Thursday, June 30, 2011

G.V.


ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಇನ್ನೇನು ಕೆಲವೇ ದಿನಗಳಲ್ಲಿ "ನುಡಿನಮನದ" ಹಬ್ಬ ಸಾಹಿತ್ಯ ಸಮ್ಮೇಳನಕ್ಕಾಗಿ ಜಗ-ಮಗ ಸಿಂಗಾರಗೊಂಡು ಜನಸಾಗರದಲ್ಲಿ ತುಂಬಿ ತುಳಕಲಿದೆ. ಮೂವತ್ತೊಂದು ವರ್ಷಗಳ ನಂತರ ಮತ್ತೆ ಬೆಂಗಳೂರಿನಲ್ಲಿ ಕನ್ನಡ ಜಾತ್ರೆಯ ತೇರನ್ನು ಎಳೆಯಲಾಗು
ತ್ತಿದೆ. ಎಪ್ಪತ್ತೇಳನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಬೆಂಗಳೂರಿನಲ್ಲೇ ನೆಲೆಸಿರುವ, ನಿಘಂಟು ಸ್ಪೆಷಲಿಸ್ಟ್ ಎಂದೇ ಪ್ರಖ್ಯಾತರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರು. ವಯಸ್ಸು 98, ಆದರೆ ಪದಗಳ ಬಗ್ಗೆ, ವಿಮಶರ್ೆ, ಸಾಹಿತ್ಯದ ಬಗೆಗಿನ ಅವರ ಉತ್ಸಾಹ 28ರದು. ಕುಗ್ಗದ ಹುಮ್ಮಸ್ಸಿಗ್ಗೊಂದು ಉದಾಹರಣೆ ಕಳೆದ ವರ್ಷ ಪ್ರಕಟಗೊಂಡ ಜಿ.ವಿ.ಯವರ ಹೊಸ ಹೊತ್ತಿಗೆ "ಕುಮಾರವ್ಯಾಸನ ಅಂತರಂಗ-ಯುದ್ಧ
ಪಂಚಕದಲ್ಲಿ". ಒಂದು ಭಾಷೆಯ ಬೆಳವಣಿಗೆಗೆ ಪದಸಂಪತ್ತಿನ ಬೆಳವಣಿಗೆಯು ಅತಿಮುಖ್ಯ, ಇಂತಹ ಬೆಳವಣಿಗೆಯ ಸಂದರ್ಭದಲ್ಲಿ ಕನ್ನಡದಲ್ಲಿ ಹುಟ್ಟಿಕೊಂಡ ಪದಾರ್ಥಗಳ ಗೊಂದಲವನ್ನು ಸೂಕ್ತವಾಗಿ ವಿಶ್ಲೇಷಿಸಿ, ಅಥರ್ೈಸಲು ಶ್ರಮಪಟ್ಟವರಲ್ಲಿ ವೆಂಕಟಸುಬ್ಬಯ್ಯನವರು ಪ್ರಮುಖರು ಹಾಗೂ ಸತತ 18 ವರ್ಷಗಳ ಕಾಲ ಪ್ರತಿ ವಾರವೂ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಇವರ "ಇಗೋ ಕನ್ನಡ" ಅಂಕಣವು ಅತ್ಯಂತ ಜನಪ್ರಿಯವಾದದು. ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣವನ್ನು ಮಾಡಲು ಸಿದ್ಧತೆ ನಡೆಸುತ್ತಿರುವ ಜಿ.ವೆಂಕಟಸುಬ್ಬಯ್ಯ ನವರೊಂದಿಗಿನ ನೇರ ಮಾತುಕತೆ ಇಲ್ಲಿದೆ;

* ಸಾಹಿತ್ಯ ಸಮ್ಮೇಳನ ಅಂದ್ರೆ ಒಂದು ಸಂತೆ, ಜಾತ್ರೆ ಅಂತಾರೆ...., ಆದರೆ ನಿಮ್ಮ ಅಭಿಪ್ರಾಯದಲ್ಲಿ ಸಮ್ಮೇಳನ ಅಂದ್ರೇ.....?
ಸಾಹಿತ್ಯವನ್ನು ರಚಿಸುವ ಸಾಹಿತಿಗಳ, ಅದನ್ನು ವಿಶ್ಲೇಷಿಸುವ-ವಿಮಶರ್ಿಸುವ ವಿದ್ಯಾವಂತರ, ತಿಳಿಯಲು ಹಾತೊರೆಯುವ ವಿದ್ಯಾಥರ್ಿಗಳ, ಎಲ್ಲವನ್ನೂ ಆಸಕ್ತಿಯಿಂದ ನೋಡುವ, ಅನುಸರಿಸುವ ಯುವಕ-ಯುವತಿಯರು ಒಗ್ಗೂಡಲು ಸಾಹಿತ್ಯ ಸಂಸ್ಥೆಯೊಂದರಿಂದ ವಾಷರ್ಿಕವಾಗಿ ನಡೆಯುವ ಸಮಾವೇಶ ಈ ಸಾಹಿತ್ಯ ಸಮ್ಮೇಳನ. ಇಲ್ಲಿ ಎಲ್ಲರೂ ಎಲ್ಲರನ್ನೂ ಹತ್ತಿರದಿಂದ ಭೇಟಿಯಾಗುವ ಹಾಗೂ ಹೊಸತನ್ನು ಹಂಚಿಕೊಳ್ಳುವ ಅವಕಾಶ ಹೇರಳವಾಗಿರುತ್ತದೆ ಮತ್ತು ಬರವಣಿಗೆ ತಿಳಿಯಲಿ, ಬೆಳೆಯಲಿ ಎನ್ನುವುದು ಉದ್ದೇಶ. ಕೇವಲ ಊಟ-ಉಪಚಾರ, ಸಂಜೆಯ ಮನರಂಜನೆ ಇವಿಷ್ಟೇ ಸಮ್ಮೇಳನವಲ್ಲಾ. ಯುವಕರಿಗೆ ಮಾರ್ಗದರ್ಶನ ನೀಡಲು ಸೇರುವ ಹಿರಿಯರ ಕೂಟ ಇಲ್ಲಿ ಬಹಳ ಮುಖ್ಯವಾದದ್ದು.

* ಕನ್ನಡ ನಿಘಂಟನ್ನು ಹೊರತರಲು ಸ್ಫೂತರ್ಿ.....?
ಇದು ಒಬ್ಬನಿಂದಾದ ಕೆಲಸವಲ್ಲ, ಇದರ ಮೂಲ ಪುರುಷರು ಎ.ಆರ್. ಕೃಷ್ಣಶಾಸ್ತ್ರಿಗಳು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ಎಲ್ಲಾ ವಿದ್ವಾಂಸರು ಕೂಡಿ ಉದ್ದೇಶವನ್ನು ಪರಾಮಶರ್ಿಸಿದಾಗ ನಿಘಂಟಿನ ಅವಶ್ಯಕತೆಯನ್ನು ಸೂಚಿಸಲಾಯಿತು. ಆದರೆ 1943ರವರೆಗು ಹಳೆಗನ್ನಡದ 'ರಳ'ನಿಘಂಟು ಮಾತ್ರ ಪ್ರಕಟವಾಗಿತ್ತು. ಆನಂತರದಲ್ಲಿ ವಿದ್ಯಾಥರ್ಿಯಾಗಿದ್ದಾಗಿನಿಂದ ಪದಗಳ ಸಂಗ್ರಹದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ, ಮುಂದೆ 1964ರಲ್ಲಿ ಪರಿಷತ್ತಿನ ಅಧ್ಯಕ್ಷನಾದಾಗ ಕೃಷ್ಣಶಾಸ್ತ್ರಿಗಳ ಸೂಕ್ತ ಮಾರ್ಗದರ್ಶನದಿಂದ ಹೆಚ್ಚಿನ ಕೆಲಸಗಳು ಸಾಗಿದವು.

* ಇಂದಿನ ಇಂಗ್ಲೀಷ್ ಪ್ರಭಾವದ ನಡುವೆ ಕನ್ನಡವನ್ನು ಬೆಳೆಸೋಕೆ ಇರೋ ಮಾರ್ಗ.....?
ಮುಖ್ಯವಾಗಿ ಕನ್ನಡದ ಬರಹಗಳು ಹೆಚ್ಚಾಗಬೇಕು, ಬಳಸದೇ ಉಳಿದ ಶಬ್ಧಗಳು ಹೊರಬಂದು ಜನರನ್ನು ತಲುಪಬೇಕು. ಒಂದು ಭಾಷೆ ಬೆಳೆಯುವಾಗ ಅದು ತನ್ನ ಸುತ್ತಮುತ್ತಲಿನಿಂದ ಪದಗಳನ್ನು ಎರವಲು ಪಡೆಯಬೇಕಾದದು ಅನಿವಾರ್ಯವಾಗುತ್ತದೆ, ಹೀಗೆಯೇ ಕನ್ನಡವು ಇಂಗ್ಲೀಷ್ ನಡುವೆ ಬೆಳೆಯುತ್ತಿದೆ.

* ಆಡಳಿತದಲ್ಲಿ ಕನ್ನಡ ಇನ್ನೂ ಸಾಧ್ಯವಾಗಿಲ್ಲವೇಕೆ....?
ಅರಾಬಿಕ್, ಪಷರ್ಿಯನ್ ಭಾಷೆಗಳಿಂದ ಕನ್ನಡದಲ್ಲಿ ಸಾಕಷ್ಟು ಆಡಳಿತಕ್ಕೆ ಅನುಗುಣವಾಗುವ ಪ
ದಗಳಿವೆ, ಆದರೆ ಸಕರ್ಾರ ಅದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು. ಕನ್ನಡದಲ್ಲಿ ಬರೆಯಲಾಗದಿರುವವರನ್ನು, ವ್ಯವಹರಿಸಲಾಗದವರನ್ನು ಕೆಲಸದಿಂದ ವಜಾಗೊಳಿಸುವಂತಹ ಕಠಿಣ ಕ್ರಮವನ್ನು ಕೈಗೊಳ್ಳುವುದರಿಂದ ಆಡಳಿತ ತಾನಾಗಿಯೇ ಕನ್ನಡದಲ್ಲಿ ನಡೆಯುತ್ತದೆ. ಈ ಮೂಲಕವೇ ಹಿಂದಿ ಮತ್ತು ತಮಿಳಿನಲ್ಲಿ ಆಡಳಿತವು ಸರಾಗವಾಗಿ ಸಾಗುವುದರ ಜೊತೆಗೆ ಭಾಷೆಯು ಬೆಳೆಯುತ್ತಿದೆ. ತಾಂತ್ರಿಕ ಪದಗಳಿಗೆ ಪರಿಭಾಷೆಯ ಮೂಲಕ ಅಂದರೆ, ಬೇರೆ ಭಾಷೆಯಿಂದ ತೆಗೆದುಕೊಂಡ ಪದಗಳಿಗೆ ತದ್ಭವ ರೂಪವನ್ನು ನೀಡುವುದರ ಮೂಲಕವೂ ಪದಸಂಪತ್ತು ಹೆಚ್ಚುತ್ತಿದೆ.

* ಬದುಕು ಮತ್ತು ಭಾಷೆಯಲ್ಲಿ ಯಾವುದು ದೊಡ್ಡದು ಮತ್ತು ಮುಖ್ಯ.....?
ಎರಡೂ ಬಹಳ ಮುಖ್ಯ. ಜನ ಬದುಕಲು ಸ್ನೇಹ ಬೆಳಿಯಬೇಕು, ಸ್ನೇಹದಿಂದ ಮಾತು ಬೆಳೆಯುತ್ತದೆ, ಭಾಷೆ ಬದುಕಿಗೆ ಅವಶ್ಯಕವಾದುದು, ಭಾಷೆಯಿಲ್ಲದೆ ಮನುಷ್ಯಯಿಲ್ಲ. ಶಾಲಾಕಾಲೇಜುಗಳಲ್ಲಿ, ಮನೆಗಳಲ್ಲಿ, ಕಛೇರಿಗಳಲ್ಲಿ, ವ್ಯವಹಾರದಲ್ಲಿ ಕನ್ನಡವನ್ನು ಬಳಸಿದರೆ ಬದುಕಿನೊಂದಿಗೆ ಭಾಷೆ ಬೆಳೆಯುತ್ತೆ. ಇದನ್ನೆಲ್ಲಾ ಹಠಯಿಡಿದು ಮಾಡಿಸುವಂತ ಸರಕಾರ ನಮಗೆ ಬೇಕಾಗಿದೆ.

* ಜಗತ್ತಿನಲ್ಲಿ ಸಾವಿನ ಅಂಚಿನಲ್ಲಿರುವ 100 ಭಾಷೆಗಳಲ್ಲಿ ಕನ್ನಡವೂ ಒಂದು ಅನ್ನುತ್ತಾರೆ....ನಿಜವಾ....?
ಆ ಸಾಲಿಗೆ ಕನ್ನಡವನ್ನು ಯಾರು ಸೇರಿಸಿದರೋ ಗೊತ್ತಿಲ್ಲ, ಆದರೆ ಸಂವೃದ್ಧವಾಗಿರುವ ಕನ್ನಡ
ಸಾಯುವುದು ಅಷ್ಟು ಸುಲಭದ ಮಾತಲ್ಲ, ಕನ್ನಡದ ನಡುವೆ ಇಂಗ್ಲೀಷ್ ಹೆಚ್ಚುತ್ತಿದೆ ಎಂದು ಬೇಕಾದರೆ ಹೇಳಬಹುದು.

* ಸಿಕ್ಕಿರುವ ಶಾಸ್ತ್ರೀಯ ಸ್ಥಾನಮಾನವನ್ನು ಬಳಸಿಕೊಳ್ಳೋದು ಹೇಗೆ....?
ಒಂದು ವಿದ್ವಾಂಸರ ಸಮಿತಿ ರಚಿಸಿ ಕನ್ನಡದಲ್ಲಿ ಆಗಬೇಕಾದ ಕೆಲಸಗಳ ಬಗೆಗೆ ಸಮಗ್ರ ಯೋಜನೆಗಳನ್ನು ನಿಮರ್ಿಸಿ, ಅದರ ಪ್ರಸ್ತಾವನೆಯನ್ನು ಕೇಂದ್ರದ ಮುಂದಿಟ್ಟು, ಅವಶ್ಯಕವಾಗಿ ಇದಕ್ಕೆಲ್ಲಾ ಹಣಬೇಕಾಗಿದೆ ಎಂದು ಪಟ್ಟು ಹಿಡಿದು ಕನ್ನಡದ ಕೆಲಸಗಳನ್ನು ಪ್ರಾರಂಭಿಸಬೇಕಾಗಿದೆ. ತಮಿಳು ನಾಡಿಗೆ ಈಗಾಗಲೇ ಸುಮಾರು 30 ಕೋಟಿಯಷ್ಟು ಅನುದಾನ ಬಿಡುಗಡೆಯಾಗಿದೆ. ಆದರೆ, ನಮ್ಮಲ್ಲಿ ಯೋಜನೆಗಳನ್ನು ರೂಪಿಸುವವರೇ ಇಲ್ಲದಂತಾಗಿದೆ.

