Sunday, October 24, 2010





ಯಾರು ಮೊದಲು...?!
ವಿಜ್ಞಾನಿಗಳ ಸತತ ಅಧ್ಯಯನ, ಸಂಶೋಧನೆಯ ಫಲವಾಗಿ ರೂಪುಗೊಂಡ ಪ್ರನಾಳ ಶಿಶುವಿನ ಜನನದಿಂದ ಮಕ್ಕಳಿಲ್ಲದೆ
ನರಳಾಡುತ್ತಿದ್ದವರು ಸಂತಸಗೊಂಡಿದ್ದಾರೆ. ಆದರೆ, ಈ ಸಂತಸ ಹಿಂದೆ ಎಷ್ಟು ಜನರಿಗಿತ್ತು...? ಭಾರತದಲ್ಲಿ ಮೊದಲಿ
ಗೆ ಈ ಪ್ರಯೋಗದಲ್ಲಿ ಯಶಸ್ವಿಯಾದ
ಡಾ.ಸುಭಾಷ್ ಮುಖೋಪಾಧ್ಯಾಯರ ಜೀವ ಜನರ, ಸಕರ್ಾರದ ನಿಂದನೆಯಿಂದಾಗಿ ನೊಂದು ನೇಣಿಗೆ ಶರಣಾಯಿತು. ಈಗ ದೇಶದಲ್ಲಿ ಪ್ರಥಮ "ಪ್ರನಾಳ ಶಿಶು" ನಾನು ನಾನೆಂಬ ಕಚ್ಚಾಟಗಳು ಮುಂದುವರಿದಿವೆ. ಹಾಗಾದರೆ ಯಾರು ಮೊದಲು ಅನ್ನೊ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ ಜನರಲ್ಲಿರುವ ತಪ್ಪು ತಿಳು
ವಳಿಕೆ ಪ್ರನಾಳ ಶಿಶು ಎಂದರೆ ಅದು ಗಾಜಿನ ಪ್ರನಾಳದಲ್ಲೆ ಹುಟ್ಟಿ, ಬೆಳೆದು, ದೊಡ್ಡದಾಗಿ ಓಡಾಡುವ ಹಂತಕ್ಕೆ ಬಂದಾಗ ಆ ಕೃತಕ ಜೀವಿ ಪ್ರಯೋಗಾಲಯದಿಂದ ಹೊರಬಂದು ಬೇಕಾದವರ ಮಡಿಲು ಸೇರುತ್ತದೆಂಬುದು. ಇದು ನಮ್ಮ ಕಲ್ಪನೆಯಷ್ಟೆ....ನಿಜವಾದ ಕ್ರಿಯೆ ಹೀಗಿರುತ್ತದೆ: 'ಹೆಣ್ಣಿನಿಂದ ತೆಗೆದ ಅಂಡ ಹಾಗೂ ಗಂಡಿನಿಂದ ಪಡೆದ ವೀರ್ಯವನ್ನು ಸಂಗ್ರಹಿಸಿ, ವೈದ್ಯಕೀಯ ವಿಜ್ಞಾನಿಗಳು ಅದನ್ನು ತಮ್ಮ ಪ್ರಯೋಗಾಲಯದಲ್ಲಿ ತಕ್ಕ ವಾತಾವರಣದಲ್ಲಿ ಸಂಸ್ಕರಿಸಿ, ಅತಿ
ಸೂಕ್ಷ್ಮವಾದ ವೀರ್ಯದ ಕಣವನ್ನು ಅಂಡದ ಜೊತೆ ಸಂಧಿಸುವಂತೆ ಮಾ
ಡುವುದು ಭ್ರೂಣದ ಆರಂಭದ ಅವಸ್ಥೆಯ ಸೃಷ್ಟಿಗೆ ಕಾರಣವಾಗುತ್ತದೆ. ಈ ಭ್ರೂಣದ ಬೆಳವಣಿಗೆಗಾಗಿ ನಂತರದಲ್ಲಿ ಹೆಣ್ಣಿನ ಗರ್ಭವನ್ನು ಸೇರಿಸುವುದರಿಂದ, ಆ ಹೆಣ್ಣು ಗರ್ಭವತಿಯಾಗಿ ಮಗುವಿಗೆ ಜನ್ಮವನ್ನು ನೀಡುತ್ತಾಳೆ.' ಇದರಲ್ಲಿ ಅಸಹ್ಯಕಾರವಾದುದು ನಮ್ಮ ದುರಾಲೋಚನೆಗಳು ಮಾತ್ರ.
