Friday, August 27, 2010





ಸೂಪರ್ಕಂಡಕ್ಟಸರ್್
ಈಗ ನಮ್ಮ ಬಳಿ ಕಲ್ಲಿದ್ದಲನ್ನು ಉರಿಸಿ ವಿದ್ಯುತ್ ಉತ್ಪಾದಿಸೊ ಘಟಕಗಳಿವೆ. ರಭಸವಾಗಿ ಬೀಸೋ ಗಾಳಿಯು ಗಾಲಿಯನ್ನು ತಿರುಗಿಸುವ ಮೂಲಕ, ಮರಳುಗಾಡಿನ ಹೊಳೆಯುವ
ಸೂರ್ಯನ ಶಾಖದಿಂದ, ಬೋರ್ಗರೆದು ಹರಿಯುವ ಜಲಪಾತಗಳಿಂದ, ಅಣುಸ್ಥಾವರದಲ್ಲಿ ಹೊರಹೊಮ್ಮುವ ಶಕ್ತಿಯಿಂದ ಅತ್ಯಾವಶ್ಯಕವಾದ ವಿದ್ಯುತನ್ನು ಹೊರತೆಗೆವ ವಿಧಾನ ಹಲವಾರು ವರ್ಷಗಳಿಂದ ನಮ್ಮೊಡನೆಯಿದೆ. ಆದರೂ, ಹಳ್ಳಿಯಿಂದ ದಿಲ್ಲಿಯವರೆಗೂ ವಿದ್ಯುತ್ವ್ಯತ್ಯಯ ಎಂಬುದು ನಿಂತಿಲ್ಲ. ಇದಕ್ಕೆಲ್ಲಾ ಮುಖ್ಯವಾದ ಕಾರಣ, ಉತ್ಪಾದನೆಯಲ್ಲಿನ
ಕುಂಠಿತ ಒಂದು ಕಡೆಯಾದರೆ, ಉತ್ಪಾದಿಸಿದ ವಿದ್ಯುತ್ತನ್ನು ನೂರಾರು ಮೈಲಿ ದೂರ ರವಾನಿಸುವಾಗ ನಷ್ಟವಾಗುತ್ತಿರುವ ಪ್ರಮಾಣ ಹೆಚ್ಚಾಗಿರುವುದು. ಇದನ್ನು ತಡೆಯಲು ಸೂಪರ್ಕಂಡಕ್ಟರ್ಗಳು ಬಳಕೆಗೆ ಬರಬೇಕಾಗಿದೆ.
ಸೂಪರ್ಕಂಡಕ್ಟರ್ಗಳೆಂದರೆ ಪೂರ್ಣ ವಿದ್ಯುತ್ ವಾಹಕಗಳೆಂದು ಕರೆಯಬಹುದು. ಸೂಪರ್ಕಂಡಕ್ಟಿಂಗ್ ತಂತಿಗಳು ಸಾವಿರಾರು ಕಿ.ಮೀ.ಗಳು ಮೆಗಾವಾಟ್ ವಿದ್ಯುತ್ತನ್ನು ಅತ್ಯಂತ ಕಡಿಮೆ ವ್ಯಯದೊಂದಿಗೆ ತಲುಪಿಸುತ್ತದೆ. ಇದರಿಂದ ಶೇಕಡ. 40ರಷ್ಟು ವಿದ್ಯುತ್ ಉಳಿಯುತ್ತದೆ. ಆದರೆ, ತಂತಿಗಳನ್ನು ಪೂರ್ಣ ವಾಹಕವಾಗಿಸಲು ಅವುಗಳನ್ನು ದ್ರವ್ಯ ರೂಪದ
ನೈಟ್ರೋಜನ್ನಲ್ಲಿ ಮುಳುಗಿಸಬೇಕಾದ ಅವಶ್ಯಕತೆಯಿದೆ. ಏಕೆಂದರೆ ಇದೂವರೆಗಿನ ಸಂಶೋಧನೆಯಿಂದ ತಿಳಿದಿರುವುದು ತಂತಿಯನ್ನು 77 ಕೆಲ್ವಿನ್(-196 ಡಿಗ್ರಿ ಸೆಲ್ಸಿಯಸ್)ನಲ್ಲಿ ಇಟ್ಟರೆ ಮಾತ್ರ ಅವು ಸೂಪರ್ಕಂಡಕ್ಟರ್ಗಳಾಗುತ್ತವೆ. ಹಾಗೂ ಪ್ರತೀ ಕಿ.ಮೀ.ಗಳಲ್ಲಿ ಒಂದು ಸಂಸ್ಕರಣ ಘಟಕಗಳನ್ನ ತೆರೆಯಬೇಕಾಗುತ್ತದೆ, ಆದ್ದರಿಂದ ಖಚರ್ಿನ ವೆಚ್ಚವೂ ಹೆಚ್ಚೇ......! ಆದರೆ ಇದೇ ಸೂಪರ್ಕಂಡಕ್ಟರ್ಗಳು ಸಾಮಾನ್ಯವಾದ ಉಷ್ಣತೆ ಮತ್ತು ಒತ್ತಡದಲ್ಲಿ ಕೆಲಸ ಮಾಡುತ್ತವೆ ಎಂದಾದರೆ, ಸಹಾರಾ ಮರುಭೂಮಿಯಿಂದ ನಿಶ್ಚಿಂತೆಯಾಗಿ ವಿದ್ಯುತ್ತನ್ನು ಅರ್ಧ ಜಗತ್ತಿಗೆ ರ
ವಾನಿಸಬಹುದು.
1986ರಿಂದ ಈ ನಿಟ್ಟಿನಲ್ಲೇ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಇದು ನಿಧಾನ ಗತಿಯಲ್ಲೆ ಸಾಗುತ್ತಿದ್ದರು, ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ನಡುವೆ ಸೂಪರ್ಕಂಡಕ್ಟರ್ಗಳು ಸ್ಥಾನ ಪಡೆಯುವುದರಲ್ಲಿ ಅನುಮಾನವಿಲ್ಲ. ಯಾವತ್ತಿಗೂ ಬದಲಾವಣೆಯ ಗಾಳಿ ಹೇಳಿ-ಕೇಳಿ ಬೀಸೋದಿಲ್ಲ.