* ಆಂಧ್ರದ ತೆಲಂಗಾಣದಂತೆ ನಮ್ಮಲ್ಲೂ ಉತ್ತರ ಕನರ್ಾಟಕ ಮತ್ತು ಕೊಡಗು ಜಿಲ್ಲೆಗಳು ಸ್ವತಂತ್ರ ರಾಜ್ಯದ ಕೂಗೆದ್ದಿದೆ, ಇದರ ಉದ್ದೇಶ ಏನು....?
ಹಿಂದೆ ಇಡೀ ಭಾರತ ದೇಶದಲ್ಲಿ ಛಿದ್ರ-ಛಿದ್ರವಾಗಿ ಹೋಗಿದ್ದ ನಮ್ಮ ನಾಡು ಬಹಳ ಕಷ್ಟಗಳನ್ನು ಎದುರಿಸಿ ಏಕೀಕರಣದಿಂದಾಗಿ ಒಂದಾಗಿದೆ. ಈಗ ಮತ್ತೇ ಬೇರೆಯಾಗುವ ಮಾತು ದೂರವೇ ಸರಿ. ಆ ಜಿಲ್ಲೆಗಳಲ್ಲಿನ ಇಂತಹ ಹೋರಾಟಕ್ಕೆ ಮುಖ್ಯ ಕಾರಣ, ಅಲ್ಲಿನ ಅಭಿವೃದ್ಧಿಗಾಗಿ ಸರಿಯಾಗಿ ಹಣವಿನಿಯೋಗ ಆಗುತ್ತಿಲ್ಲ ಎನ್ನುವುದು. ಆದರೆ ಎಲ್ಲಾ ಜಿಲ್ಲೆಗಳಿಗೂ ಹಣವನ್ನು ಸರಿಯಾಗಿಯೇ ಹಂಚಲಾಗಿರುತ್ತದೆ, ಆ ಹಣವು ಸಾಲದೆಂಬುದೇ ಈ
ಕೂಗಿಗೆ ಕಾರಣವಾದರೂ ಅವರ ಮನಸ್ಸುಗಳಲ್ಲಿ ದೂರವಾಗುವ ಯೋಚನೆ ಖಂಡಿತಾಯಿಲ್ಲಾ.

* ಇಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆಯಾ....?
ಹಿಂದೆ ಹೊಟ್ಟೆ ಪಕ್ಷವೆಂಬ ಪಕ್ಷ ಕನರ್ಾಟಕದಲ್ಲಿತ್ತು ಎನ್ನುವುದು ಈಗ ಇತಿಹಾಸ, ಪ್ರಾದೇಶಿಕ ಪಕ್ಷಗಳು ಇಂತಹ ಸ್ಥಿತಿಯನ್ನು ತಲುಪುವುದಾದರೆ ಅದು ಅನವಶ್ಯಕ. ಇರುವ ಪಕ್ಷಗಳಲ್ಲೇ ವಿವಿಧ ಭಾಗದ ಜನರು ಸೇರುತ್ತಾರೆ, ಅಲ್ಲೇ ಸರಿಯಾದ ಹೋರಾಟ ನಡೆಸಿದರೆ ಸಾಕು.

* ಕನ್ನಡದಲ್ಲಿ ಇಂಗ್ಲೀಷ್ ಪದಗಳು ಇರುವ ಹಾಗೇ ಸಂಸ್ಕೃತದ ಪದಗಳು ಸೇರಿವೆ, ಇದರ ಬಳಕೆಯ ಬಗ್ಗೆ ಶಂಕರಭಟ್ಟರು ಮಾಡಿದ ತರ್ಕವನ್ನು ಒಪ್ಪಬಹುದಾ.....?
ಅವರ ಪ್ರಕಾರ ಪದಗಳಲ್ಲಿನ ಮಹಾಪ್ರಾಣವನ್ನು ಬಿಟ್ಟು ಉಪಯೋಗಿಸುವುದು. ಇಂತಹ ಪದಗಳು ಈಗಾಗಲೇ ಸಾಕಷ್ಟಿವೆ, ನಾವು ಬಳಸುವ 100 ಪದಗಳಲ್ಲಿ
ಶೇಕಡ 50 ಪದಗಳು ಸಂಸ್ಕೃತದಿಂದ ಬಂದದ್ದಾಗಿದ್ದು ಆ ಪದಗಳು ಬೇಡವೆಂದರೆ ಕನ್ನಡ ಪದ ಸಂಪತ್ತು ಇಳಿಮುಖಗೊಳ್ಳುತ್ತದೆ.

* ಕನ್ನಡ ಚಳುವಳಿಗಳು ಈಗ ಬೇಕಾ...?
ಕನ್ನಡ ಭಾಷಾ ಪ್ರೇಮಿಗಳಲ್ಲಿ ಯಾವುದೇ ಆಥರ್ಿಕ ಸಹಾಯವೂ ಇಲ್ಲದೆ ಬೆಳೆದು ಬಂದದ್ದು ಕನ್ನಡ ಚಳುವಳಿಗಳು. ಕನ್ನಡವನ್ನು ಆಡಲು, ಬೆಳೆಸಲು ಚಳುವಳಿಗಳು ಇರಲೇ ಬೇಕು. ಆದರೆ, ಇಂದು ನಡೆಸುತ್ತಿರುವ ಉತ್ಸವಗಳಿಂದಾಗಿ ಕನ್ನಡ ಉಳಿಯೋದು, ಬೆಳೆಯೋದು ಸಾಧ್ಯವಿಲ್ಲ. ಇವೆಲ್ಲಾ ಒಂದು ಪ್ರಚಾರ ಕ್ರಿಯೆಯಂತೆ ತೋರುತ್ತದೆ, ಅದು ಪ್ರಚಾರಕ್ಕೆ ಇರಲಿ. ಆದರೆ, ಸಕರ್ಾರ ಮತ್ತು ಸಾಹಿತಿಗಳು ಕನ್ನಡದ ಬಗೆಗೆ ಸಮಾಲೋಚಿ
ಸಬೇಕು.

* ಲಕ್ಷ ಸಂಪಾದಿಸುವ ಇಂಗ್ಲೀಷ್ ಕೆಲಸಗಳ ನಡುವೆ ಕನ್ನಡದ ಬೆಳವಣಿಗೆ,,,,?
ಮುಖ್ಯವಾಗಿ ಇದು ಉದ್ಯಮ ಪತಿಗಳ ಮೇಲೆ ನಿಂತಿದೆ. ಕೆಲಸದಲ್ಲಿ ಕನ್ನಡಿಗರಿಗೆ ಸರಿಯಾದ ಅವಕಾಶಗಳನ್ನು ನೀಡುವುದರಿಂದ ಹಿಡಿದು ಕೆಲಸದಲ್ಲಿರುವ ಇತರರಿಗೂ ಕನ್ನಡವನ್ನು ಕಲಿಸುವ ಕರ್ತವ್ಯವನ್ನು ಕೈಗೊಳ್ಳಬೇಕು.

* ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ಅಂಗೀಕಾರವಾಗುತ್ತೆ ಆಗುತ್ತೆ...ಆದರೂ ಕೆಲಸ ಆಗೋದಿಲ್ಲ. ನಿಮ್ಮ ಭಾಷಣದಲ್ಲಿ ಇಂತಹ ನಿರ್ಣಯಗಳು ಇವೆಯಾ....?
ನಾನು ಈ ಬಾರಿ ಯಾವುದೇ ಹೊಸ ನಿರ್ಣಯವನ್ನೂ ಸಭೆಯ ಮುಂದೆ ಇಡುತ್ತಿಲ್ಲ. ಇದೂವರೆಗೂ ತೆಗೆದುಕೊಂಡಿರುವಂತಹ ನಿರ್ಣಯಗಳಲ್ಲಿ ಮುಖ್ಯವಾದದನ್ನು ಪಟ್ಟಿ ಮಾಡಿ ಭಾಷಣ ಮಾಡಲಿದ್ದೀನಿ, ಈ ಎಲ್ಲಾ ನಿರ್ಣಯಗಳೂ ಅನುಷ್ಟಾನಗೊಂಡರೆ ಸಾಕು ಕನ್ನಡ ನಿಜಕ್ಕೂ ಉದ್ಧಾರವಾದಂತೆಯೇ....ಆದ್ದರಿಂದ ಇಲ್ಲಿ ಹೊಸದು ಏನೂ ಬೇಕಿಲ್ಲ.

* ಇಂದಿನ ಸಾಹಿತ್ಯಲೋಕ ಹೇಗಿದೆ....?
ನಾನು ನೋಡುತ್ತಾ ಬಂದಂತೆ ಹಿಂದಿನ ಹತ್ತು ವರ್ಷಕ್ಕೂ, ಇಂದಿನ ಸಾಹಿತ್ಯಕ್ಕೂ ಸಾಕಷ್ಟು
ವ್ಯತ್ಯಾಸಗಳಿವೆ, ಈಗ ಹೊಸದೊಂದು ಶೈಲಿ ಬೆಳೆಯುತ್ತಿದೆ. ನಿಜಕ್ಕೂ ಇಂದಿನ ಸಾಹಿತ್ಯ ಶ್ರೀಮಂತವಾಗುತ್ತಾ ಸಾಗುತ್ತಿದೆ ಮತ್ತು ಮುಂದಿನ ಶತಮಾನಕ್ಕೆ ಆಶಾದಾಯಕವಾಗಿದೆ.

* ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಹೇಗಿದೆ....?
ಸುದ್ಧಿ ಮಾಧ್ಯಮಗಳು ಹಾಗೂ ಇತರೆ ಪತ್ರಿಕೆಗಳು ಹೊಸ ಪದಗಳನ್ನು ಆವಿಷ್ಕರಿಸುತ್ತಾ ಸಾಗಿರುವುದು ಸಂತಸದ ವಿಷಯ, ಆದರೆ ಎಫ್.ಎಂ. ಚಾನೆಲ್ಗಳು ಹಾಗೂ ಕೆಲವು ಧಾರಾವಾಹಿಗಳು ಬಳಸುತ್ತಿರುವ ಭಾಷೆ ಅತ್ಯಂತ ಕೆಟ್ಟದಾಗಿದೆ, ಅದು ಕನ್ನಡವೂ ಅಲ್ಲಾ ಇಂಗ್ಲೀಷೂ ಅಲ್ಲ. ಇದರಿಂದ ಭಾಷೆ ಅಶುದ್ಧವಾಗುತ್ತಿದೆ ಇದನ್ನು ತಪ್ಪಿಸಲು ನಿದರ್ೇಶಕರುಗಳು ಸೂಕ್ತವಾದ ಮಾರ್ಗದರ್ಶನದೊಂದಿಗೆ ಸಾಗಬೇಕಾಗಿರುವುದು ಅವಶ್ಯಕವಾಗಿದೆ.

* ನಿಮ್ಮ ದಿನಚರಿ....
ಮುಂಜಾನೆ 4;30ಕ್ಕೆ ಎದ್ದು ಕಾಫಿ ಕುಡಿದು ವಾಕಿಂಗ್ ಮುಗಿಸಿ ಬಂದ ನಂತರ ಸ್ನಾನ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಓದು ಹಾಗೂ ಬರವಣಿಗೆ, ಊಟದ ನಂತರ ಮನೆಯವ
ರೊಂದಿಗೆ ಮಾತುಕತೆಯಲ್ಲಿ ತೊಡಗುವುದು. ಮಧ್ಯಾಹ್ನದ ವೇಳೆ ನಿದ್ರೆ ಮಾಡುವ ಅಭ್ಯಾಸವಿಲ್ಲ. ಸಂಜೆ 4 ರಿಂದ 6ರವರೆಗೆ ಸಂದರ್ಶನದ ವೇಳೆ, ಉಳಿದ ಕಾಲದಲ್ಲಿ ಓದು, ಬರವಣಿಗೆಯಲ್ಲಿ ತೋಚಿದ ಕೆಲಸಗಳನ್ನು ಮಾಡುತ್ತ ರಾತ್ರಿ 9:30ರ ವೇಳೆಗೆ ನಿದ್ರೆಗೆ ಜಾರುವುದು. ಅನ್ನ-ಸಾರು, ತಿಳಿ ಮಜ್ಜಿಗೆ ದಿನದ ಆಹಾರ, ಬೆಳೆಗ್ಗೆ ಸ್ವಲ್ಪ ತರಕಾರಿ ಹಾಗೂ ದಿನಕ್ಕೆ ಯಾವುದಾದರು ಒಂದು ಹಣ್ಣು ಇವಿಷ್ಟೇ ದೇಹಕ್ಕೆ.

* ಸಾಹಿತ್ಯದ ಜೊತೆಗಿನ ಇತರೆ ಕೆಲಸಗಳು...?
ಸುಮಾರು ಐವತ್ತು ವರ್ಷಗಳಿಂದ ಬೆಂಗಳೂರಿನ "ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ"ನ ಜೊತೆಗಿನ ಒಡನಾಟವಿದೆ ಹಾಗೂ 30 ವರ್ಷಗಳಿಂದ ಅಲ್ಲಿನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.