ಡಾ.ಟಿ.ಸಿ.ಆನಂದ ಕುಮಾರ್ ಮತ್ತು ಡಾ.ಇಂದಿರಾ ಹಿಂದುಜಾರವರ ಪ್ರಯೋಗಗಳಿಂದಾಗಿ ಆಗಸ್ಟ್ 6,1986ರಂದು ಸೃಷ್ಟಿಯಾದ "ಹರ್ಷ ಚೌದ" ಭಾರತದ ಪ್ರಥಮ ಪ್ರನಾಳ ಶಿಶುವೆಂದು ಹೆಸರಾಯಿತು. ಆದರೆ 1984ರಲ್ಲಿ ಹುಟ್ಟಿದ "ಕೃತಿ ಪರೇಖ್" ತಾನೇ ಮೊದಲು ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಕೃತಿ 1984ರಲ್ಲಿ ಜನಿಸಿದ್ದು ನಿಜವಾದರೂ ಅದು ಭಾರ
ದಲ್ಲಲ್ಲ. ಜಗತ್ತಿನ ಪ್ರಥಮ ಪ್ರನಾಳ ಶಿಶು "ಲೂಯಿಸ್ ಬ್ರೌನ್"ನನ್ನು 1978ರಲ್ಲಿ ಸೃಷ್ಟಿಸಿ ಈಗ ನೊಬೆಲ್ ಪುರಸ್ಕಾರಕ್ಕೆ ಪಾತ್ರವಾಗಿರುವ ಇಂಗ್ಲೆಂಡಿನ 'ರಾಬಟರ್್ ಎಡ್ವಡರ್್' ಮತ್ತು ಡಾ.ಪಟ್ರಿಕ್ರ ಸಂಶೋಧನೆಯಿಂದ ಜನಿಸಿದವಳು ಕೃತಿ. ಎಲ್ಲೇ ಜನಿಸಿದರೂ ತನ್ನ ತಂದೆ-ತಾಯಿ ಭಾರತೀಯರು, ತಾನೂ ಭಾರತೀಯಳೆ ಹಾಗೂ ಹರ್ಷ ತನಗಿಂತ ಎರಡು ವರ್ಷ ಚಿಕ್ಕವಳೆಂಬುದು ಕೃತಿಯ ವಾದ. ಇಷ್ಟೆಲ್ಲಾ ಅವಾಂತರಗಳಿಗೂ ಕಾರಣ ಭಾರತ ಸಕರ್ಾರ ಪ್ರಥಮ ಪ್ರನಾಳ ಶಿಶುವಿಗೆ ಕೆಲವು ಸೌಕರ್ಯಗಳನ್ನು ನೀಡಿವುದಾಗಿ ಘೋಷಿಸಿದ್ದು. ತಂದೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹರ್ಷ ತನ್ನ ವಿದ್ಯಾಭ್ಯಾಸಕ್ಕಾಗಿ ಸಕರ್ಾರದ ದುಂಬಾಲು ಬಿದ್ದಳು.