ಹಾರೋದು ಸುಲಭ
ಟ್ರಾಫಿಕ್..ಟ್ರಾಫಿಕ್...ಎಲ್ಲಿಗೆ ಹೋದರೂ ಇದರಿಂದ ಮಾತ್ರ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ. ಇದರಿಂದ ಮನೆ, ಆಫೀಸು, ಕಾಲೇಜು, ಪಂಕ್ಷನ್..ಎಲ್ಲಾ ಕಡೆಗೂ ಲೇಟ್. ಈಗ ನಿಮಗೆ ಟ್ರಾ
ಫಿಕ್ನಿಂದ ದೂರವುಳಿಯೋ ಉಪಾಯವನ್ನು ಹೇಳ್ತೀನಿ....ಅದೇ ಹಾರುವ ಮೋಟಾರ್ಸೈಕಲ್. ಹಾ...! ಕತೆ
ಗಳಲ್ಲಿ, ಕಲ್ಪನೆಯಲ್ಲಿ ಮಾತ್ರ ಉಳಿದಿದ್ದ ಆಗಸದಲ್ಲಿ ಹಾರಬಲ್ಲ ಗಾಡಿಗಳು ಇನ್ನು ಒಂದೇ ವರ್ಷದಲ್ಲಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿವೆ.
ಡರ್..ಬುರ್..ಎಂದು ಒಂದು ಕಡೆ ಬ್ರೇಕ್ ಒತ್ತುತ್ತಾ, ಇನ್ನೊಂದು ಕಡೆ
ಟ್ರಾಫಿಕ್ ಇನ್ಸ್ಪೆಕ್ಟರ್ಗಳ ಕಣ್ಣುತಪ್ಪಿಸಿ ಓಡುವ ಸ್ಥಿಯಿಂದ ಹೊರಬರಲು ಒಳ್ಳೆಯ ಅವಕಾಶ. ಕಿವಿ ಗುಂಯ್...ಗುಡಿಸುವ ಹಾನರ್್, ಮೈಮೇಲೆ ಎರಗುವಂತೆ ಬರುವ ಬಸ್ಸು, ಲಾರಿಗಳು, ಪೈಪೋಟಿ ಒಡ್ಡುವ ಆಟೋಗಳು ಇವನ್ನೆಲ್ಲ ಒಮ್ಮೆಗೆ ದಾಟಿ ಹಾರಿ ಹೋಗುವಂತ ಸಂದರ್ಭ...ನೆನೆಸಿಕೊಂಡರೆ ಇಷ್ಟು ರೋಮಾಂಚನವಾದರೆ, ಈ ಕನಸು ನಿಜವೇ ಆದರೆ ಎಷ್ಟು ಚೆನ್ನ ಅಲ್ಲವೇ..? ಹಾರುವ ಮೋಟಾರ್ ಸೈಕಲ್ಗಳು ಗಾಳಿಯಲ್ಲಿ ಸುಮಾರು 70ಮೈಲಿ ವೇಗದಲ್ಲಿ ಹಾರಿದರೆ, ರಸ್ತೆಯ ಮೇಲೆ 60ಮೈಲಿ ವೇಗದಲ್ಲಿ ಚಲಿಸುತ್ತದೆ. ಈ ಗಾಡಿಗೆ ಮೂರು ಚಕ್ರಗಳಿದ್ದು, ತಲೆಯ ಮೇಲೆ ಹೆಲಿಕಾಪ್ಟರಿನಂತೆ ಎರಡು ರೆಕ್ಕೆಗಳಿವೆ.
ನಮ್ಮ ರಸ್ತೆಗಳ ಮೇಲೆ ಈ ಗಾಡಿಗಳು ಹಾರಾಡಲು ಸರಕಾರ ಅನುವು ಮಾಡಿಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ನೀವು ಮಾತ್ರ ಹಾರುವ ಮೋಟಾರ್ ಸೈಕಲ್ಗಳನ್ನು ಕೊಳ್ಳೋಕೆ ಸದ್ಯ 25,000 ಡಾಲರ್ಗಳನ್ನು(ಸುಮಾರು 12ಲಕ್ಷ ರೂ.) ಸಿದ್ಧಮಾಡಿಕೊಳ್ಳಬೇಕು.

0 Comments:

Post a Comment