Friday, November 5, 2010




ಮೊದಲಿಗರು...
ಭಾರತೀಯರ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆ, ಸಾಧನೆಗಳಿಗೆ ಸಹಕಾರಿಯಾಗುವಂತ ಸೂಕ್ತ ಮಾರ್ಗಕ್ಕೆ ನಾಂದಿ ಹಾಡಿದ ಹಲವರಲ್ಲಿ 'ಶಾಂತಿ ಸ್ವರೂಪ ಬಟ್ನಾಗರ್' ಮತ್ತು 'ವಿಕ್ರಮ್ ಸಾರಾಬಾಯಿ' ಪ್ರಮುಖರು. ಎಲ್ಲೊ ಹುಟ್ಟಿ, ಎಲ್ಲೊ ಬೆಳೆದು ದೇಶಕ್ಕಾಗಿ ದುಡಿಯಬೇಕೆಂಬ ಇವರ ಅಭಿಮಾನ, ವಿಜ್ಞಾನದಲ್ಲಿನ ಆಸಕ್ತಿ, ಇವೆಲ್ಲಾ ಸಿಲೆಬಸ್ ಅನ್ನೊ ಬಾಲ ಹಿಡಿದು ಹೊರಟಿರೊ ವಿದ್ಯಾಥರ್ಿ ಮಿತ್ರರಿಗೆ ಸ್ಪೂತರ್ಿಯಾಗಲಿ.
* ಶಾಂತಿ ಸ್ವರೂಪ ಬಟ್ನಾಗರ್:
21ನೇ ಫೆಬ್ರವರಿ 1894ರಂದು ಶಹಪುರದಲ್ಲಿ(ಈಗ ಪಾಕಿಸ್ತಾನದಲ್ಲಿದೆ) ಜನಿಸಿದ ಬಟ್ನಾಗರ್ ಮಗುವಾಗಿದ್ದಾಗೆ ತನ್ನ ತಂದೆಯನ್ನು ಕಳೆದುಕೊಂಡಿದ್ದರಿಂದ ಇಂಜಿನಿಯರ್ ಆಗಿದ್ದ ತಾತನ ಮನೆಯಲ್ಲೇ ಬೆಳೆಯಬೇಕಾಯಿತು. ಎಲ್ಲರ ಜೀವನದಲ್ಲೂ ಒಂದು ಬಹಳ ಮುಖ್ಯವಾದ ತಿರುವುಗಳು ಬರುತ್ತವೆ, ಅದು ಬಹಳ ಬೇಗನೆ ಬಟ್ನಾಕರ್ ಜೀವನದಲ್ಲಿ ಬಂದಿದ್ದು ತನ್ನ ತಾತನ ಸಹಾಯದಿಂದ. ಚಿಕ್ಕಂದಿನಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಮೊಳೆಯಿತು. ಅನೇಕ ಸ್ವಯಂ ಚಾಲಿತ ಗೊಂಬೆಗಳು, ಬ್ಯಾಟರಿಗಳು, ತಂತಿಯ ಸಹಾಯದಿಂದ ನಿಮರ್ಿಸಿದ ದೂರವಾಣಿಗಳು, ಇವೇ ಅವರ ಆಟಿಕೆಗಳಾಗಿದ್ದವು. ಅಷ್ಟೆ ಅಲ್ಲದೆ ಕಾವ್ಯ, ನಾಟಕಗಳ ಬಗೆಗಿನ ಒಡನಾಟವು ದೊರೆತದ್ದು ಒಬ್ಬ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿತು. ಎಂ.ಎಸ್ಸಿ ಪದವಿ ಮುಗಿದ ನಂತರ ಉನ್ನತ ಅಧ್ಯಯನವನ್ನು ಇಂಗ್ಲೆಂಡಿನಲ್ಲಿ ಮುಗಿಸಿ "ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ" ಪ್ರೊಫೆಸರ್ ಆಗಿ ಕಾಯರ್ಾರಂಭ ಮಾಡಿದರು.
ರಸಾಯನ ಶಾಸ್ತ್ರದಲ್ಲಿ ಬರುವ ಜಿಡ್ಡಿನ ಕಣಗಳಿಂದಾದ ದ್ರವ(ಎಮಲ್ಶನ್), ಅಂಟು ಪದಾರ್ಥ(ಕೊಲಾಯಡ್), ಕಾಖರ್ಾನಾ ರಾಸಾಯನಿಕಗಳು, ಇವುಗಳು ಬಟ್ನಾಕರರ ನೆಚ್ಚಿನ ವಿಷಯಗಳಾದೂ, ಹೆಚ್ಚಿನ ಸಾಧನೆ ಕಂಡುಬಂದಿರುವುದು 'ಮ್ಯಾಗ್ನೆಟೋ ಕೆಮಿಸ್ಟರಿಯಲ್ಲಿ'. ಪ್ರಯೋಗಾಲಯದಲ್ಲಿ ಬಹುತೇಕ ತಮ್ಮ ಸಮಯವನ್ನು ಸಂಶೋಧನೆಗಾಗೇ ಮೀಸಲಿರಿಸಿದ್ದರು. ಇವರ ಕೆಲಸಗಳನ್ನು ಗುರುತಿಸಿ ಬ್ರಿಟಿಷ್ ಸಕರ್ಾರ 'ರಾಯಲ್ ಸೊಸೈಟಿಯ' ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯಾ ನಂತರದಲ್ಲಿ ಇವರಿಗೆ "ಪದ್ಮಭೂಷಣ" ಪ್ರಶಸ್ತಿಯೂ ದೊರೆಯಿತು.
1940ರಲ್ಲಿ ಪ್ರಾರಂಭವಾದ "ಕೌನ್ಸಿಲ್ ಆಫ್ ಸೈನ್ಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸಚರ್್"(ಸಿ.ಎಸ್.ಐ.ಆರ್.)ನ ಪ್ರಥಮ ನಿದರ್ೇಶಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಭಾರತೀಯ ಸಂಶೋಧನಾ ಕೇಂದ್ರಗಳ ನಿಮರ್ಾಣದಲ್ಲಿ ಮಹತ್ವದ ಪಾತ್ರವಹಿಸಿದರು. ಇವರನ್ನು ಭಾರತದ "ಸಂಶೋಧನಾ ಪ್ರಯೋಗಾಲಯಗಳ ಜನಕ" ಎಂದು ಕರೆಯುತ್ತಾರೆ. ಮೈಸೂರಿನ "ಕೇಂದ್ರ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ" ಮತ್ತು ಪುಣೆಯ "ರಾಷ್ಟೀಯ ರಾಸಾಯನಿಕ ಪ್ರಯೋಗಾಲಯ" ಸೇರಿದಂತೆ ಅನೇಕ ಸಂಸ್ಥೆಗಳನ್ನು ನಿಮರ್ಿಸಿ ಮುಂದುವರಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. 1955ರಲ್ಲಿ ಇವರು ಕಾಲವಾದ ನಂತರ ಎ.ಎಸ್.ಐ.ಆರ್. ಸಂಸ್ಥೆಯು ಬಟ್ನಾಗರ್ ಹೆಸರಿನಲ್ಲಿ ಶ್ರೇಷ್ಠ ವಿಜ್ಞಾನಿಗಳಿಗೆ ಪ್ರಶಸ್ತಿಯನ್ನು ನೀಡುತ್ತಿದೆ ಹಾಗೂ ಇವರೇ ಸಂಯೋಜಿಸಿದ್ದ "ಕುಲಗೀತ್" ಹಾಡನ್ನು ಅವರ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಹಾಡುತ್ತಾರೆ.

* ವಿಕ್ರಮ್ ಸಾರಾಬಾಯಿ:
ಇವರನ್ನು "ಭಾರತೀಯ ಅಂತರಿಕ್ಷ ಕಾರ್ಯಗಳ ಜನಕ" ಎಂದು ಕರೆಯಲಾಗುತ್ತದೆ. ಭಾರತದ ಪ್ರಪ್ರಥಮ ಉಪಗ್ರಹ "ಆರ್ಯಭಟ"ದ ಉಡಾವಣೆಯ ಹಿಂದೆ ಇದ್ದ ಪ್ರಮುಖ ಶಕ್ತಿ ವಿಕ್ರಮ್ ಸಾರಾಬಾಯಿ. ಅದು ಕಕ್ಷೆ ಸೇರಿದ್ದು 1975ರಲ್ಲಿ, ಆದರೆ ಸಾರಾಬಾಯಿಯವರು 1971 ರಲ್ಲೇ ದೇಹತ್ಯಾಗ ಮಾಡಿದ್ದರು. ಆ ಸಮಯಕ್ಕಾಗಲೇ ಅವರು ಮಾಡಿದ್ದ ಕೆಲಸಗಳು, ಬೆಳೆಸಿದ್ದ ಸಂಸ್ಥೆಗಳು, ಕಂಡಿದ್ದ ಕನಸು ಅನೇಕ.
1919 ಆಗಸ್ಟ್ 19ರಂದು ಅಹಮದಾಬಾದ್ನಲ್ಲಿ ಜನಿಸಿದ ಸಾರಾಬಾಯಿಯವರದು ಬಟ್ಟೆಯ ಕಾಖರ್ಾನೆಗಳನ್ನು ನಡೆಸುತ್ತಿದ್ದ ಕುಟುಂಬ. ಕೇಂಬ್ರಿಡ್ಜಿನಲ್ಲಿ ಕಾಲೇಜು ಶಿಕ್ಷಣವನ್ನು ಪಡೆದು ಬೆಂಗಳೂರಿನ ಐ.ಐ.ಎಸ್ಸಿ ಯಲ್ಲಿ ಸಿ.ವಿ.ರಾಮನ್ರವರ ಬಳಿ ಸಂಶೋಧನಾ ವಿದ್ಯಾಥರ್ಿಯಾಗಿ ಸೇರಿ ಕಾಸ್ಮಿಕ್ ಕಿರಣಗಳ ಬಗೆಗೆ ಅಧ್ಯಯನ ಕೈಗೊಂಡರು. 'ಫಿಸಿಕಲ್ ರೀಸಚರ್್ ಲ್ಯಾಬೊರೇಟರಿ' ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳನ್ನು ಹುಟ್ಟಿಹಾಕುತ್ತಾ ಇಡೀ ಭಾರತದಾದ್ಯಂತ ವಿಜ್ಞಾನದ ಬೀಜವನ್ನು ಬಿತ್ತುವಲ್ಲಿ ಯಶಸ್ವಿಯಾದರು. ಇಸ್ರೋ ಸಂಸ್ಥೆಯ ಎರಡನೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಪರಿ ಬೆರಗಾಗಿಸುವಂತದು. ತುಂಭಾ ಹಾಗೂ ಶ್ರೀಹರಿಕೋಟಾದಲ್ಲಿ ಮೊದಲ ಬಾರಿಗೆ ರಾಕೆಟ್ಗಳ ಉಡಾವಣಾ ಕೇಂದ್ರವನ್ನು ಹೋಮಿ ಜಹಂಗೀರ್ ಬಾಬಾರ ಸಹಾಯದೊಂದಿಗೆ ನಿಮರ್ಿಸಿದ್ದು ದೇಶದ ಮಟ್ಟಿಗೆ ಒಂದು ಹೊಸ ಮೈಲಿಗಲ್ಲು. ಈಗಿನ ಇಸ್ರೋದ ಸಾಧನೆಗಳಿಗೆ ಇವರು ಹಾಕಿದ ಭದ್ರ ಬುನಾದಿಯೆ ಕಾರಣ ಎಂದರೆ ತಪ್ಪಿಲ್ಲ. ಜೊತೆ ಜೊತೆಗೆ ಉಡುಪಿನ ತಂತ್ರಜ್ಞಾನವನ್ನೂ ಬೆಳೆಸುತ್ತಿದ್ದರು. ಆದಕಾರಣ ನಿರ್ವಹಣೆಯ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ನೀಡಲು ಅನುವಾಗುವಂತೆ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್" ತೆರೆದರು. ಈ ಸಂಸ್ಥೆಯೂ ಈಗ ಜಗದ್ವಿಖ್ಯಾತ.
ಇವರ ಇಡೀ ಜೀವನ, ಜೀವಮಾನದ ಹಣ, ಆಸ್ತಿ ಎಲ್ಲವೂ ದೇಶದ ವಿಜ್ಞಾನದ ಬೆಳವಣಿಗೆಗಳಿಗೆ ಮೀಸಲಿರಿಸಿದ್ದರು. ಇವರ ಜೀವನ ಕ್ರಮವೇ ನಮಗೊಂದು ಪಾಠ.



Sunday, October 24, 2010





ಯಾರು ಮೊದಲು...?!
ವಿಜ್ಞಾನಿಗಳ ಸತತ ಅಧ್ಯಯನ, ಸಂಶೋಧನೆಯ ಫಲವಾಗಿ ರೂಪುಗೊಂಡ ಪ್ರನಾಳ ಶಿಶುವಿನ ಜನನದಿಂದ ಮಕ್ಕಳಿಲ್ಲದೆ
ನರಳಾಡುತ್ತಿದ್ದವರು ಸಂತಸಗೊಂಡಿದ್ದಾರೆ. ಆದರೆ, ಈ ಸಂತಸ ಹಿಂದೆ ಎಷ್ಟು ಜನರಿಗಿತ್ತು...? ಭಾರತದಲ್ಲಿ ಮೊದಲಿ
ಗೆ ಈ ಪ್ರಯೋಗದಲ್ಲಿ ಯಶಸ್ವಿಯಾದ
ಡಾ.ಸುಭಾಷ್ ಮುಖೋಪಾಧ್ಯಾಯರ ಜೀವ ಜನರ, ಸಕರ್ಾರದ ನಿಂದನೆಯಿಂದಾಗಿ ನೊಂದು ನೇಣಿಗೆ ಶರಣಾಯಿತು. ಈಗ ದೇಶದಲ್ಲಿ ಪ್ರಥಮ "ಪ್ರನಾಳ ಶಿಶು" ನಾನು ನಾನೆಂಬ ಕಚ್ಚಾಟಗಳು ಮುಂದುವರಿದಿವೆ. ಹಾಗಾದರೆ ಯಾರು ಮೊದಲು ಅನ್ನೊ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ ಜನರಲ್ಲಿರುವ ತಪ್ಪು ತಿಳು
ವಳಿಕೆ ಪ್ರನಾಳ ಶಿಶು ಎಂದರೆ ಅದು ಗಾಜಿನ ಪ್ರನಾಳದಲ್ಲೆ ಹುಟ್ಟಿ, ಬೆಳೆದು, ದೊಡ್ಡದಾಗಿ ಓಡಾಡುವ ಹಂತಕ್ಕೆ ಬಂದಾಗ ಆ ಕೃತಕ ಜೀವಿ ಪ್ರಯೋಗಾಲಯದಿಂದ ಹೊರಬಂದು ಬೇಕಾದವರ ಮಡಿಲು ಸೇರುತ್ತದೆಂಬುದು. ಇದು ನಮ್ಮ ಕಲ್ಪನೆಯಷ್ಟೆ....ನಿಜವಾದ ಕ್ರಿಯೆ ಹೀಗಿರುತ್ತದೆ: 'ಹೆಣ್ಣಿನಿಂದ ತೆಗೆದ ಅಂಡ ಹಾಗೂ ಗಂಡಿನಿಂದ ಪಡೆದ ವೀರ್ಯವನ್ನು ಸಂಗ್ರಹಿಸಿ, ವೈದ್ಯಕೀಯ ವಿಜ್ಞಾನಿಗಳು ಅದನ್ನು ತಮ್ಮ ಪ್ರಯೋಗಾಲಯದಲ್ಲಿ ತಕ್ಕ ವಾತಾವರಣದಲ್ಲಿ ಸಂಸ್ಕರಿಸಿ, ಅತಿ
ಸೂಕ್ಷ್ಮವಾದ ವೀರ್ಯದ ಕಣವನ್ನು ಅಂಡದ ಜೊತೆ ಸಂಧಿಸುವಂತೆ ಮಾ
ಡುವುದು ಭ್ರೂಣದ ಆರಂಭದ ಅವಸ್ಥೆಯ ಸೃಷ್ಟಿಗೆ ಕಾರಣವಾಗುತ್ತದೆ. ಈ ಭ್ರೂಣದ ಬೆಳವಣಿಗೆಗಾಗಿ ನಂತರದಲ್ಲಿ ಹೆಣ್ಣಿನ ಗರ್ಭವನ್ನು ಸೇರಿಸುವುದರಿಂದ, ಆ ಹೆಣ್ಣು ಗರ್ಭವತಿಯಾಗಿ ಮಗುವಿಗೆ ಜನ್ಮವನ್ನು ನೀಡುತ್ತಾಳೆ.' ಇದರಲ್ಲಿ ಅಸಹ್ಯಕಾರವಾದುದು ನಮ್ಮ ದುರಾಲೋಚನೆಗಳು ಮಾತ್ರ.
ಡಾ.ಟಿ.ಸಿ.ಆನಂದ ಕುಮಾರ್ ಮತ್ತು ಡಾ.ಇಂದಿರಾ ಹಿಂದುಜಾರವರ ಪ್ರಯೋಗಗಳಿಂದಾಗಿ ಆಗಸ್ಟ್ 6,1986ರಂದು ಸೃಷ್ಟಿಯಾದ "ಹರ್ಷ ಚೌದ" ಭಾರತದ ಪ್ರಥಮ ಪ್ರನಾಳ ಶಿಶುವೆಂದು ಹೆಸರಾಯಿತು. ಆದರೆ 1984ರಲ್ಲಿ ಹುಟ್ಟಿದ "ಕೃತಿ ಪರೇಖ್" ತಾನೇ ಮೊದಲು ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಕೃತಿ 1984ರಲ್ಲಿ ಜನಿಸಿದ್ದು ನಿಜವಾದರೂ ಅದು ಭಾರ
ದಲ್ಲಲ್ಲ. ಜಗತ್ತಿನ ಪ್ರಥಮ ಪ್ರನಾಳ ಶಿಶು "ಲೂಯಿಸ್ ಬ್ರೌನ್"ನನ್ನು 1978ರಲ್ಲಿ ಸೃಷ್ಟಿಸಿ ಈಗ ನೊಬೆಲ್ ಪುರಸ್ಕಾರಕ್ಕೆ ಪಾತ್ರವಾಗಿರುವ ಇಂಗ್ಲೆಂಡಿನ 'ರಾಬಟರ್್ ಎಡ್ವಡರ್್' ಮತ್ತು ಡಾ.ಪಟ್ರಿಕ್ರ ಸಂಶೋಧನೆಯಿಂದ ಜನಿಸಿದವಳು ಕೃತಿ. ಎಲ್ಲೇ ಜನಿಸಿದರೂ ತನ್ನ ತಂದೆ-ತಾಯಿ ಭಾರತೀಯರು, ತಾನೂ ಭಾರತೀಯಳೆ ಹಾಗೂ ಹರ್ಷ ತನಗಿಂತ ಎರಡು ವರ್ಷ ಚಿಕ್ಕವಳೆಂಬುದು ಕೃತಿಯ ವಾದ. ಇಷ್ಟೆಲ್ಲಾ ಅವಾಂತರಗಳಿಗೂ ಕಾರಣ ಭಾರತ ಸಕರ್ಾರ ಪ್ರಥಮ ಪ್ರನಾಳ ಶಿಶುವಿಗೆ ಕೆಲವು ಸೌಕರ್ಯಗಳನ್ನು ನೀಡಿವುದಾಗಿ ಘೋಷಿಸಿದ್ದು. ತಂದೆಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹರ್ಷ ತನ್ನ ವಿದ್ಯಾಭ್ಯಾಸಕ್ಕಾಗಿ ಸಕರ್ಾರದ ದುಂಬಾಲು ಬಿದ್ದಳು.
ಆದರೆ ಪ್ರಥಮದ ಹೆಸರು ಅವಳ ಪಾಲಾಗ ಬಾರದೆಂದು ಕೃತಿ ಹೋರಾಟವನ್ನು ನಡೆಸುತ್ತಿದ್ದಾಳೆ. ಡಾ.ಆನಂದ ಕುಮಾರ
ರ ಹುಡುಕಾಟದಿಂದ ಹೊರ ಬಂದ ಹೆಸರು ಡಾ.ಸುಭಾಷ್ ಮುಖೋಪಾಧ್ಯಾಯರ ಸಂಶೋಧನೆಯ ಪ್ರತಿಫಲವಾಗಿ ಹುಟ್ಟಿದ 'ದುಗರ್ಾ'(ಕಾನುಪ್ರಿಯ ಅಗರ್ವಾಲ್). ಇವಳು ಜನಿಸಿದ್ದು ಜಗತ್ತಿನ ಮೊದಲ ಪ್ರನಾಳ ಶಿಶು ಬ್ರೌನ್ ಹುಟ್ಟಿ ಕೇವಲ 67 ದಿನಗಳ ಅಂತರದಲ್ಲಿ ಅಂದರೆ 3ನೇ ಅಕ್ಟೋಬರ್ 1978ರಂದು. ಕಲ್ಕತ್ತಾದಲ್ಲಿ ಹುಟ್ಟಿದ ದುಗರ್ಾ ಪುಣೆಯಲ್ಲಿ ಎಂ.ಬಿ.ಎ. ಪದವಿ ಮುಗಿಸಿ ಪ್ರಸ್ತುತ ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ಜನರ ಚುಚ್ಚು ಮಾತುಗಳಿಂದ ದೂರವಿರಲು ಬಯಸಿ ದುಗರ್ಾ ಕುಟುಂಬ ಈ ವಿಷಯವನ್ನು ಗುಟ್ಟಾಗಿಟ್ಟಿದ್ದರು.