ಆದರೆ ಪ್ರಥಮದ ಹೆಸರು ಅವಳ ಪಾಲಾಗ ಬಾರದೆಂದು ಕೃತಿ ಹೋರಾಟವನ್ನು ನಡೆಸುತ್ತಿದ್ದಾಳೆ. ಡಾ.ಆನಂದ ಕುಮಾರ
ರ ಹುಡುಕಾಟದಿಂದ ಹೊರ ಬಂದ ಹೆಸರು ಡಾ.ಸುಭಾಷ್ ಮುಖೋಪಾಧ್ಯಾಯರ ಸಂಶೋಧನೆಯ ಪ್ರತಿಫಲವಾಗಿ ಹುಟ್ಟಿದ 'ದುಗರ್ಾ'(ಕಾನುಪ್ರಿಯ ಅಗರ್ವಾಲ್). ಇವಳು ಜನಿಸಿದ್ದು ಜಗತ್ತಿನ ಮೊದಲ ಪ್ರನಾಳ ಶಿಶು ಬ್ರೌನ್ ಹುಟ್ಟಿ ಕೇವಲ 67 ದಿನಗಳ ಅಂತರದಲ್ಲಿ ಅಂದರೆ 3ನೇ ಅಕ್ಟೋಬರ್ 1978ರಂದು. ಕಲ್ಕತ್ತಾದಲ್ಲಿ ಹುಟ್ಟಿದ ದುಗರ್ಾ ಪುಣೆಯಲ್ಲಿ ಎಂ.ಬಿ.ಎ. ಪದವಿ ಮುಗಿಸಿ ಪ್ರಸ್ತುತ ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಜನರ ಚುಚ್ಚು ಮಾತುಗಳಿಂದ ದೂರವಿರಲು ಬಯಸಿ ದುಗರ್ಾ ಕುಟುಂಬ ಈ ವಿಷಯವನ್ನು ಗುಟ್ಟಾಗಿಟ್ಟಿದ್ದರು.

ದುಗರ್ಾ ಪ್ರಥಮದ ಕಿತ್ತಾಟಕ್ಕೆ ಅಂತ್ಯವಾಡಿದ್ದಾಳಾದರೂ ಭಾರತದ ಕೀತರ್ಿ ಪತಾಕೆಯನ್ನು ಹಾರಿಸಬೇಕಿದ್ದ ಡಾ.ಸುಭಾಷ್ ಪಶ್ಚಿಮ ಬಂಗಾಳದ ತಲೆಗೆಟ್ಟ ಸಕರ್ಾರದಿಂದ ಚಿತ್ರಹಿಂಸೆ ಪಡುವಂತಾಯಿತು. ಟೋಕಿಯೋದಲ್ಲಿ ತನ್ನ ಸಂಶೋಧನೆಯ ಬಗ್ಗೆ ಜಗತ್ತಿಗೆ ತಿಳಿಸ
ಬೇಕಿದ್ದ ಅವಕಾಶವನ್ನು ಸಕರ್ಾರ ಕಿತ್ತುಕೊಂಡಿತು. ಮನನೊಂದ ಈ ಸೂಕ್ಷ್ಮ ಜೀವಿ 19ರ ಜೂನ್ 1981ರಂದು ಆತ್ಮಹತ್ಯೆಗೆ ಮುಂದಾದರು. ಮಾತಿಗೆ ಮುಂಚೆ ನಮ್ಮ ಮಹಾಭಾರತದಲ್ಲಿ, ವೇದಗಳಲ್ಲಿ ಈ ಪ್ರಸ್ತಾಪ ಮೊದಲೇ ಇದೆ ಎಂದು ಕೊಚ್ಚಿಕೊಳ್ಳುವ ಬೂಟಾಟಿಕೆ ದಾಸರು ಆದಿನ ಎಲ್ಲವನ್ನು ಮಡಿ ಅನ್ನೊ ಹೆಸರಿನಲ್ಲಿ ಮುದುಡಿ ಕೂಡಿಸಿದ್ದರೇನೊ...? ತನ್ನ ಇಡೀ ಜೀವನವನ್ನೆ ಸಂಶೋಧನೆಗಾಗಿ, ದೇಶಕ್ಕಾಗಿ ಮುಡುಪಿಟ್ಟ ವಿಜ್ಞಾನಿಯ ಮನ ನೋಯಿಸಿದ ಅಂದ ನಾಗರೀಕರಿಗೆ ದಿಕ್ಕಾರ....ದಿಕ್ಕಾರ....

0 Comments:

Post a Comment