾಗೂ ಕಾಂಗೋ ಬೇಸಿನ್ನ ಕಾಡುಗಳಂತೆ ಇದೂ ಕೂಡ ಸದಾ ಮಳೆಯಿಂದ ಕೂಡಿದ ಪ್ರದೇಶ. ಈ ದಟ್ಟ ಕಾಡಿನ ಒಳಗೆ ಪ್ರವೇಶಿಸುವುದೇ ಒಂದು ಸಾಹಸ, ಕ
ಡಿದಾದ ರಸ್ತೆಗಳನ್ನು ಹುಡುಕಿಕೊಂಡು ಕಾಲ್ನಡಿಗೆಯಲ್ಲೆ ನಡೆಯಬೇಕು ಅಥವ ಹೆಲಿಕಾಪ್ಟರ್ನಲ್ಲಿ ಇಳಿಯಬೇಕು. ಇಂತಹ ಜಾಗದಲ್ಲಿ ಪ್ರಾಣಿತಜ್ಞನರ ಕಣ್ಣಿಗೆ ಕಂಡದ್ದು "ಬಿಳಿ ಬಾಲದ ಇಲಿ, ಉದ್ದನೆ ಮೂತಿಯ ಪುಟ್ಟ ಕಪ್ಪೆ, ಗುಲಾಬಿ ಬಣ್ಣದ ಕಣ್ಣುಗಳುಳ್ಳ ಮಿಡತೆ....ಹೀಗೆ ಅನೇಕ ಸಸ್ತನಿಗಳು, ಕೀಟಗಳು, ಉಭಯಚರಗಳು ಸೇರಿದಂತೆ 200 ವಿ
ವಿಧ ಜೀವಿಗಳ ಪಟ್ಟಿ ಸಿದ್ದವಾಗಿವೆ. ಸಾಮಾನ್ಯವಾಗಿ ಈ ಎಲ್ಲಾ ಪ್ರಾಣಿಗಳೂ ಈಗಿರುವ ಕಪ್ಪೆ, ಮಿಡತೆ, ಇಲಿಯಂತೆ ಕಂಡರೂ 'ಜೀವೋತ್ಪತ್ತಿ ಮೂಲದ' ಪರೀಕ್ಷೆಗಳಿಂದ ತಿಳಿದು ಬಂದಿರುವುದೇನೆಂದರೆ, ಈ ಎಲ್ಲಾ ಜೀವಿಗಳೂ
ಇದುವರೆಗೂ ಗೊತ್ತಿರುವ ಸಂತತಿಗೆ ಸೇರಿಲ್ಲವೆಂಬುದು.
ಬಿಳಿ ಬಾಲದ ಇಲಿಯ ಮೈಬಣ್ಣ ಕಂದು ಹಾಗೂ ನೋಡಲು ಸುಂದರವಾ
ಗಿದ್ದು, ಸಣ್ಣ ದೇಹವನ್ನು ಹೊಂದಿದೆ. ಇಲ್ಲಿ ವಿಶಿಷ್ಟವೆನಿಸುವುದು ಹೆಬ್ಬರಳಿನ ಉಗುರಿನ ಗಾತ್ರದ ಸುಮಾರು 2ಸೆಂಟಿ ಮೀಟರ್(0.8ಇಂಚು) ಅಳತೆಯ ಉದ್ದಮೂಗಿನ ಕಪ್ಪೆ. ಇದೇ ರೀತಿಯ ಇನ್ನೂ ಕೆಲವು ಕಪ್ಪೆಗಳ ಮೈಮೇಲೆ ಹಳದಿ ಬಣ್ಣದ ಮಚ್ಚೆಗಳು ಅಚ್ಚು ಹೊತ್ತಿದಂತಿದೆ. ಇಲ್ಲಿ ಕಂಡು ಬಂದಿರುವ ಪ್ರಾಣಿಗಳ ಪೈಕಿ 24
ಜಾತಿಯ ಕಪ್ಪೆಗಳು, ಯೋಧ ಎಂಬ ಹೆಸರಿನ ಬಾವಲಿ ಹಾಗೂ ಇರುವೆ, ಚಿಟ್ಟೆ, ಜೇಡಗಳು ಸೇರಿದಂತೆ 100ಕ್ಕೂ ಹೆಚ್ಚಿನ ಕೀಟಗಳು.
ಪ್ರಾಣಿತಜ್ಞರ ಪ್ರಕಾರ ಈ ದ್ವೀಪ ಪ್ರದೇಶದಲ್ಲಿ ಎಲ್ಲೇ ಹೋದರೂ ಹೊಸ ಜಾತಿಯ ಅ
ಥವಾ ಮಾನವರಿಗೆ ಅಷ್ಟು ಪರಿಚಿತವಲ್ಲದ ಪ್ರಾಣಿಗಳು ಕಣ್ಣಿಗೆ ಬೀಳುವುದು ಖಂಡಿತ. ಆದರೆ ಆ ಸ್ಥಳಕ್ಕೆ ತೆರಳಿ ಪುನಃ ಮರಳಿಬರುವುದು ಕಷ್ಟಸಾಧ್ಯವೇ ಸರಿ. ಈ ಜಾಗವು "ಜೈವಿಕ ವೈವಿಧ್ಯಗಳ" ಸಂಗ್ರಹವೆಂದೇ ಹೆಸರು ವಾಸಿ. ನಮ್ಮ ನಾಡಿನಲ್ಲೂ ಇಂತಹ ಎಷ್ಟೋ ಅಪರೂಪದ ಜೀವಿಗಳು ನಮಗೆ ಗೋಚರಿಸುವ
ಮೊದಲೇ ಗಣಿಗಾರಿಕೆಯ ಹೆಸರಿನ್ನಲ್ಲಿ ಕಾಡಿನೊಂದಿಗೆ ಸರ್ವನಾಶವಾಗುವ ಹಂತದಲ್ಲಿದೆ.





0 Comments:

Post a Comment