ದುಗರ್ಾ ಪ್ರಥಮದ ಕಿತ್ತಾಟಕ್ಕೆ ಅಂತ್ಯವಾಡಿದ್ದಾಳಾದರೂ ಭಾರತದ ಕೀತರ್ಿ ಪತಾಕೆಯನ್ನು ಹಾರಿಸಬೇಕಿದ್ದ ಡಾ.ಸುಭಾಷ್ ಪಶ್ಚಿಮ ಬಂಗಾಳದ ತಲೆಗೆಟ್ಟ ಸಕರ್ಾರದಿಂದ ಚಿತ್ರಹಿಂಸೆ ಪಡುವಂತಾಯಿತು. ಟೋಕಿಯೋದಲ್ಲಿ ತನ್ನ ಸಂಶೋಧನೆಯ ಬಗ್ಗೆ ಜಗತ್ತಿಗೆ ತಿಳಿಸ
ಬೇಕಿದ್ದ ಅವಕಾಶವನ್ನು ಸಕರ್ಾರ ಕಿತ್ತುಕೊಂಡಿತು. ಮನನೊಂದ ಈ ಸೂಕ್ಷ್ಮ ಜೀವಿ 19ರ ಜೂನ್ 1981ರಂದು ಆತ್ಮಹತ್ಯೆಗೆ ಮುಂದಾದರು. ಮಾತಿಗೆ ಮುಂಚೆ ನಮ್ಮ ಮಹಾಭಾರತದಲ್ಲಿ, ವೇದಗಳಲ್ಲಿ ಈ ಪ್ರಸ್ತಾಪ ಮೊದಲೇ ಇದೆ ಎಂದು ಕೊಚ್ಚಿಕೊಳ್ಳುವ ಬೂಟಾಟಿಕೆ ದಾಸರು ಆದಿನ ಎಲ್ಲವನ್ನು ಮಡಿ ಅನ್ನೊ ಹೆಸರಿನಲ್ಲಿ ಮುದುಡಿ ಕೂಡಿಸಿದ್ದರೇನೊ...? ತನ್ನ ಇಡೀ ಜೀವನವನ್ನೆ ಸಂಶೋಧನೆಗಾಗಿ, ದೇಶಕ್ಕಾಗಿ ಮುಡುಪಿಟ್ಟ ವಿಜ್ಞಾನಿಯ ಮನ ನೋಯಿಸಿದ ಅಂದ ನಾಗರೀಕರಿಗೆ ದಿಕ್ಕಾರ....ದಿಕ್ಕಾರ....


ಗಾಂಧೀಜಿಯ ಪೋಸ್ಟ್ಮನ್ ಈ ಆಂಗ್ರಿ ಯಂಗ್ಮನ್

ಸರಿಯಾಗಿ ಅರ್ಧ ಶತಮಾನವನ್ನು ಕಾಣದ ಎಷ್ಟೋ ಮಂದಿ, ಮೀಸೆ ಚಿಗುರುತ್ತಿದ್ದಂತೆ ಕೋಡು ಬಂದವರ ಹಾಗೆ ಮೆರೆದಾಡುತ್ತಾರೆ. ಅದೇ ಮೂರು ಶತಮಾನಗಳನ್ನು ಕಂಡ ವ್ಯಕ್ತಿ ಸರಳ ಜೀವನವನ್ನು ಸಾಗಿಸುತ್ತಾರೆ. ಇದಕ್ಕೆ ಜೀವಂತ ಸಾಕ್ಷಿ, 19,20 ಮತ್ತು 21ನೇ ಶತಮಾನಗಳ ಕೊಂಡಿ ಎನಿಸಿರುವ, ಪ್ರಪಂಚದ ಹಿರಿಯಜ್ಜ ಎಂದು ಕರೆಸಿಕೊಳ್ಳುತ್ತಿರುವ ಕನ್ನಡಿಗ, ಸ್ವಾತಂತ್ರ್ಯ ಹೋರಾಟಗಾರ, ಗಾಂಧೀಜಿಯವರ ಆಪ್ತ, ನಾಲ್ಕು ವೇದಗಳ ಪಂಡಿತ, ಶತಾಯುಶಿ, 114ರ ಹರಯದ ಸುಧಾಕರ ಚತುವರ್ೇದಿ. ಎಲೆ ಮರೆಯ ಕಾಯಿಯಂತಿರುವ, ವೇದ ವಾಚಸ್ಪತಿಯ ಜೀವನ, ಅನುಭವದ ಮಾತುಗಳು, ಸ್ವಾರಸ್ಯಕರ ಸಂಗತಿಗಳ ಸಮ್ಮಿಶ್ರಣ ಈ ಲೇಖನ.
64ನೇ ಸ್ವಾತಂತ್ರ್ಯೋತ್ಸವದ ಸಂಭ್ರ್ರಮ ಹಾಗೂ ಗಾಂಧೀಜಿಯವರ 142ನೇ ಜನ್ಮದಿನದ ಈ ಸಂದರ್ಭದಲ್ಲಿ ಪರದೆಯ ಹಿಂದೆಯೇ ದುಡಿದು ಉಳಿದ ಹಿರಿಯ ಚೇತನಗಳನ್ನು ನೆನೆಯಲು ಸಕಾಲ. ಭಾರತದ ಇತಿಹಾಸದ ಜೀವಂತ ಉದಾಹರಣೆಯಾಗಿ ನಿಲ್ಲುವ ಅದೆಷ್ಟೊ ಜನ ನಮ್ಮೊಡನೆ ಇದ್ದರೂ ಗುರುತಿಸಲಾಗದ ಸ್ಥಿತಿ ಮತ್ತು ಅಯ್ಯೋ...ಎನ್ನುವ ಅಸಡ್ಡೆ. ಆದರೆ, ಅವರಲ್ಲಿನ ಜೀವನ ಸ್ಪೂತರ್ಿ, ಆಶಾವಾದ ನಮಗೆ ದಾರಿ ದೀಪ. ದೇಶ ಸುತ್ತಿ ತಿಳಿ, ಕೋಶ ಓದಿ ತಿಳಿ ಎಂಬ ತತ್ವವನ್ನು ತಮ್ಮೊಳಗೆ ಅಂತರ್ಗತವಾಗಿಸಿಕೊಂಡವರು 'ಗಾಂಧೀಜಿಯವರ ಪೋಸ್ಟ್ ಮನ್' ಎಂದೇ ಪ್ರಸಿದ್ಧರಾಗಿದ್ದ ಸುಧಾಕರ ಚತುವರ್ೇದಿಯವರ ಬದುಕು, ಹೋರಾಟ ಮತ್ತು ಅಲೆದಾಟಗಳ ಜೋಡಣೆಯಂತಿದೆ.
ಬಾಲ್ಯದಲ್ಲಿ....:
ಚಾಮರಾಜಪೇಟೆಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಇವರ ತುಂಟತನಕ್ಕೆ ಮಾಸ್ಟರ್ಗಳೂ ಹೆದರುತ್ತಿದ್ದರು. ಮಾಧವ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದ ಇವರಿಗೆ ಇಬ್ಬರು ಮುಸಲ್ಮಾನಿ ಸ್ನೇಹಿತರಿದ್ದರು, ಆ ಇಬ್ಬರೂ ಸುಧಾಕರರ ಅಪ್ಪಟ ಶಿಷ್ಯರಂತ್ತಿದ್ದರು. ಒಮ್ಮೆ ಇವರ ನಡುವೆ ಜಾತಿ, ಧರ್ಮಗಳ ಪ್ರಶ್ನೆ ಬಂದಾಗ, ಸುಧಾಕರ್ ಆ ಸ್ನೇಹಿತರಿಗೆ ಕಚ್ಚೆ ಉಡಿಸಿ, ಜನಿವಾರ ಹಾಕಿಸಿ ಮನೆಗೆ ಕರೆಸಿ, ತನ್ನ ತಂದೆಯೊಂದಿಗೆ ಕೂರಿಸಿ ಊಟ ಬಡಿಸಿದರು. ಆದರೆ, ಎಲೆಗೆ ಉಪ್ಪಿನಕಾಯಿ ಬೀಳುತ್ತಿದ್ದಂತೆ ಅವರಲ್ಲೊಬ್ಬ ಬೆರಳಿಂದ ಅದನ್ನು ಎತ್ತಿ ನಾಲಿಗೆ ಮೇಲಿಟ್ಟು ಚಪ್ಪರಿದ. ಇದರಿಂದ ಅನುಮಾನಗೊಂಡ ತಂದೆ ಟಿ.ವಿ.ಕೃಷ್ಣರಾವ್ ಎಲ್ಲರನ್ನು ಓಡಿಸಿ ಮನೆಗೆಲ್ಲ ಗಂಜಲ ಸಿಂಪಡಿಸಿ ಶುದ್ಧಿ ಮಾಡಿದ್ದರು. ಇದಾದ ನಂತರ ಇನ್ನು ಹೆಚ್ಚು ಧೈರ್ಯದಿಂದ 'ಶಂಕರ ಮಠ'ಕ್ಕೆ ಗೆಳೆಯರನ್ನು ಕರೆದುಕೊಂಡು ಹೋಗಿ ಭೋಜನ ಮಾಡಿಸಿದ್ದಾರೆ. 1897ರ ಏಪ್ರಿಲ್ 20ರಂದು ಜನಿಸಿದ ಸುಧಾಕರ್ ತನ್ನ ಎಂಟನೆ ವಯಸ್ಸಿಗಾಗಲೆ ಅಕ್ಕ ಪದ್ಮಾವತಿ ಬಾಯಿಯವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡಿದ್ದರು. ಆ ಕಾರಣ ಕನ್ನಡ ದೇಶದಿಂದ 30ಕ್ಕೂ ಹೆಚ್ಚು ವರ್ಷ ದೂರ ಉಳಿದರೂ ಕನ್ನಡವನ್ನು ಮರೆಯಲಿಲ್ಲ. ದಯಾನಂದ ಸರಸ್ವತಿಯವರ ಜೀವನ ಚರಿತ್ರೆಯನ್ನು ಓದುತ್ತಾ ಬೆಳೆದ ಹುಡುಗ ಸುಧಾಕರನಿಗೆ ತಾಯಿ ಪುಟ್ಟಮ್ಮ ಸದಾ ಸಹಕಾರಿಯಾಗಿದ್ದರು.
ವಿದ್ಯಾಭ್ಯಾಸಕ್ಕಾಗಿ...:
ತಂದೆಯವರ ವಿರೋಧದ ನಡುವೆಯೂ ಹಟ ಹಿಡಿದು, ಎಂಟನೆ ವಯಸ್ಸಿನಲ್ಲಿ ಬೆಂಗಳೂರು ಬಿಟ್ಟು ಸ್ವಾಮಿ ದಯಾನಂದರ ಶಿಷ್ಯ ಶ್ರದ್ಧಾನಂದರು ಹರಿದ್ವಾರದಲ್ಲಿ ಸ್ಥಾಪಿಸಿದ್ದ ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯದಲ್ಲಿ ಸತತ ಆರು ವರ್ಷಗಳ ಕಾಲ ಅಭ್ಯಾಸ ಮಾಡಿ 'ವೇದಾಲಂಕಾರ' ಪದವಿಯನ್ನು ಪಡೆದರು. ಆನಂತರ ಉತ್ತರ ಭಾರತದಲ್ಲಿ ಸಂಚರಿಸುತ್ತ ತಾವೇ ಸ್ವಂತವಾಗಿ ವೇದಾಭ್ಯಾಸ ಮಾಡಿ ಎರಡೇ ವರ್ಷದಲ್ಲಿ 'ವೇದ ವಾಚಸ್ಪತಿ'ಯಾದರು. ಹೆಚ್ಚು ತಿಳಿಯುತ್ತಿದ್ದಂತೆ ಪದವಿಗಳ ಬಗೆಗೆ ವ್ಯಾಮೋಹ ಹೋಗಿ ಆಳವಾದ ಅಧ್ಯಯನದಲ್ಲಿ ನಿರತರಾಗಿ ನಾಲ್ಕು ವೇದಗಳಲ್ಲೂ ಪರಿಣತಿ ಹೊಂದಿ 'ಚತುವರ್ೇದಿ' ಎಂದು ಕರೆಸಿಕೊಂಡರು.
ಬದುಕು ಕಲಿಸಿದ ಯವೌನ...:
ವಿದ್ಯೆ ಕಲಿತು ಬೆಂಗಳೂರಿಗೆ ವಾಪಸ್ಸಾದ ಸಂದರ್ಭದಲ್ಲಿ ಮಠದಲ್ಲಿ ಗುರುಗಳ ಭೇಟಿಗೆಂದು ಹೋಗಿದ್ದಾಗ, ಭಕ್ತೆಯೊಬ್ಬಳು ಗುರುಗಳ ಕಾಲಿಗೆ ನಮಸ್ಕರಿಸುವಷ್ಟರಲ್ಲಿ, ಆ ಗುರು 'ಥೂ...! ಮುಂಡೆ ಅನಿಷ್ಟ ಹೋಗು ಆಕಡೆ...' ಎಂದು ಗದರುತ್ತಿದ್ದದ್ದು ಬಿಸಿ ರಕ್ತದ ಸುಧಾಕರರ ಮನಸ್ಸಿನಲ್ಲಿ ದಂಗೆ ಎಬ್ಬಿಸಿತು. ವಿಧವೆಯರು ಮಾತ್ರ ಏಕೆ ಧರಿದ್ರರು..? ಗಂಡಸರಿಗೆ ಎಷ್ಟು ಮದುವೆಯನ್ನು ಬೇಕಾದರು ಮಾಡಿಕೊಳ್ಳಬಹುದು, ಹೆಂಸರಿಗೆ ಈ ಹಕ್ಕುಯಾಕಿಲ್ಲ..? ಎಂಬ ಪ್ರಶ್ನೆಗಳನ್ನು ಗುರುಗಳ ಮೇಲೆಸೆದರು. ಇದರಿಂದ ಕೋಪಗೊಂಡ ಗುರುಗಳು, ನಿಷ್ಠಾವಂತ ಬ್ರಾಹ್ಮಣನ ಮನೆಯಲ್ಲಿ ಇಂತಹ ಅಧಿಕ ಪ್ರಸಂಗಿ ಎಂದು, ಒಂದು ಸಭೆಕರೆಸಿ ಬಹಿಷ್ಕಾರ ಹಾಕಿಸಲಾಯಿತು. ಇದರಿಂದ ಎದೆ ಗುಂದದ ಸುಧಾಕರ್ ಗುರುಗಳಿಗೆ, ನಾನು ಯಾವತ್ತೋ ನಿಮ್ಮನ್ನು ನನ್ನೆದೆಯಿಂದ ಬಹಿಷ್ಕರಿಸಿದ್ದೇನೆಂದು ಹೇಳಿ ಹೊರಟರು. ಈ ಘಟನೆಯ ನಂತರ ಪುಟ್ಪಾತ್ಗಳಲ್ಲಿ, ಬೀದಿ-ಬೀದಿಗಳಲ್ಲಿ ಅಲೆದು ಜೀವನ ಸಾಗಿಸಬೇಕಾಗಿ ಬಂತು. ಅವರ ಸಂಬಂಧಿಗಳು ಮನೆಗೆ ಸೇರಿಸಲು ಹೆದರಿದರೂ ಅದನ್ನು ಲೆಕ್ಕಿಸದೆ ಹಸಿವಿನಿಂದ ತಪ್ಪಿಸಿಕೊಳ್ಳಲು ತಾವೆ ಬಡಿಸಿಕೊಂಡು ಊಟಮಾಡಿದರು. ಇವುಗಳು ಅವರ ಅಲೆದಾಟದ ಬದುಕಿಗೆ ಪುಷ್ಠಿಯನ್ನೇ ನೀಡಿತು. ಕ್ರಾಂತಿಕಾರಿಯಾದರು, ಯಾರಿಗೂ ಬಗ್ಗದೆ ನಡೆದರು. ನಂತರ ಮತ್ತೆ ಉತ್ತರ ಭಾರತದ ಕಡೆಗೆ ಮರಳಿ ಜೀವನೋಪಾಯಕ್ಕಾಗಿ ಭಾಷಣಗಳನ್ನು ಮಾಡ ತೊಡಗಿದರು. 100 ರೂಪಾಯಿಂದ ಪ್ರಾರಂಭವಾಗಿ ಎರಡು ಸಾವಿರವನ್ನು ಮುಟ್ಟಿತು, ಅಲ್ಲಿಂದ ಆಥರ್ಿಕ ಸಮಸ್ಯೆ ಅವರನ್ನು ಕಾಡಲಿಲ್ಲ.
ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲವರಾಗಿದ್ದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕಲ್ಕತ್ತಾಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದಂತೆ ಅನೇಕ ಶಿಷ್ಯರು ಹುಟ್ಟಿಕೊಂಡರು. ಅದರಲ್ಲಿ ಒಬ್ಬಳು ಇವರನ್ನು ಮನಸಾರೆ ಪ್ರೀತಿಸಿದಳು ಹಾಗೂ ಆಕೆಯ ತಂದೆ ಸುಧಾಕರರ ಬಳಿ ತನ್ನ ಮಗಳನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಸುಧಾಕರರು ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲವೆಂದು ಪ್ರತಿಜ್ಞೆ ತೊಟ್ಟಿದ್ದರು. ದುರಾದೃಷ್ಟವಷಾತ್ ಸ್ವರಾಜ್ಯ ಬರುವುದು ತಡವಾಯಿತು. ಆ ಹೊತ್ತಿಗಾಗಲೆ ಇವರ ವಯಸ್ಸು 50ನ್ನು ದಾಟಿತ್ತು. ಆದರೆ, ಅದಕ್ಕೂ ಮೊದಲು 1935ರಲ್ಲಿ ಬಲಿಚಿಸ್ತಾನದಲ್ಲಿ ಭೂಕಂಪವಾದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಪ್ರೀತಿಯ ಶಿಷ್ಯೆ ಭೂತಾಯ ಮಡಿಲನ್ನು ಸೇರಿದ್ದಳು. ಅಲ್ಲಿಂದಲೇ ಸುಧಾಕರರು ಬ್ರಹ್ಮಚರ್ಯ ಜೀವನದಿಂದ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಈಗ, ಅವರನ್ನು ಬಹಿಷ್ಕರಿಸಿದ್ದ ಮಠದಿಂದ ಹಿಡಿದು ಅನೇಕ ಪಂಡಿತರು ಇವರಲ್ಲಿಗೆ ಬಂದು ವೇದಗಳ, ಮಂತ್ರಗಳ ಅರ್ಥವನ್ನು ತಿಳಿಕೊಂಡು ಹೋಗುತ್ತಾರೆ.
ಗಾಂಧೀಜಿ ಭೇಟಿ...:
ಸುಧಾಕರರು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ 1915ರಲ್ಲಿ ಗಾಂಧೀಜಿಯವರನ್ನು ಭೇಟಿಯಾಗಿದ್ದು. ಕನರ್ಾಟಕದವನಾದರೂ ಹಿಂದಿಯನ್ನು ಸುಲಲಿತವಾಗಿ ಮಾತನಾಡುವುದನ್ನು ಕಂಡ ಗಾಂಧೀಜಿ ಇವರಿಗೆ ಪ್ರಭಾವಿತರಾದರು. ಅಂದಿನಿಂದ ಜೊತೆಗಿನ ಸ್ನೇಹ ಇಮ್ಮಡಿಯಾಗುತ್ತಾ ಸಾಗಿತು. ಕನ್ನಡದಲ್ಲಿ ಸಹಿ ಮಾಡಲು ಹಾಗು ಮಾತು ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧೀಜಿಗೆ ಕಲಿಸಿದ ಹೆಗ್ಗಳಿಕೆ ಇವರದು.
ಜಲಿಯನ್ವಾಲಾಬಾಗ್ ಹತ್ಯಾಕಾಂಡ....:
ನಾಲ್ಕೂ ಕಡೆ ಎತ್ತರದ ಗೋಡೆಗಳು, ಸುತ್ತುವರಿದಿರುವ ಮನೆಗಳು, ಹೊರಗೆಹೋಗಲು ಇರುವುದು ಒಂದೇ ಒಂದು ಸಣ್ಣ ಗೇಟು. ಅದರಲ್ಲಿ ಇಬ್ಬರು ಮಾತ್ರ ನುಸುಳಿ ಹೋಗಬಹುದಿತ್ತು. ಶ್ರದ್ಧಾನಂದರು ಸುಧಾಕರರಿಗೆ, 'ಇಂದು ಒಂದು ದೊಡ್ಡ ಸಭೆ ನಡೆಯುತ್ತಿದೆ. ಅಲ್ಲಿಗೆ ಹೋಗಿ ಅವಿತು ಕುಳಿತು ಏನಾಯಿತು ಎಂಬ ವರದಿಯನ್ನು ನನಗೆ ಒಪ್ಪಿಸು ಮತ್ತು ಅಲ್ಲಿ ಗಲಭೆಯಾಗುವ ಸಂಭವ ಇರುವುದರಿಂದ ನೀನು ಮುನ್ನುಗ್ಗ ಬೇಡ ಪ್ರಾಣ ಉಳಿಸಿಕೊಂಡು ಬಾ..' ಎಂದು ಹೇಳಿ ಕಳಿಸಿದ್ದರು. ಅಂದು 1919ರ ಏಪ್ರಿಲ್ 13. ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು, ಅಲ್ಲಿಗೆ ಪೋಲೀಸ್ ತುಕಡಿಯೊಂದಿಗೆ ಬಂದ ಜನರಲ್ 'ರೆಜಿನಾಲ್ಡ್ ಡೈಯರ್', ಸಭಿಕರಿಗೆ ಐದು ನಿಮಿಷದ ಗಡುವು ನೀಡಿ ಚದುರುವಂತೆ ಆಜ್ಞಾಪಿಸಿದ. ಆದರೆ, ಇನ್ನೂ ಮೂರು ನಿಮಿಷಗಳೂ ಆಗಿರಲಿಲ್ಲ ಅದಾಗಲೇ ಪೈಯರಿಂಗ್ ಶುರು ಮಾಡಿಯೇ ಬಿಟ್ಟಿದ್ದರು. ಜನರು ಗುಂಡಿಗೆ ತುಪ ತುಪನೆ ಉದುರಿಹೋದರು, ಪ್ರಾಣ ಉಳಿಸಿಕೊಳ್ಳಲು ಕೆಲವರು ಭಾವಿಗೆ ಹಾರಿ ಸತ್ತರು, ಸಂದಿಯಲ್ಲಿ ತೂರಲಾರದೆ ಕಾಲ್ತುಳಿತದಲ್ಲಿ ಕೈಕಾಲು ಮುರಿದುಕಂಡವರು ಅದೆಷ್ಟೋ ಜನ. ಕಣ್ಣ ಮುಂದೆಯೇ ರಕ್ತಪಾತ ನಡೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಸರಕಾರದ ಪ್ರಕಾರ ಸತ್ತವರು 670 ಜನರು ಮಾತ್ರ. ಆದರೆ, ಸುಧಾಕರರ ಕೈಯಲ್ಲೆ ಅಂತಿಮ ಕಾರ್ಯವನ್ನು ಮಾಡಿಸಿಕೊಂಡ ಹೆಣಗಳ ಸಂಖ್ಯೆ ಸಾವಿರವನ್ನು ದಾಟುತ್ತದೆ. ಹೆಣಗಳ ರಾಶಿಯ ನಡುವೆ ನಿಂತಿದ್ದ 16ವರ್ಷದ ಹುಡುಗಿ ವಾರದ ಹಿಂದೆಯಷ್ಟೆ ಮದುವೆಯಾದ ಗಂಡನನ್ನು ಕಳೆದುಕೊಂಡು ರೋಧಿಸುತ್ತಿದ್ದಾಗ ಅಣ್ಣನ ಸ್ಥಾನದಲ್ಲಿ ನಿಂತು ಸಮಾಧಾನ ಪಡಿಸಲು ಮಾತ್ರವೆ ಶಕ್ತವಾದರು ಸುಧಾಕರ್. ಇವರ ಪ್ರಕಾರ, ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಪೋಲೀಸರೆಲ್ಲ ಭಾರತೀಯರೇ. ಅದನ್ನು ಹೇಳಿಕೊಳ್ಳಲು ನಾಚಿಕೆಯಾದರೂ ಅದೇ ಸತ್ಯ. ಬ್ರಿಟೀಷರ ಉಪ್ಪಿನ ಋಣ ಇದೆಯೆಂದು ಇಂಥ ಘೋರತನ ಪ್ರದಶರ್ಿಸಿದವರದು ಸ್ವಾಮಿನಿಷ್ಠೆಯೋ ಅಥವಾ ಬಂಡತನವೋ...?
ಮೋತೀಲಾಲ್ ನೆಹರೂ ಅಧ್ಯಕ್ಷರಾಗಿದ್ದ 'ನ್ಯಾಷನಲ್ ಕಾಂಗ್ರೆಸ್'ನಿಂದ ಹಂಟರ್ ಅನ್ನೊ ಆಂಗ್ಲನನ್ನು ನೇಮಿಸಿ, 'ಹಂಟರ್ ಕಮಿಟಿ' ರಚಿಸಿದರು. ಅಲ್ಲಿನ ವಿಚಾರಣೆಗಾಗಿ ಗಾಂಧೀಜಿಯನ್ನು ಕರೆಸಿ ಇಲ್ಲಿಗೆ ಬಂದಿದುರ ಕಾರಣಗಳನ್ನು ಪ್ರಶ್ನಿಸಿದ್ದರು. ಸುಧಾಕರರು ಹೇಳುವಂತೆ, ಆ ಹೊತ್ತಿಗೆ ಪಂಜಾಬಿಗೆ ಗಾಂಧೀಜಿ ಬರದೇ ಹೋಗಿದ್ದರೆ, ಒಬ್ಬನೇ ಒಬ್ಬ ಆಂಗ್ಲೋ-ಇಂಡಿಯನ್ ಕೂಡಾ ಉಳಿಯುತ್ತಿರಲಿಲ್ಲ. ಆ ಮಟ್ಟಿಗೆ ಸಿಡಿದೆದ್ದಿದ್ದರು ಪಂಜಾಬಿನ ಜನ.
ಪೋಸ್ಟಮನ್ ಟು ಗಾಂಧಿ...:
ಮಹಾತ್ಮ ಗಾಂಧಿಯವರು ಯಾವುದೇ ಪತ್ರವನ್ನು ಬರೆಯುವಾಗಲೂ ಸುಧಾಕರರನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ವೈಸ್ರಾಯ್ಗಳ ನಡುವೆ ನಡೆಸುವ ಪತ್ರ ವ್ಯವಹಾರವನ್ನು ಇವರೇ ನೋಡಿಕೊಳ್ಳುತ್ತಿದ್ದರು. ಹೀಗೆ ಅನೇಕ ವೈಸ್ರಾಯ್ಗಳ ಹತ್ತಿರದ ಪರಿಚಯ. ಒಮ್ಮೆ ಇವರ ಗುರು ಶ್ರದ್ಧಾನಂದರ ಆಶ್ರಮದಲ್ಲಿ ಮದ್ದು-ಗುಂಡು ತಯಾರಿಸುತ್ತಿದ್ದಾರೆಂದು ಯಾರೋ ವೈಸ್ರಾಯ್ ಲಾಡರ್್ ಶೆಮ್ಸ್ಪಡರ್್ನ ಕಿವಿ ಚುಚ್ಚಿದ್ದರು. ಆತನು ಯಜ್ಙ ಶಾಲೆಯನ್ನು ತಪಾಸಣೆ ಮಾಡಲು ಬಂದಾಗ, ಶ್ರದ್ಧಾನಂದರು 'ಇಲ್ಲಿ ತಯಾರಾಗುವ ಒಬ್ಬೊಬ್ಬನು ನಿಮ್ಮ ಸರಕಾರವನ್ನು ಉರುಳಿಸುವ ಹ್ಯೂಮನ್ ಬಾಂಬ್' ಎಂದು ಹೇಳಿಕಳಿಸಿದ್ದರು. ಸುಧಾಕರ್, ಗಾಂಧೀಜಿಯವರ ಹಿಂದಿ ಮತ್ತು ಸಂಸ್ಕೃತದ ಪ್ರತಿಗಳನ್ನು ಇಂಗ್ಲೀಷಿಗೆ ತಜರ್ುಮೆ ಮಾಡುತಿದ್ದರು. ಹಾಗೂ ಕನ್ನಡದಲ್ಲಿ ಅಚ್ಚಾಗುತ್ತಿದ್ದ 'ಹರಿಜನ' ಪತ್ರಿಕೆಗೆ ಸುಧಾಕರರ ತಮ್ಮ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ವಿಜ್ಞಾನಿಗಳೊಂದಿಗೆ....:
ಟಾಟಾ ಇನ್ಸ್ಟಿಟ್ಯೂಟಿನ ನಿದರ್ೇಶಕರಾಗಿದ್ದ ಸರ್ ಸಿ.ವಿ.ರಾಮನ್ 1935ರ ಸಮಯದಲ್ಲಿ ಶೃಂಗೇರಿ ಗುರುಕುಲದ ಪಕ್ಕದಲ್ಲಿ ಜಮೀನು ತೆಗೆದುಕೊಂಡು ಆಗಾಗ ನೋಡಲು ಬರುತ್ತಿದ್ದಾಗ, ಒಮ್ಮೆ ಸುಧಾಕರರು 'ದೇವರನ್ನು ನೀವು ನಂಬೋದಿಲ್ಲ ಅನ್ನೋದು ನಿಜವಾ..?' ಎಂದು ಕೇಳಿದ್ದರು. ಅದಕ್ಕೆ ರಾಮನ್ರವರು, 'ಹಾಗೇನಿಲ್ಲ....ಇಲ್ಲಿನದು ನನ್ನ ಡಿಪಾಟರ್್ಮೆಂಟ್ ಮತ್ತು ಬೇರೆ ಲೋಕದ್ದು ನನ್ನ ಹೆಂಡತಿ ಲೋಕ ಸುಂದರಿಯದು' ಎಂದು ಹಾಸ್ಯಚಟಾಕಿಯನ್ನು ಹಾರಿಸಿದ್ದರು. ಆನಂತರದಲ್ಲಿ ರಾಮನ್ ಭೌತಶಾಸ್ತ್ರದಲ್ಲಿ ಪೂರ್ಣವಾಗಿ ಮುಳುಗುತ್ತಿದ್ದಂತೆ, ಈ ಎಲ್ಲಾ ಕ್ರಿಯೆಯ ಹಿಂದೆ ಯಾವುದೋ ಒಂದು ಶಕ್ತಿಯಿದೆಯೆಂದು ಅನಿಸುತ್ತಿದೆ. ಅದೇ ದೇವರಾ..? ಎಂದು ಸುಧಾಕರರಲ್ಲಿ ಹೇಳಿಕೊಂಡಿದ್ದರು.
ಬೆಂಗಳೂರಿನ ಟಿಪ್ಪುಸುಲ್ತಾನ್ ಅರಮನೆಯಲ್ಲಿ ರಸಾಯನಶಾಸ್ತ್ರ ವಿಜ್ಞಾನಿ ಪಿ.ಸಿ.ರೇ ಅವರೊಂದಿಗೆ ಸುಧಾಕರ್ರವರು ಮಾತನಾಡುತ್ತ, ಇಷ್ಟು ದೊಡ್ಡ ವ್ಯಕ್ತಿಯಾಗಿ ಬರೀ ತುಂಡು ಪಂಚೆ, ಕಾದಿ ಜುಬ್ಬ...ಎಂದಾಗ ರೇ ಅವರು 'ನನ್ನ ಬುದ್ಧಿ-ಶಕ್ತಿಯೆಲ್ಲ ವಿಜ್ಞಾನಕ್ಕೆ ಮೀಸಲಾಗಿದೆ, ಅಂತಹದರಲ್ಲಿ ಈ ಬಟ್ಟೆಯಲ್ಲಿ ಏನಿದೆ ಬಿಡು' ಎಂದಿದ್ದರು. 'ಬಾಬಾ ಜಹಾ ಬೈಟೆ, ವಹಾ ಗದ್ಧಿ ಹೇ' ಆದ್ದರಿಂದ, ಹೆಚ್ಚು ಹೆಚ್ಚು ವಿದ್ಯಾವಂತನಾದಷ್ಟು, ಅಷ್ಟೇ ವಿನಯವಂತನಾಗಬೇಕು ಅನ್ನುವುದು ಸುಧಾಕರ ಚತುವರ್ೇದಿಯವರ ಅನುಭವ.
ವೇದಗಳು.....:
ಜ್ಞಾನವನ್ನು ನೀಡುವ 'ಋಗ್ವೇದ', ಅದಕ್ಕೆ ಪೂರಕವಾದ 'ಅತರ್ವವೇದ', ಮಾಡಬೇಕಾದ ಕೆಲಸಗಳನ್ನು ಸೂಚಿಸೋ 'ಯಜುರ್ವೇದ' ಮತ್ತು ಉಪಾಸನೆಯನ್ನು ತಿಳಿಸೊ 'ಸಾಮವೇದ'. ಈ ನಾಲ್ಕೂ ವೇದಗಳಲ್ಲೂ ಕರಗತವಾಗಿರುವ ಸುಧಾಕರ ಚತುವರ್ೇದಿಯವರು ವೇದಗಳಲ್ಲಿನ ಅಕ್ಷರಕ್ಷಕ್ಕೂ ಅರ್ಥವನ್ನು ನೀಡುವ ಸಾಮಥ್ರ್ಯ ಹೊಂದಿದ್ದಾರೆ. ಸದ್ಯ ಇವರೆದುರಿಗೆ ತರ್ಕ ಮಾಡುವವರು ಯಾರೂ ಇಲ್ಲ. ವೇದಗಳು ಪರಲೋಕದ ಚಿಂತೆ ಮಾತ್ರ ಎನ್ನುವುದು ತಪ್ಪು ತಿಳುವಳಿಕೆ ಹಾಗೂ ವೇದಗಳಲ್ಲಿ ಎಲ್ಲಾ ಸಂಶೋಧನೆಗಳ ಬಗೆಗೂ ಪ್ರಸ್ತಾಪಗಳಿವೆ. ಆದರೆ ನಮ್ಮವರು ಅದನ್ನೆಲ್ಲ ಮುಚ್ಚಿಹಾಕಿ, ಅವಿತುಕೊಂಡು-ಇದು ದೇವರ ಕೆಲಸ, ನಮ್ಮಿಂದಾಗದು ಎಂದು ಸುಮ್ಮನಾಗಿದ್ದರಿಂದಲೇ ಇಂದು ನಾವು ಹಿಂದೆ ಉಳಿಯಬೇಕಾಗಿದೆ ಎಂಬುದು ಸುಧಾಕರ ಚತುವರ್ೇದಿಯವರ ಅಭಿಪ್ರಾಯ. ಶ್ರದ್ಧಾನಂದರ ಆಜ್ಞೆಯಂತೆ, ನಾಲ್ಕು ವೇದಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಸುಮಾರು 25 ಪಂಡಿತರಿಗೆ ಆ ಕೆಲಸವನ್ನು ಒಪ್ಪಿಸಲಾಗಿತ್ತು. ಮೂರು ವೇದಗಳ ಕೆಲಸ ಮುಗಿದಿದ್ದು, ಋಗ್ವೇದದ ಕೆಲಸ ಇನ್ನೂ ಆಗುತ್ತಿದೆ. ಇವರ ಸುಮಾರು 40 ಪುಸ್ತಕಗಳು ನಾಲ್ಕು ಭಾಷೆಗಳಲ್ಲಿ ಪ್ರಕಟವಾಗಿವೆ.
ಸ್ವರಾಜ್ಯ ಹಾಗೂ ಮಹಾಯುದ್ಧ....:
ಮಹಾಯುದ್ಧಗಳ ಸಮಯದಲ್ಲಿ ಭಾರತ ದೇಶವೂ ಕಠಿಣ ಪರಿಸ್ಥಿಯನ್ನು ಎದುರಿಸುತ್ತಿತ್ತು. ಎಷ್ಟೋ ಜನ ಸೈನಿಕರು ಯುದ್ಧಕ್ಕೆ ಹೋದವರು ಮತ್ತೆ ಹಿಂದಿರುಗಲೇ ಇಲ್ಲ. ಆಹಾರ ಸಾಮಾಗ್ರಿಗಳೆಲ್ಲ ಯುದ್ಧದ ಸ್ಥಳಕ್ಕೆ ಸಾಗಣೆಯಾಗುತ್ತಿದ್ದರಿಂದ, ಇಲ್ಲಿ ಅಕ್ಕಿಗೆ ಬರಬಂದೊದಗಿತ್ತು, ಆಗ ಮೆಕ್ಕೆ ಜೋಳದ ರೊಟ್ಟಿಯೇ ಗತಿಯಾಗಿತ್ತು. ದೇಶಕ್ಕಾಗಿ ಪ್ರಾಣತ್ಯಾಗ ಮಾಡೋ ಸೈನಿಕರ ತಂದೆ-ತಾಯಿಗಳು ಎಷ್ಟು ಧೈರ್ಯವಂತರು ...ಅವರ ದೇಶಭಕ್ತಿಗೆ ನಾವು ಸಲಾಮು ಮಾಡಬೇಕು ಎಂದು ನೆನೆಸಿಕೊಳ್ಳುವ ಚತುವರ್ೇದಿಯವರು, ಆ ಸಂದರ್ಭದಲ್ಲೆ ಮುದ್ರಣವಾಗಿದ್ದ ತಮ್ಮ ಪದ್ಯಗಳನ್ನು ಈಜಿಪ್ಟ್ನಲ್ಲಿದ್ದ ಕನ್ನಡದ ಸೈನಿಕರಿಗೆ 500 ಪ್ರತಿಗಳನ್ನು ಮುಟ್ಟಿಸಿದರು.
ಸ್ವಾತಂತ್ರ್ಯದ ಸಂದರ್ಭದಲ್ಲಿ ಸುಧಾಕರ ಚತುವರ್ೇದಿಯವರು ಗಾಂಧೀಜಿಯವರ ಜೊತೆ ಬಂಗಾಳದಲ್ಲಿದ್ದರು, ಅದು ಇನ್ನೇನು ಈಸ್ಟ್ ಪಾಕಿಸ್ತಾನ ಎಂದು ಕರೆಸಿಕೊಳ್ಳುವುದರಲ್ಲಿತ್ತು. ಹಿಂದು-ಮುಸಲ್ಮಾನರ ಗಲಭೆಗಳು ಹೆಚ್ಚು ನಡೆಯುತ್ತಿದ್ದ ಜಾಗ. ಅಷ್ಟೇ ಅಲ್ಲದೆ, ಹಿಮಾಲಯ ಪರ್ವತದ ಮೇಲಿನಿಂದ ಮಹಿಳೆಯರನ್ನು ತಳ್ಳುತ್ತಿದ್ದರು. ಈ ಕೋಮುವಾದವನ್ನು ನಿಲ್ಲಿಸಲು ಶ್ರೀರಾಮಪುರದ ಒಂದು ದೇವಸ್ಥಾನದಲ್ಲಿ ಗಾಂಧೀಜಿ, ಕೃಪಲಾನಿ ಹೆಂಡತಿ ಸುಚಿತ, ಕಸ್ತೂರ ಬಾ ಅವರ ತಮ್ಮ, ಗಾಂಧೀಜಿಯ ಮೊಮ್ಮಗಳು ಮನ್ನು ಬಾಯಿ ಹಾಗೂ ಒಬ್ಬಳು ಬೆಂಗಾಲಿ ಹುಡುಗಿ ಗಾಂಧೀಜಿಯವರ ರಕ್ಷಣೆಗೆಂದು ಅವರ ಜೊತೆಯಲ್ಲಿದ್ದರು. ಆ ಹೊತ್ತಿಗಾಗಲೇ ಸುಧಾಕರರು ತಮ್ಮ ಭಾಷಣದ ಪ್ರಭಾವದಿಂದ ಸಾವಿರಾರು ಮುಸಲ್ಮಾನರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿದ್ದು ಹಲವರ ಕಣ್ಣು ಕುಕ್ಕಿತ್ತು. ಅದೇ ಸಮಯದಲ್ಲಿ ಒಬ್ಬ ಮುಸಲ್ಮಾನಿ ವೃದ್ಧ ಇವರನ್ನು ಆರು ತಿಂಗಳ ಕಾಲ ಜೋಪಾನ ಮಾಡಿದ್ದ. ಆನಂತರ ಸುಧಾಕರರು ದೆಹಲಿಗೆ ಬರುವಷ್ಟರಲ್ಲಿ ಆ ಮುದುಕನನ್ನು ಮುಸಲ್ಮಾನರೆ ಕೊಂದುಹಾಕಿದ್ದರು.
ಹೋರಾಟ....ಜೈಲೂಟ...:
ರಾವಿ ನದಿಯ ತೀರದ ಲಾಹೋರ್ನಲ್ಲಿ ಮಿಲಿಟರಿ ಆಡಳಿತ, ಜನರು ಅವರ ಎದುರಿಗೆ ನಡೆದು ಹೋಗುವ ಹಾಗಿರಲಿಲ್ಲ. ತೆವುಳುತ್ತ ಸಾಗಬೇಕಿತ್ತು. ಈ ಹಿಂಸೆಯಲ್ಲು ನೂರಾರು ಜನರು ಪ್ರಾಣಕಳೆದು ಕೊಂಡಿದ್ದನ್ನು ಮರೆಯಲಾಗದು ಎನ್ನುವ ಚತುವರ್ೇದಿಯವರು, ತಮ್ಮ ಹೋರಾಟದಲ್ಲಿ ಕರಾಚಿಯಿಂದ ಹಿಡಿದು ಬೆಂಗಳೂರಿನ ಸೆಂಟ್ರಲ್ ಜೈಲಿನವರೆಗೆ ಎಲ್ಲಾ ಸೆರಮನೆಗಳ ಊಟದ ರುಚಿಯನ್ನು ನೋಡಿದ್ದಾರೆ. ಎರಡು ತಿಂಗಳಿಂದ ಹಿಡಿದು ಎರಡು ವರ್ಷದವರೆಗೆ ಸುಮಾರು ಹದಿಮೂರು ಬಾರಿ ಸೆರಮನೆ ವಾಸವನ್ನು ಅನುಭವಿಸಿದ್ದಾರೆ. ಆಗಿನ ಜೈಲುವಾಸ ಬಹಳ ಕಠಿಣವಾಗಿರುತ್ತಿತ್ತು ಮತ್ತು ಬೇಕಾಗಿಯೆ ಸಾರಿನ ಜೊತೆಗೆ ಮರಳು, ಅನ್ನದಲ್ಲಿ ಕಲ್ಲನ್ನು ಹಾಕಿಕೊಡುತ್ತಿದ್ದರು. ಅದನ್ನೆ ತಿಂದು ಜೀಣರ್ಿಸಿಕೊಳ್ಳಬೇಕಾಗಿತ್ತು ಹಾಗೂ ಹತ್ತು ಜನರು ಇರುವ ಕಡೆ 40-50 ಜನರನ್ನು ತೂರಿಸುತ್ತಿದ್ದರು, ಎಂದು ಆ ಸ್ಥಿತಿಯನ್ನು ವಿವರಿಸುತ್ತಾ,,, ರಾಜಕೀಯ ಕೈದಿಗಳಿಗೆಂದು ಬೇರೆ ಜಾಗಯಿರಲಿಲ್ಲ, ಪೋಲಿ-ಪುಂಡರ ಜೊತೆಗೇ ನರಕದ ವಾಸ. ಜೈಲಿನಲ್ಲಿ ಎರಡು ರೊಟ್ಟಿ ಸಿಗುತ್ತಿತ್ತು, ಆದರೆ ರೌಡಿಗಳು ದೇಹದ ಆಧಾರದ ಮೇಲೆ 'ನೀನು ಸಣ್ಣಗಿದ್ದೀಯ ನಿನಗೆ ಅರ್ಧ ರೊಟ್ಟಿ ಸಾಕು' ಎಂದು ಕಬಳಿಸುತ್ತಿದ್ದರು. ಆಗ ಒಳಗಿನವರ ಕಷ್ಟ ಹೊರಗಿನ ಜನಕ್ಕೆ ತಿಳಿಯುತ್ತಿರಲಿಲ್ಲ. ಆದರೆ ಈಗಿನ ಜೈಲುಗಳು ಕಾಲ ಕಳೆಯಲು ಮಜವಾಗಿದೆ.
ಆರ್ಯಸಮಾಜ...:
ವಿದ್ಯಾಭ್ಯಾಸ ಪೂರ್ಣವಾದ ಬಳಿಕ ಆರ್ಯಸಮಾಜದ ಸದಸ್ಯತ್ವಕ್ಕೆ ಸಹಿಮಾಡಿದ ಸುಧಾಕರ ಚತುವರ್ೇದಿಯವರು ಆರ್ಯ ಸಮಾಜದ ಕೆಲಸವೇ ತಮ್ಮ ಕೆಲಸವಾಗಿ ಮಾಡಿಕೊಂಡು ದುಡಿದವರು. ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಸಾವಿರಾರು ಮುಸಲ್ಮಾನರು ಮತ್ತು ಕ್ರೈಸ್ತರು ಇವರಜೊತೆ ಕೈಜೋಡಿಸಿದರು, ಹಿಂದೂವಾಗಿ ಬದಲಾಗುತ್ತೀವೆಂದರೆ, ಆದರೆ ಅದರಿಂದಾದ ಅವಾಂತರಗಳೆ ಹೆಚ್ಚು ಎಂದು ಅರಿತಾಗ ಗಾಂಧೀಜಿಯವರ ಮಾರ್ಗವೆ ಸೂಕ್ತವೆನಿಸಿ ಮತ ಪರಿವರ್ತನೆಗಿಂತ, ಮನ ಪರಿವರ್ತನೆ ಉತ್ತಮವೆಂದು ಹಾಗೂ ಹೆಸರು, ವೇಷ-ಭೂಷಣದಲ್ಲಿ ಬದಲಾವಣೆ ಬೇಕಾಗಿಲ್ಲ, ಯಾರಲ್ಲಿ ನಿನಗೆ ನಂಬಿಕೆಯಿದೆಯೊ ಅವರನ್ನು ನೀನು ಪೂಜಿಸು ಎಂದು ಸಾರಿದರು. ಇವರು ಯಾವುದನ್ನು ಕೇವಲ ಹೇಳಿಕೊಳ್ಳದೆ ಮಾಡಿತೋರಿಸುತ್ತಿದ್ದರು. ಇದಕ್ಕೊಂದು ಉದಾಹರಣೆ, ಬ್ರಹ್ಮಚಾರಿಯಾಗಿದ್ದ ಸುಧಾಕರರು ಹಿಂದುಳಿದ ವರ್ಗದಲ್ಲಿದ್ದ ಒಬ್ಬ ಹುಡುಗನನ್ನು ದತ್ತು ತೆಗೆದುಕೊಂಡು ಅವನಿಗೆ ಆರ್ಯಮಿತ್ರ ಎಂದು ಹೆಸರಿಟ್ಟು ದೊಡ್ಡ ಐ.ಎ.ಎಸ್. ಅಧಿಕಾರಿಯಾಗುವಂತೆ ಬೆಳಸಿದರು. ಈಗ ಅವರ ಮೊಮ್ಮಕ್ಕಳ ಜೊತೆಯಲ್ಲೆ ಕಾಲ ಸಾಗಿಸುತ್ತಿದ್ದಾರೆ.
ಗಾಂಧೀಜಿ ಜೊತೆಗಿನ ಜಟಾಪಟಿ ಹಾಗೂ ಕೊನೆದಿನ...:
ಗಾಂಧೀಜಿ ಜೊತೆ ಹುಬ್ಬಳ್ಳಿಗೆ ಬಂದಿದ್ದ ಸುಧಾಕರರಿಗೆ ಎದೆನೋವು ಕಾಣಿಸಿಕೊಂಡಾಗ ಡಾ.ದೇಶಪಾಂಡೆಯವರು ರೂ.16ರ ಇಂಜೆಕ್ಷನ್ ಕೊಡಬೇಕೆಂದಾಗ, ಹಿಂದು-ಮುಂದು ನೋಡದೆ ಕಸ್ತೂರ ಬಾ ಫಂಡಿನಿಂದ ದುಡ್ಡು ತೆಗೆದು ಕೊಟ್ಟಿದ್ದರು. ಇದರಿಂದ ಕುಪಿತರಾದ ಗಾಂಧಿ, ಹೆಂಡತಿ ಮೇಲೆ ಕಿರುಚಾಡಿದ್ದರು. ಆಗ ಸುಧಾಕರರು ಸಂಜೆಯೊಳಗೆ ಫಂಡಿಗೆ 150ರೂಗಳನ್ನು ಸಂಗ್ರಹಿಸಿಕೊಡುವುದಾಗಿ ಹೇಳಿ ಹಾಗೆಯೇ ನಡೆದುಕೊಂಡರು. ಆನಂತರ ಸುಧಾಕರರು ಗಾಂಧೀಜಿಗೆ, ನನ್ನ ಜೀವಕ್ಕಿಂತ ನಿಮಗೆ 16ರೂಪಾಯಿ ಹೆಚ್ಚಾ...??ಎಂದು ಕೇಳಿದಾಗ, ಗಾಂಧೀಜಿ- ಅದು ಹಾಗಲ್ಲ....ಎಂದು ಸಮಜಾಯಸಿಕೊಟ್ಟಿದ್ದರು.
ಸತ್ಯಾಗ್ರಹದ ಸಂದರ್ಭದಲ್ಲಿನ ಚಚರ್ೆಯನ್ನು ಅವರ ಮಾತಿನಲ್ಲೇ ಕೇಳಬೇಕು...ಆಗ ಉಪವಾಸದ ಬಗೆಗೆ ಚಚರ್ೆಗಳಾಗುತ್ತಿತ್ತು. ನನ್ನ ಪ್ರಕಾರ ಬೇರೆಯವರಿಗೆ ಹೇಗೆ ಹಿಂಸೆಕೊಡುವುದು ತಪ್ಪೊ ಹಾಗೇ, ತಮಗೆ ತಾವೇ ಹಿಂಸಿಸಿಕೊಳ್ಳುವುದೂ ತಪ್ಪು ಎಂದೆ. ಆಗ ಗಾಂಧೀಜಿ, ನೀನು ವೇದ ಸ್ಪೆಶಲಿಸ್ಟ್, ನಾನು ಉಪವಾಸದ ಸ್ಪೆಶಲಿಸ್ಟ್ ಎಂದರು. ಆದರೆ ನಾನು ಯಾವಾಗಲೂ ಅವರ ಎದುರಿಗೇ ಊಟ ಮಾಡುತ್ತಿದ್ದೆ, ಅವರನ್ನು ರೇಗಿಸಲು. ನಾನಂತು ಯಾವತ್ತೂ ಉಪವಾಸ ಇರಲಿಲ್ಲ. ಹಾಗೂ ಗಾಂಧೀಜಿಯವರೆ ಹೇಳಿದ ಹಾಗೆ ಅವರ ಒಂದು ಹೊತ್ತಿನ ಊಟಕ್ಕೆ 1ರೂಪಾಯಿ 75ಪೈಸೆ ಖಚರ್ಾಗುತ್ತಿತ್ತು. ಆದರೆ, ನನ್ನ ಊಟಕ್ಕೆ ಕೇವಲ ಆರು ಆಣೆಯಾಗುತ್ತಿತ್ತು. ಇದನ್ನು ಮುಂದಿಟ್ಟು ಗಾಂಧೀಜಿಯವರಿಗೆ, ತ್ಯಾಗಮಯಿಯಾಗಿರೋ ನೀವು ಇಷ್ಟೊಂದು ತಿನ್ನೋದು ಯಾಕೆಂದು ಕಿಚಾಯಿಸುತ್ತಿದ್ದೆ. ಆದರೆ, ನನ್ನನ್ನು ಬಿಟ್ಟು ಅವರು...ಅವರನ್ನು ಬಿಟ್ಟು ನಾನು ಇರುತ್ತಿರಲಿಲ್ಲ. ವಿಪಯರ್ಾಸವೆಂದರೆ, ಸೆರೆಮನೆ ವಾಸದಲ್ಲಿ ನಾನು ಒಳಗಿದ್ದಾಗ ಅವರು ಹೊರಗೆ, ನಾನು ಹೊರಗಿದ್ದಾಗ ಅವರು ಒಳಗಿರುತ್ತಿದ್ದರು. ಅವರು ವೇದ-ಶಾಸ್ತ್ರಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಿರಲಿಲ್ಲ. ಆದಕಾರಣ, ಅವರ ಜೊತೆಗೆ ಚಚರ್ೆಗೆ ಬರುವವರಲ್ಲಿ ಮಾತನಾಡಲು ನನ್ನನ್ನು ಸೂಚಿಸುತ್ತಿದ್ದರು.
ಗಾಂಧೀಜಿಯವರು ಕೊಲೆಯಾಗುವ ದಿನದಂದು ಬೆಳಗ್ಗಿನಿಂದ ಜೊತೆಯಲ್ಲೆ ಇದ್ದ ಚತುವರ್ೇದಿಯವರು ಸಂಜೆ ಐದು ಗಂಟೆಗೆ ತಲೆನೋವೆಂದು ಹೇಳಿ, ಬಿಲರ್ಾ ಹೌಸ್ನ ಹಿಂದೆಯೇ ಇದ್ದ ಸಮಾಜಕ್ಕೆ ತೆರಳಿ ಒಳಗೆ ಕಾಲಿಡುತ್ತಿದ್ದಂತೆ ಪೋನಿನ ಸದ್ದು ಕೇಳಿತು. ಆಗ ತಾನೆ ಮಾತನಾಡಿಸಿ ಬಂದಿದ್ದ ಬಾಪು ಇನ್ನಿಲ್ಲ ಎಂಬುದನ್ನು ಅವರಿಗೆ ನಂಬಲಾಗಲಿಲ್ಲ. ಆಗ ಸಮಯ ಸರಿಯಾಗಿ 5:30.
ಬ್ರಿಟೀಷರು...:
ಚತುವರ್ೇದಿಯವರು ಕಂಡಂತೆ, ವೈಸ್ರಾಯ್ಗಳು ಯಾರೂ ಕೆಟ್ಟವರಾಗಿರಲಿಲ್ಲ. ಅವರೆಲ್ಲ ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಬಂದಿದ್ದ ಬ್ರಿಟೀಷ್ ಕೆಲಸಗಾರರಷ್ಟೆ. ಅವರ ದೇಶದಲ್ಲಿ 500 ಸಿಕ್ಕರೆ, ಇಲ್ಲಿ 10000 ಸಿಗುತ್ತಿತ್ತು. ಏಕೆಂದರೆ, ಇಲ್ಲಿಯದು ನಮ್ಮವರ ದುಡ್ಡು ಮತ್ತು ಅವರಿಗೆ ಬಿಟ್ಟಿ. ವೈಸ್ರಾಯ್ಗಳಿಗೆ ಭಾರತೀಯರು ಸ್ವತಂತ್ರರಾಗಿರಬೇಕೆಂಬ ಅಭಿಲಾಷೆಯಿದ್ದರೂ, ಅದನ್ನ ಸರಕಾರದ ಮುಂದೆ ಹೇಳುವಂತಿಲ್ಲ. ಹೇಳಿದರೆ ಕೆಲಸ ಕಳೆದುಕೊಳ್ಳುವ ಭಯ. ಎಲ್ಲ ವೈಸ್ರಾಯ್ಗಳು ಚತುವರ್ೇದಿಯವರೊಂದಿಗೆ ಗೌರವದಿಂದಲೇ ನಡೆದುಕೊಂಡಿದ್ದಾರೆ ಹಾಗೂ ಇವರನ್ನು ಕಂಡೊಡನೆ 'ಆಯಿಯೇ...ಆಯಿಯೇ..'ಎಂದು ನಮಸ್ಕರಿಸುತ್ತಿದ್ದರು.
ಶತಕ ವೀರನ ರಹಸ್ಯ...:
ಇವರ ಊಟದಲ್ಲಿ ಅತಿರೇಕವಿಲ್ಲ. ಉಪ್ಪು, ಖಾರ ಎಲ್ಲವೂ ಹಿತ-ಮಿತವಾಗಿರುತ್ತದೆ. ಮುಖ್ಯವಾಗಿ ಸಾತ್ವಿಕ ಆಹಾರ ಸೇವನೆ ಜೊತೆಗೆ ಹಸಿವಿಗಿಂತ ತುತ್ತು ಕಡಿಮೆ ತಿನ್ನುವ ಹವ್ಯಾಸ ಚತುವರ್ೇದಿಯವರನ್ನು ಓಡಾಡುವ ಸ್ಥಿತಿಯಲ್ಲಿಟ್ಟಿದೆ.
ದಿನನಿತ್ಯ ಬೆಳಿಗ್ಗೆ 3:30ಕ್ಕೆ ಎದ್ದು ಕೈಕಾಲು-ಮುಖ ತೊಳೆದು ಸುಮಾರು ಎರಡು ಗಂಟೆಗಳ ಕಾಲ ಧ್ಯಾನ. ಆನಂತರ ಸ್ನಾನ, ಹೋಮ, ಹವನ, ಪೂಜೆ.....7:30ರಿಂದ 8:00ರ ಒಳಗೆ ಒಂದು ಬಾಳೆ ಹಣ್ಣು ಮತ್ತು ಒಂದು ಚೂರು ಬ್ರೆಡ್. ಮುಂದೆ, ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳ ಓದು. ಮನೆಗೆ ಬಂದವರೊಂದಿಗೆ ಚಚರ್ೆ...ಸುಮಾರು 11:30ರ ವೇಳೆಗೆ ಸ್ವಲ್ಪ ಆಹಾರ, ಊಟದ ನಂತರ ವಿಶ್ರಾಂತಿ. ಮಧ್ಯಾಹ್ನದ ವೇಳೆಗೆ ವೇದಗಳ ವಿಷಯವನ್ನು ಚಚರ್ಿಸಲು ಬರುವ ವಿದ್ಯಾಥರ್ಿಗಳು. ಸಂಜೆಯ ಹೊತ್ತಿಗೆ ಮನೆಯಲ್ಲೆ ತಿರುಗಾಟ. ದಿನಕ್ಕೆ ಮೂರು ಬಾರಿ ಟೀ ಕುಡಿಯುವುದು ಇವರ ಅಭ್ಯಾಸ. ಏಳು ಗಂಟೆಯಷ್ಟರಲ್ಲಿ ಒಂದು ಬಾಳೆ ಹಣ್ಣಿನ ಊಟ ಮುಗಿಸಿ ದೀಪ ಆರಿಸುತ್ತಾರೆ. ಆದರೆ, ನಿದ್ರೆಗೆ ಜಾರುವುದು ರಾತ್ರಿ 12ಕ್ಕೆ.
ಮೂರು ದೊಡ್ಡ-ದೊಡ್ಡ ರೈಲು ದುರಂತಗಳಲ್ಲಿ ಒಂದು ಗೀಚುಗೆರೆಯೂ ಆಗದಂತೆ ಪಾರಾಗಿ ಬಂದ ಇವರಿಗೆ ಬೆಂಗಳೂರಿನ ಆಟೋ ಅಪಘಾತ ತಮ್ಮ ಕಾಲನ್ನು ಮುರಿಸಿ ಹೊರಗೆ ಓಡಾಡದಂತೆ ಮಾಡಿದೆ.
ಪ್ರಶ್ನೆಗಳಿಗೆ ಚತುವರ್ೇದಿಯವರ ಉತ್ತರಗಳು....;
ಹವ್ಯಾಸ....
ಬೆಕ್ಕು ಸಾಕೋದು ಇಷ್ಟ.
ಜಾತಿಗಳ ಬಗ್ಗೆ ನಿಮ್ಮ ಮಾತು...
ಇರೋದು ಒಂದೆ, ಅದು ಮಾನವ ಜಾತಿ. ಆದರೆ, ಇದನ್ನು ಸಾಧಿಸೋದು ಸುಲಭವಲ್ಲ.
ನಿಮ್ಮ ವಿರೋಧಿಗಳು...
ಯಾರೂ ಇಲ್ಲ. ನೆಹರೂಗೂ ನನಗೂ ತತ್ವಗಳ ವಿಚಾರವಾಗಿ ಆಗುತ್ತಿರಲಿಲ್ಲ.
ನಿಮ್ಮ ಸ್ನೇಹಿತರು...
ಈಗ ಯಾರೂ ಇಲ್ಲ. ಎಲ್ಲಾ ಮೇಲಿದ್ದಾರೆ....ಕನರ್ಾಟಕದಲ್ಲಿ, 'ರಾಮಕೃಷ್ಣ ಹೆಗಡೆ, ಗಂಗಾಧರ್ ರಾವ್, ದೇಶಪಾಂಡೆ, ಆರ್.ಆರ್.ದಿವಾಕರ್, ಕೆ.ಹನುಮಂತಯ್ಯ, ಕೆ.ಕೆ.ಭಾಷಂ'...
ಅಹಿಂಸೆ ಬಗ್ಗೆ ನಿಮ್ಮ ಅಭಿಪ್ರಾಯ...
ಅಹಿಂಸೆಯನ್ನು ಪಾಲಿಸೋದು ತುಂಬಾ ಕಷ್ಟ. ನಾನು ಮುಂಬೈನಲ್ಲಿ ಗಾಂಧೀಜಿ ಜೊತೆಗಿದ್ದಾಗ, ಒಬ್ಬ ಇಂಗ್ಲೀಷಿನವನು ನನ್ನ ಮೇಲೆ ಪಿಸ್ತೂಲಿನಿಂದ ಗುರಿ ಇಟ್ಟಿದ್ದ. ನಾನು ಉದ್ದನೆಯ ಕೋಲಿನಿಂದ ಅವನ ತಲೆಗೆ ಬಾರಿಸಿದ್ದೆ. ಅವನು ಓಹ್..! ಗಾಡ್...ಎಂದು ಕೆಳಕ್ಕೆ ಬಿದ್ದ.
ರಾಜಕೀಯ ಪರಿಸ್ಥಿತಿ.....
ಆಗ ತ್ಯಾಗಿಗಳಿದ್ದರು, ಈಗ ಬರೀ ಭೋಗಿಗಳಿದ್ದಾರೆ. ಕಾದಿ ಬಟ್ಟೆ ಕೇವಲ ತೋರ್ಪಡಿಕೆಯಷ್ಟೆ.
ಸ್ವತಂತ್ರ ಮತ್ತು ಪ್ರಜಾಪ್ರಭುತ್ವ....
ಮನುಷ್ಯನಿಗೆ ಶರೀರಕ್ಕಿಂತ ಆತ್ಮವು ಮುಖ್ಯ, ಶರೀರದ ಸುಖಕ್ಕಿಂತ ಆತ್ಮಕ್ಕೆ ಯಾವುದು ಸರಿಯೆನಿಸುತ್ತದೊ ಅದನ್ನು ಮಾಡುವುದೇ ಸ್ವತಂತ್ರ.
ತನ್ನಿಂದ ಬೇರೆಯವರಿಗೆ ಸಹಾಯವಾಗದಿದ್ದರೂ, ತೊಂದರೆಯಾಗಬಾರದು. ನಮ್ಮ ಅನ್ನವನ್ನು ನಾವೇ ಸಂಪಾದಿಸಬೇಕೆಂಬುದು ಪ್ರಜಾಪ್ರಭುತ್ವ.
ಜೀವನ ಅಂದರೆ....
ನಾವು ಎಲ್ಲಿರುತ್ತೇವು ಅಲ್ಲಿ ಅವರಂತೆ ಇರೋದು, ಜೊತೆಯಲ್ಲಿ ಬೆರೆತು ಬಾಳೋದು ಜೀವನ.
ಯುವಕರಿಗೊಂದು ಕರೆ....
ಒಂದು ಕ್ರಾಂತಿಯಿಂದ ಸ್ವರಾಜ್ಯವಾಯ್ತು. ಆದರೆ, ಯುವಕರಿಂದ ಮತ್ತೊಂದು ಕ್ರಾಂತಿಯಾಗಬೇಕಾಗಿದೆ. ಆಗ ಮಾತ್ರವೇ ಸ್ವರಾಜ್ಯಕ್ಕೆ ಅರ್ಥ ಸಿಗೋದು. ಯುವಕರ ಕೈಗೆ ಅಧಿಕಾರ ಸಿಗಬೇಕು, ಆಗಲೇ ಬದಲಾವಣೆ ಸಾಧ್ಯ.
ಎದೆಯಾಳದ ನಂಬಿಕೆ....:
ಎಲ್ಲರೂ ತನ್ನ ಹಾಗೇ ಸಮಾನರು, ತಾನು ಒಳ್ಳೆಯದನ್ನೇ ಕೇಳಬೇಕು, ಒಳ್ಳೆಯದನ್ನೇ ಆಡಬೇಕೆಂಬುದೇ ಆತ್ಮೋ ಸರ್ವಭೂತೇಶು. 'ಮತವಾದಿ ಶತ್ರುಗಳಿಗೆ ಅವಕಾಶ ಕೊಡ್ತಾನೆ, ಆಧ್ಯಾತ್ಮವಾದಿಗೆ ಶತ್ರುಗಳೇ ಇರೋದಿಲ್ಲ'......-ಸುಧಾಕರ ಚತುವರ್ೇದಿಯವರ ಈ ನಂಬಿಕೆ, ಮನಸ್ಸು ಬಿಚ್ಚಿ ನಗುವ ನಗು 'ಹಸನ್ಮುಖಿ ಸದಾಸುಖಿ' ಅನ್ನೋ ಮಾತಿಗೆ ಪುಷ್ಠಿ ನೀಡುವುದರ ಜೊತೆಗೆ ನಮ್ಮ ಜೀವನಕ್ಕೆ ಆದರ್ಶವಾಗಿ ನಿಲ್ಲುತ್ತದೆ.








ಕಣ್ಣಿಗೆ ಕಂಡ ಜೀವಿಗಳು
ನಾವೀಗ ಅನ್ಯ ಗ್ರಹಗಳಲ್ಲಿನ ಅನ್ಯ ಜೀವಿಗಳ ಹುಡುಕಾಟದಲ್ಲಿದ್ದೇವೆ. ಆದರೆ ನಮ್ಮ ಭೂಮಿಯಲ್ಲೇ ಇರುವ, ನಮ್ಮ ಸುತ್ತ-ಮುತ್ತಲಿನ ಪರಿಸದಲ್ಲೇ ಇರುವ ಎಷ್ಟೊ ಜೀವಿಗಳ ಪರಿಚಯವೇ ನಮಗಿಲ್ಲ. ಈ ಮನುಷ್ಯನ ಆರ್ಭಟದಲ್ಲಿ ಅಂತಹ ಪ್ರಾಣಿಗಳೇನಾದರು ಉಳಿದಿವೆಯಾ...? ಅನ್ನೋ ಸಂಶಯ ಕಾಡುವುದು ಸಹಜ. ಒಡಮೂಡುವ ಇಂತಹ ಪ್ರಶ್ನೆಗಳ ಬೆನ್ನೇರಿ ಹೊರಟ ವಾಷಿಂಗ್ಟನ್ ಮೂಲದ "ಕಂಸರ್ವೇಶನ್ ಇಂಟರ್ನ್ಯಾಶನಲ್"ನ ತಂಡ ಆಸ್ಟ್ರೇಲಿಯಾದಲ್ಲಿರುವ 'ಪಾಪುವ ನ್ಯೂ ಗಿನಿಯ'ದ ಫೆಸಿಫಿಕ್ ದ್ವೀಪಗಳಲ್ಲಿ ಅಲೆದಾಡಿ ಸುಮಾರು 200ಕ್ಕೂ
ಹೆಚ್ಚಿನ ವಿಸ್ಮಯಕಾರಿ ಜೀವಿಗಳನ್ನು ಪತ್ತೆ ಹಚ್ಚಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 1590ಮೀಟರಗಳಷ್ಟು ಎತ್ತರದಲ್ಲಿ ಗುಡ್ಡ
ಗಾಡಿನಿಂದ ತುಂಬಿರುವ ದ್ವೀಪ 'ಪಾಪುವ ನ್ಯೂ ಗಿನಿಯ'. ಅಮೇಜಾನ್ ಹಾಗೂ ಕಾಂಗೋ ಬೇಸಿನ್ನ ಕಾಡುಗಳಂತೆ ಇದೂ ಕೂಡ ಸದಾ ಮಳೆಯಿಂದ ಕೂಡಿದ ಪ್ರದೇಶ. ಈ ದಟ್ಟ ಕಾಡಿನ ಒಳಗೆ ಪ್ರವೇಶಿಸುವುದೇ ಒಂದು ಸಾಹಸ, ಕ
ಡಿದಾದ ರಸ್ತೆಗಳನ್ನು ಹುಡುಕಿಕೊಂಡು ಕಾಲ್ನಡಿಗೆಯಲ್ಲೆ ನಡೆಯಬೇಕು ಅಥವ ಹೆಲಿಕಾಪ್ಟರ್ನಲ್ಲಿ ಇಳಿಯಬೇಕು. ಇಂತಹ ಜಾಗದಲ್ಲಿ ಪ್ರಾಣಿತಜ್ಞನರ ಕಣ್ಣಿಗೆ ಕಂಡದ್ದು "ಬಿಳಿ ಬಾಲದ ಇಲಿ, ಉದ್ದನೆ ಮೂತಿಯ ಪುಟ್ಟ ಕಪ್ಪೆ, ಗುಲಾಬಿ ಬಣ್ಣದ ಕಣ್ಣುಗಳುಳ್ಳ ಮಿಡತೆ....ಹೀಗೆ ಅನೇಕ ಸಸ್ತನಿಗಳು, ಕೀಟಗಳು, ಉಭಯಚರಗಳು ಸೇರಿದಂತೆ 200 ವಿ
ವಿಧ ಜೀವಿಗಳ ಪಟ್ಟಿ ಸಿದ್ದವಾಗಿವೆ. ಸಾಮಾನ್ಯವಾಗಿ ಈ ಎಲ್ಲಾ ಪ್ರಾಣಿಗಳೂ ಈಗಿರುವ ಕಪ್ಪೆ, ಮಿಡತೆ, ಇಲಿಯಂತೆ ಕಂಡರೂ 'ಜೀವೋತ್ಪತ್ತಿ ಮೂಲದ' ಪರೀಕ್ಷೆಗಳಿಂದ ತಿಳಿದು ಬಂದಿರುವುದೇನೆಂದರೆ, ಈ ಎಲ್ಲಾ ಜೀವಿಗಳೂ
ಇದುವರೆಗೂ ಗೊತ್ತಿರುವ ಸಂತತಿಗೆ ಸೇರಿಲ್ಲವೆಂಬುದು.
ಬಿಳಿ ಬಾಲದ ಇಲಿಯ ಮೈಬಣ್ಣ ಕಂದು ಹಾಗೂ ನೋಡಲು ಸುಂದರವಾ
ಗಿದ್ದು, ಸಣ್ಣ ದೇಹವನ್ನು ಹೊಂದಿದೆ. ಇಲ್ಲಿ ವಿಶಿಷ್ಟವೆನಿಸುವುದು ಹೆಬ್ಬರಳಿನ ಉಗುರಿನ ಗಾತ್ರದ ಸುಮಾರು 2ಸೆಂಟಿ ಮೀಟರ್(0.8ಇಂಚು) ಅಳತೆಯ ಉದ್ದಮೂಗಿನ ಕಪ್ಪೆ. ಇದೇ ರೀತಿಯ ಇನ್ನೂ ಕೆಲವು ಕಪ್ಪೆಗಳ ಮೈಮೇಲೆ ಹಳದಿ ಬಣ್ಣದ ಮಚ್ಚೆಗಳು ಅಚ್ಚು ಹೊತ್ತಿದಂತಿದೆ. ಇಲ್ಲಿ ಕಂಡು ಬಂದಿರುವ ಪ್ರಾಣಿಗಳ ಪೈಕಿ 24
ಜಾತಿಯ ಕಪ್ಪೆಗಳು, ಯೋಧ ಎಂಬ ಹೆಸರಿನ ಬಾವಲಿ ಹಾಗೂ ಇರುವೆ, ಚಿಟ್ಟೆ, ಜೇಡಗಳು ಸೇರಿದಂತೆ 100ಕ್ಕೂ ಹೆಚ್ಚಿನ ಕೀಟಗಳು.
ಪ್ರಾಣಿತಜ್ಞರ ಪ್ರಕಾರ ಈ ದ್ವೀಪ ಪ್ರದೇಶದಲ್ಲಿ ಎಲ್ಲೇ ಹೋದರೂ ಹೊಸ ಜಾತಿಯ ಅ
ಥವಾ ಮಾನವರಿಗೆ ಅಷ್ಟು ಪರಿಚಿತವಲ್ಲದ ಪ್ರಾಣಿಗಳು ಕಣ್ಣಿಗೆ ಬೀಳುವುದು ಖಂಡಿತ. ಆದರೆ ಆ ಸ್ಥಳಕ್ಕೆ ತೆರಳಿ ಪುನಃ ಮರಳಿಬರುವುದು ಕಷ್ಟಸಾಧ್ಯವೇ ಸರಿ. ಈ ಜಾಗವು "ಜೈವಿಕ ವೈವಿಧ್ಯಗಳ" ಸಂಗ್ರಹವೆಂದೇ ಹೆಸರು ವಾಸಿ. ನಮ್ಮ ನಾಡಿನಲ್ಲೂ ಇಂತಹ ಎಷ್ಟೋ ಅಪರೂಪದ ಜೀವಿಗಳು ನಮಗೆ ಗೋಚರಿಸುವ
ಮೊದಲೇ ಗಣಿಗಾರಿಕೆಯ ಹೆಸರಿನ್ನಲ್ಲಿ ಕಾಡಿನೊಂದಿಗೆ ಸರ್ವನಾಶವಾಗುವ ಹಂತದಲ್ಲಿದೆ.





;;